ಮರಳು ಮಾರಾಟಗಾರರ ಸಂಘದಿಂದ ಪುನೀತ್ ಸ್ಮರಣಾರ್ಥ 100 ಕ್ಕೂ ಹೆಚ್ಚು ಅಭಿಮಾನಿಗಳಿಂದ ರಕ್ತದಾನ ಹಾಗೂ ಅನ್ನದಾಸೋಹ

ದಾವಣಗೆರೆ: ಕರ್ನಾಟಕ ರಾಜ್ಯ ಮರಳು ಮಾರಾಟಗಾರರ ಸಂಘದ ವತಿಯಿಂದ ದಾವಣಗೆರೆಯಲ್ಲಿ ನಟ ದಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಮರಣೋತ್ಸವದ ಅಂಗವಾಗಿ ಇಂದು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ನಗರದ ಶಾಮನೂರು ಬ್ರಿಡ್ಜ್ ಬಳಿ 2000 ಕ್ಕೂ ಹೆಚ್ಚು ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗೋಧಿ ಪಾಯಸ, ಲಾಡು, ಪಲ್ಯ,ಕೊಸಂಬರಿ,ಅನ್ನ ಸಾರು ಹಾಗೂ ನೀರಿನ ಬಾಟಲ್ ನೀಡಲಾಯಿತು. ಬಂದಂತಹ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿತ್ತು.
ದಾವಣಗೆರೆ ಜಿಲ್ಲಾ ಮರಳು ಮಾರಾಟಗಾರರ ಸಂಘದ 100 ಕ್ಕೂ ಹೆಚ್ಚು ಪದಾಧಿಕಾರಿಗಳು ರಕ್ತದಾನ ಮಾಡಿದರು.