ಯಾದವ ಸಮುದಾಯಕ್ಕೆ ಮೀಸಲಾತಿ ಮತ್ತು ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಫೆ 5 ರಂದು ‘ರಕ್ತ ಪತ್ರ ಚಳುವಳಿ’ – ಬಾಡದ ಆನಂದರಾಜ್

ದಾವಣಗೆರೆ : ಶೋಷಿತ ವರ್ಗ ಗೊಲ್ಲ ( ಯಾದವ ) ಸಮುದಾಯಕ್ಕೆ ಮೀಸಲಾತಿ ಕೊಡಿ ಮತ್ತು ಸಮುದಾಯದ ಏಕೈಕ ಮಹಿಳಾ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರಿಗೆ ಸಚಿವ ಸ್ಥಾನ ನೀಡುವಂತೆ ದಿನಾಂಕ 05/02/2022 ರಂದು ದಾವಣಗೆರೆ ಜಯದೇವ ವೃತ್ತದಲ್ಲಿ ಬೆಳಿಗ್ಗೆ 11;00 ಗಂಟೆಗೆ ಗೊಲ್ಲ ಸಮೂದಾಯದ ಜಗದ್ಗುರುಗಳಾದ ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಯಾದವ ಮಹಾಸಭ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ರವರ ಅಧ್ಯಕ್ಷತೆಯಲ್ಲಿ ರಕ್ತ ಪತ್ರ ಚಳುವಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯಾದವ ಮಹಾಸಭ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ಈಗಾಗಲೇ ಗೊಲ್ಲ ಸಮಾಜವನ್ನು ಎಸ್ಟಿಗೆ ಸೇರಿಸುವಂತೆ ರಾಜ್ಯ ಸಚಿವ ಸಂಪುಟ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದು ತಕ್ಷಣ ಕೇಂದ್ರ ಸರಕಾರ ಗೊಲ್ಲ ಸಮಾಜವನ್ನ ಎಸ್ಟಿ ಮೀಸಲಾತಿ ಗೆ ಸೇರಿಸಬೇಕು ಮತ್ತು ರಾಜ್ಯದಲ್ಲಿ ಗೊಲ್ಲ ಸಮೂದಾಯದ ಮತ್ತು ಶೋಷಿತ ಸಮೂದಾಯಗಳ ಏಕೈಕ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರಿಗೆ ಸಚಿವ ಸ್ಥಾನ ನೀಡಬೇಕೆಂದು ರಾಷ್ಟ್ರ ಮತ್ತು ರಾಜ್ಯದ ಬಿಜೆಪಿ ವರಿಷ್ಠರಲ್ಲಿ ಒತ್ತಾಯ.

ಹಿರಿಯೂರು ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾದರೂ ಇಡೀ ಯಾದವ ಸಂಕುಲಕ್ಕೆ ಹಿರಿಮೆ ಹೆಮ್ಮೆಯಾಗಿದ್ದಾರೆ.ಪ್ರಾಮಾಣಿಕತೆ, ನಿಷ್ಠೆಗೆ ಮತ್ತೊಂದು ಹೆಸರೇ ಪೂರ್ಣಿಮಾ ಶ್ರೀನಿವಾಸ್ ಅವರು. ಇಂಥ ಪ್ರಬುದ್ಧ ರಾಜಕಾರಣಿಗೆ ಸಚಿವ ಸ್ಥಾನ ಸಿಗಬೇಕೆಂಬುದು ಯಾದವ ಸಮಾಜ ಸೇರಿದಂತೆ ರಾಜ್ಯದ ಶೋಷಿತ ವರ್ಗಗಳ ಒತ್ತಾಸೆಯಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಮೂಲಕವೇ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ನಾವು ಶಾಂತಿಯುತವಾಗಿ ಕೇಳುತ್ತಿದ್ದೇವೆ. ಇದೇ ದಿನಾಂಕ 05 ರ ಶನಿವಾರ ದಾವಣಗೆರೆಯಲ್ಲಿ ‘ರಕ್ತ ಪತ್ರ’ ಚಳುವಳಿ ಹಾಗೂ ಗೋವು ಪೂಜೆ ಮೂಲಕ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒಕ್ಕೂರಲಿನಿಂದ ದ್ವನಿ ಎತ್ತುತ್ತಿದ್ದೇವೆ. ರಾಜ್ಯದಲ್ಲಿ ತಮ್ಮದೇಯಾದ ಅಸ್ತಿತ್ವ ಹೊಂದಿರುವ ಗೊಲ್ಲ ಸಮುದಾಯವನ್ನ ಕಡೆಗಣಿಸುವುದರ ವಿರುದ್ಧ ನಮ್ಮ ಹೋರಾಟ.

ಪಕ್ಷದ ವಿರುದ್ಧ ನಾಯಕರ ವಿರುದ್ಧವಲ್ಲ. ನಮ್ಮ ಹಕ್ಕಿಗಾಗಿ ಸಮಾಜಕ್ಕೆ ನಾವು ಅನಿವವಾರ್ಯತೆಯಿಂದ ಹೋರಾಟ ಮಾಡಲೇಬೇಕಿದೆ. ರಾಜ್ಯದಲ್ಲಿ ಸುಮಾರು 35 ವಿಧಾನಸಭಾ ಕ್ಷೇತ್ರ 5 ಸಂಸದ ಕ್ಷೇತ್ರದಲ್ಲಿ ಗೊಲ್ಲ (ಯಾದವ) ಸಮಾಜವೇ ನಿರ್ಣಾಯಕ ಮತಗಳು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ನಮ್ಮ ಸಮಾಜದ ಮಹತ್ವ ಕೂಡ ಇದೆ. ಮಾಜಿ ಸಿಎಂ ಯಡಿಯೂರಪ್ಪ ಅವರು ನಮ್ಮ ಸಮಾಜಕ್ಕೆ ನ್ಯಾಯ ನೀಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು ಕಾರಣಾಂತರದಿಂದ ಆದ ರಾಜಕೀಯ ಬೆಳವಣಿಗೆಯಿಂದ ಗೊಲ್ಲ ಸಮಾಜಕ್ಕೆ ಸಚಿವ ಸ್ಥಾನ ಸಿಗಲಿಲ್ಲ.ಆದರೂ ನಮ್ಮ ತಾಳ್ಮೆಯನ್ನೂ ನಾವು ಕಳೆದುಕೊಂಡಿಲ್ಲ ಇದೀಗ ನಮ್ಮ ಸಮುದಾಯದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗೆ ಸಚಿವ ಸ್ಥಾನ ಸಿಗಲೇಬೇಕಾದ ಅನಿರ್ಯಾತೆ ಇದೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಯಾದವ ಸಮಾಜಕ್ಕೂ ಸೂಕ್ತ ಸ್ಥಾನ ಮಾನ ಸಿಗಲೇಬೇಕಿದೆ ಹೀಗಾಗಿ ಮಾನ್ಯ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರು ಮತ್ತು ಪಕ್ಷದ ವರಿಷ್ಠರು ಈ ವಿಚಾರವನ್ನ ನಿರ್ಲಕ್ಷ್ಯ ಮಾಡದೇ ಗಂಭೀರವಾಗಿ ಪರಿಗಣಿಸಿ ಸಚಿವ ಸ್ಥಾನ ನೀಡಲೇಬೇಕಿದು ಇದು ಹೋರಾಟವಲ್ಲ ನಮ್ಮ ಹಕ್ಕು ಕೇಳುತ್ತಿದ್ದೇವೆ.ಎಂದು ದಾವಣಗೆರೆ ಯಾದವ ಮಹಾಸಭದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!