BlackBucks: ಹಾವೇರಿ 112 ಪೋಲೀಸರ ಕಾರ್ಯಾಚರಣೆ|| 2 ಹೆಣ್ಣು ಕೃಷ್ಣಮೃಗಗಳನ್ನ ಬೇಟೆಯಾಡಿದ್ದ 5 ಜನರ ಬಂಧನ

ಹಾವೇರಿ: ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ಇ ಆರ್ ಎಸ್ ಎಸ್ ಪೊಲೀಸ್ ರ ಸಮಯ ಪ್ರಜ್ಞೆಯಿಂದ ಐದು ಜನ ಕೃಷ್ಣಮೃಗ ಭೇಟೆಗಾರರನ್ನ ಬಂಧಿಸಲಾಗಿದೆ.
ಇಂದು ಗಸ್ತಿನಲ್ಲಿದ್ದ ಸಮಯದಲ್ಲಿ ಒಂದು ಬೊಲೆರೊ ಪಿಕ್ ಆಪ್ ವಾಹನದಲ್ಲಿ ಕೃಷ್ಣ ಮೃಗ ಭೇಟೆಯಾಡಿದ್ದ ಮಾಹಿತಿ ದೊರೆತು ತಪಾಸಣೆ ಮಾಡಿದಾಗ, ವಾಹನದಲ್ಲಿ ನಾಡ ಬಂದೂಕು ಸೇರಿದಂತೆ ಮೃತ ಎರಡು ಹೆಣ್ಣು ಕೃಷ್ಣಮೃಗಗಳು ಪತ್ತೆಯಾಗಿದೆ.
ಕಾಡಿನಲ್ಲಿ ಕೃಷ್ಣಮೃಗ ಭೇಟೆಯಾಡಿ ಅಕ್ರಮವಾಗಿ ಸಾಗಿಸುತ್ತಿದ್ದ 5 ಜನರ ತಂಡವನ್ನ ಬಂಧಿಸಿ ಅವರಿಂದ ಎಸ್ ಬಿ ಬಿ ಎಲ್ ಗನ್ ಕಾರ್ಟಿಜ್, ಮೋಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಹಾವೇರಿ ಎಸ್ ಪಿ ಹನುಮಂತರಾಯ ಟ್ವಿಟರ್ ನಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.