ಜಿಎಂ ವಿಶ್ವವಿದ್ಯಾಲಯ, ಜಿಎಂ ಸಂಘಟನೆ ಗುಂಪಿನಿಂದ ರಕ್ತದಾನ ಶಿಬಿರ “ಪ್ರತಿಯೊಬ್ಬ ರಕ್ತದಾನಿಯೂ ಜೀವ ರಕ್ಷಕ” : ಜಿ.ಎಂ. ಸಿದ್ದೇಶ್ವರ
ದಾವಣಗೆರೆ : ಶ್ರೇಷ್ಠವಾಗಿರುವ ರಕ್ತದಾನದ ಸತ್ಕಾರ್ಯವನ್ನು ಉದ್ದೇಶಿಸಿ ಪ್ರತಿ ವರ್ಷದಂತೆ ಈ ವರ್ಷವೂ ಜಿ.ಎಂ. ಸಂಸ್ಥೆಯು ಡಾ. ಜಿ. ಮಲ್ಲಿಕಾರ್ಜುನಪ್ಪ ಮತ್ತು ಜಿ.ಎಂ. ಹಾಲಮ್ಮ ಅವರ ಪುಣ್ಯ ಸ್ಮರಣೆ ನಿಮಿತ್ತ ಇದೇ ಶನಿವಾರ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.ಸಮಾಜದ ಜೀವ ರಕ್ಷಣೆಯನ್ನು ಉದ್ದೇಶದಲ್ಲಿಟ್ಟುಕೊಂಡು ನಡೆಸಿದ ಈ ಕಾರ್ಯಕ್ಕೆ ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ಜಿ.ಎಂ. ವಿಶ್ವವಿದ್ಯಾವಿದ್ಯಾಲಯ ಮತ್ತು ಜಿ.ಎಂ ತಾಂತ್ರಿಕ ಮಹಾವಿದ್ಯಾಲಯದ ಎನ್.ಸಿ.ಸಿ ಘಟಕ ಹಾಗೂ ಎನ್. ಎಸ್. ಎಸ್ ಘಟಕ ಲಯನ್ಸ್ ಕ್ಲಬ್ ಮತ್ತು ಹೆಚ್.ಡಿ.ಎಫ್.ಸಿ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಲಾಯನ್ಸ್ ಕ್ಲಬ್ ವಿದ್ಯಾನಗರ, ಲಾಯನ್ಸ್ ಕ್ಲಬ್ ದಾವಣಗೆರೆ ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕ್ ಪ್ರೈವೇಟ್ ಲಿಮಿಟೆಡ್ ಸಂಘಟನೆಗಳಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅತಿಥಿಗಳಾಗಿ ಜಿ.ಎಂ ಲಿಂಗರಾಜು , ಡಾ. ಎಸ್.ಆರ್. ಶಂಕಪಾಲ್, ಡಾ. ಮಹೇಶಪ್ಪ ಹೆಚ್ .ಡಿ., ಡಾ. ಸುನೀಲ್ ಕುಮಾರ್ ಬಿ.ಎಸ್., ವೈ.ಯು. ಸುಭಾಷ್ ಚಂದ್ರ, ಪ್ರಾಂಚುಪಾಲರಾದ ಡಾ. ಸಂಜಯ್ ಪಾಂಡೆ ಎಂ.ಬಿ , ಡಾ. ಶ್ರೀಧರ್ ಬಿ.ಆರ್., ಡಾ. ಗಿರೀಶ್ ಬೋಳಕಟ್ಟಿ, ಶ್ವೇತಾ ಮರಿಗೌಡರ್, ಲಯನ್ ಎಚ್.ಎಸ್. ಶಿವಕುಮಾರ್, ಲಯನ್ ಮೌನೇಶ್ವರ ಎನ್.ಹೆಚ್., ಲಯನ್ ಸಿ.ಎಚ್., ಲಯನ್ ರವಿಚಂದ್ರ ಎಂ.ವಿ., ಎನ್.ಸಿ.ಸಿ ಅಧಿಕಾರಿ ಡಾ. ಸಂತೋಷ್ ಬಿ.ಎಂ. ಮತ್ತು ಎನ್.ಎಸ್.ಎಸ್ ಅಧಿಕಾರಿ ಮಂಜುನಾಥ ವೈ. ಭಾಗವಹಿಸಿದ್ದರು.
ಶಿಬಿರದಲ್ಲಿ ಕಾಲೇಜಿನ ಅಧ್ಯಾಪಕ ,ಅಧ್ಯಾಪಕಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಎನ್ ಸಿ ಸಿ , ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ರಕ್ತದಾನ ಮಾಡಿದರು .ಕಾರ್ಯಕ್ರಮದಲ್ಲಿ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು.ಈ ಶಿಬಿರದಲ್ಲಿ ರಕ್ತದಾನಿಗಳ ರಕ್ತ ಗುಂಪನ್ನು ಪರಿಶೀಲಿಸಲಾಯಿತು. ಒಟ್ಟು 300ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ರಕ್ತದಾನದಲ್ಲಿ ಭಾಗವಹಿಸಿದರು. ಒಟ್ಟು 300ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಗಿದೆ.