Bribe: ನಿರ್ಮಿತಿ ಕೇಂದ್ರದ 12 ಜನರನ್ನು ಅಮಾನತ್ತುಗೊಳಿಸಲು ಮನವಿ, ಡಿಸಿ ಮೌನ.! ಸಿಜೆ ಆಸ್ಪತ್ರೆ ಕಾಮಗಾರಿಯಲ್ಲಿ ಸಚಿವರ ಹೆಸರೇಳಿ 80 ಲಕ್ಷ ಲಂಚ.! ಲೋಕಿಕೆರೆ ನಾಗರಾಜ್ ಆರೋಪ

ದಾವಣಗೆರೆ: (Bribe) ದಾವಣಗೆರೆ ನಿರ್ಮಿತಿ ಕೇಂದ್ರದ ಅಕ್ರಮ ನೇಮಕಾತಿ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳನ್ನ ವೈಯಕ್ತಿಕವಾಗಿ ಭೇಟಿ ಮಾಡಿ ಮಾಹಿತಿ ನೀಡಲಾಗತ್ತು ಆದರೂ ಸಹ ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರಾಗಲಿ ಯಾವುದೇ ಸೂಕ್ತ ಕ್ರಮ ಜರುಗಿಸದೆ ಮೌನವಹಿಸಿದ್ದಾರೆ ಎಂದು ಲೋಕಿಕೆರೆ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಅಕ್ರಮ ನೇಮಕಾತಿ ವಿಷಯದಲ್ಲಿ ಕೇಂದ್ರ ಕಚೇರಿ ಕಾರ್ನಿಕ್ ಸಂಸ್ಥೆಯಿಂದ ಮಾಹಿತಿ ಪಡೆದಿದ್ದೆನೆ, ಈ ಮಾಹಿತಿ ಜಿಲ್ಲಾಧಿಕಾರಿ ಬಳಿ ಇದ್ದರೂ ಸಹ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಎಲ್ಲೋ ಒಂದು ಕಡೇ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ಯಾವುದೇ ಅನುಭವವಿಲ್ಲದ ಔಟ್ ಸೋರ್ಸ್ ನಲ್ಲಿ ಕೆಲಸ ಮಾಡುತ್ತಿರುವವರನ್ನು ನೇರ ನೇಮಕಾತಿ ಮಾಡಿದ್ದಾರೆ.
ಈ ಹಿಂದೆ ಪ್ರಾಜೆಕ್ಟ್ ಇಂಜಿನಿಯರಾಗಿ ರಾಜಪ್ಪ ಎಂಬುವವರು ನಿರ್ಮಿತಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರ ವಿ ಆರ್ ಎಸ್ ನಂತರ ಅವರ ಸಂಬಂದಿಕರಾದ ರವಿ ಅವರನ್ನು ನೇಮಕಮಾಡಿಕೊಂಡಿದ್ದರು, ಅವರ ನಂತರ ಆ ಹುದ್ದೆಗೆ ರಾಜಪ್ಪ ನವರ ಮತ್ತೊಬ್ಬ ಸಂಬಂಧಿಯಾದ ಚಂದನ್ ಅವರನ್ನು ನೇಮಕ ಮಾಡಿದ್ದಾರೆ, ಇವರುಗಳನ್ನು ಅಕ್ರಮವಾಗಿ ನೇಮಕಾತಿ ಮಾಡಿದ್ದಾರೆ.
ಈ ಕೂಡಲೇ ಅಕ್ರಮವಾಗಿ ನೇಮಕಗೊಂಡಿರುವ ಅವರನ್ನು ವಜಾ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಕೇಳಿಕೊಳ್ಳುತ್ತೇನೆ. ಒಂದು ವೇಳೆ ಕ್ರಮಕೈಗೊಳ್ಳದಿದ್ದರೆ ನನ್ನ ಬಳಿ ಇರುವ ಎಲ್ಲ ದಾಖಲೆಯೊಂದಿಗೆ ನ್ಯಾಯಾಲಯ ಮೆಟ್ಟಿಲೇರಲು ಸಿದ್ದವಿದ್ದೇನೆ. ಈ ನಿರ್ಮಿತಿ ಕೇಂದ್ರದ ನಿಯಂತ್ರಣವನ್ನು ಈ ಹಿಂದಿನ ಜಿಲ್ಲಾಧಿಕಾರಿಗಳಾದ ಶ್ರೀ ಮಹಾಂತೇಶ ಬೀಳಗಿ ಮತ್ತು ಶಿವಮೂರ್ತಿ ರವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೆ.ಟಿ.ಟಿ.ಪಿ ಆಕ್ಟ್ ಪ್ರಕಾರ ಅವರ ವ್ಯಾಪ್ತಿಗೆ ಬರುವ ಕಾಮಗಾರಿಗಳು ಸರಕಾರಿ ಕಟ್ಟಡಗಳು, ರಸ್ತೆಗಳು, ಚರಂಡಿಗಳು ಬರುವಂತದ್ದು, ಇದನ್ನ ಹೊರತುಪಡಿಸಿ ಕಾನೂನು ಬಾಹಿರವಾಗಿ ಹೈ ಮಾಸ್ಕ್ ಲೈಟ್ , u g ಕೇಬಲ್, ವಾಟರ್ ಹೀಟರ್, ಸೋಲಾರ್ ಇವನ್ನೆಲ್ಲ ಸರಕಾರಿ ಹಾಸ್ಟೆಲ್, ಸರಕಾರಿ ಆಸ್ಪತ್ರೆಗಳಿಗೆ ಅಳವಡಿಸುವ ಕಾಮಗಾರಿಯನ್ನು ಮಾಡುವ ಕೆಲಸ ಮಾಡುವುದಲ್ಲದೆ ಅದಕ್ಕೆ ಅದರ ಮೂಲ ಬೆಲೆಗಿಂತ ಹತ್ತು ಪಟ್ಟು ಹೆಚ್ಚು ಬಿಲ್ಲುಗಳನ್ನು ಮಾಡಿ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಲೋಕಿಕೆರೆ ನಾಗರಾಜ್ ತಿಳಿಸಿದರು.
ಉದಾಹರಣೆಗೆ ದಾವಣಗೆರೆ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮಾಡಿರುವ ಕಾಮಗಾರಿಗಳಗೆ ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನು ಹೇಳಿಕೊಂಡು ಶ್ಯಾಗಲೆ ಜಯಣ್ಣ ಎಂಬ ವ್ಯಕ್ತಿ ಸುಮಾರು 80 ಲಕ್ಷ ರೂಪಾಯಿಗಳನ್ನು ಲಂಚ ಪಡೆದಿದ್ದಾರೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಬಿ. ಎಂ ಸತೀಶ್ ಕೊಳೆನಹಳ್ಳಿ ,ಎನ್ ಹೆಚ್ ಹಾಲೇಶ್ ನಾಯಕ, ರಾಜು ತೋಟಪ್ಪನವರ್ ರವರು ಭಾಗವಹಿಸಿದ್ದರು.