ಬಿಜೆಪಿಯ ರಾಜ್ಯ ಕಾರ‍್ಯಕಾರಿಣಿ ಸಭೆಯಲ್ಲಿ ಮುಂದಿನ ಚುನಾವಣೆಗೆ ರಣತಂತ್ರ ಬಗ್ಗೆ ಚರ್ಚೆ – ಬೈರತಿ ಬಸವರಾಜ್

ದಾವಣಗೆರೆ: ಬಿಜೆಪಿಯ ರಾಜ್ಯ ಕಾರ‍್ಯಕಾರಿಣಿ ಸಭೆಯಲ್ಲಿ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್, ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ವಿಧಾನಸಭೆ ಉಪ ಚುನಾವಣೆ ರಣತಂತ್ರದ ಬಗ್ಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷ ಗೆಲುವು ಸಾಧಿಸಲು ಪಕ್ಷದ ಸಾಧನೆಗಳನ್ನು ಜನರಿಗೆ ತಲುಪಿಸಲು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮುಟ್ಟಿಸುವ ಕುರಿತು ರಾಜ್ಯ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಸಲಾಗುವುದು ಎಂದರು.
ಮುಖ್ಯಮAತ್ರಿ ಬೊಮ್ಮಯಿ ಶ್ಯಾಡೋ ಸಿಎಂ ಎಂಬುದಕ್ಕೆ ಖಡಕ್ಕಾಗಿ ಪ್ರತಿಕ್ರಿಯಿಸಿದ ಭೈರತಿ, ಸಿಎಂ ಬಸವರಾಜ್ ಬೊಮ್ಮಾಯಿ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದು, ಅವರು ಇನ್ನೊಬ್ಬರ ಪಡಿ ಅಚ್ಚಲ್ಲ. ಸಿಎಂ ಕೈ ಬಲವಾಗಿದೆ ಅದನ್ನು ಬಲಪಡಿಸುವ ಕೆಲಸ ಎಲ್ಲಾ ಸಚಿವರು, ಶಾಸಕರುಗಳು ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಮಾಜಿ ಸಿಎಂ ಬಿಎಸ್‌ವೈ ಪಕ್ಷವನ್ನು ತಳಹಂತದಿAದ ಬೆಳೆಸಿದವರು. ಅವರು ನಮ್ಮ ನಾಯಕರು. ಅವರ ನೆರಳಿನಲ್ಲಿ ಸಿಎಂ ಬೊಮ್ಮಾಯಿ ಇಲ್ಲ. ಬೊಮ್ಮಾಯಿ ಅವರು ಕೂಡ ಸಮರ್ಥ ನಾಯಕತ್ವ ಹೊಂದಿದ್ದು, ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಪಕ್ಷದ ಸಂಘಟನೆಗೆ ಬಿಎಸ್‌ವೈ ಮತ್ತು ಬೊಮ್ಮಾಯಿ ಅವರು ಪ್ರವಾಸ ಮಾಡುವುದರಲ್ಲಿ ತಪ್ಪಿಲ್ಲ. ಅದನ್ನು ತಪ್ಪಾಗಿ ಭಾವಿಸುವ ಅಗತ್ಯವಿಲ್ಲ. ಅವರ ಬಗ್ಗೆ ಗೌರವವಿದೆ. ಅಭಿವೃದ್ದಿಯೇ ನಮ್ಮ ಸರ್ಕಾರದ ಗುರಿಯಾಗಿದ್ದು, ಅದೇ ನಿಟ್ಟಿನಲ್ಲಿ ಸರ್ಕಾರ ಸಾಗುತ್ತಿದೆ ಎಂದರು.