ಬ್ರದರ್ಸ್ ಜಿಮ್ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಬ್ರದರ್ಸ್ ಜಿಮ್ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ದಾವಣಗೆರೆ: ಈಚೆಗೆ ಹಾಸನ ಜಿಲ್ಲೆಯಲ್ಲಿ ನಡೆದ ೯ನೇ ರಾಜ್ಯಮಟ್ಟದ ಆರ್ಮ್ ರಜ್ ಲಿಂಗ್ ಸ್ಪರ್ಧೆಗಳು ಹಾಗೂ ೪೫ನೇ ರಾಷ್ಟ್ರೀಯ ಆರ್ಮ್ ರೆಸ್ಟಿಂಗ್ (ಪಂಜ ಕುಸ್ತಿ) ಸ್ಪರ್ಧೆಗಳಲ್ಲಿ ಹರಿಹರದ ಬ್ರದರ್ಸ್ ಜಿಮ್‌ನ ೩೯ ಜನ ಕ್ರೀಡಾಪಟುಗಳು ಭಾಗವಹಿಸಿ ಗೆದ್ದು ಜಮ್ಮು ಕಾಶ್ಮೀರದಲ್ಲಿ ಮೇ.೨೨ರಿಂದ ನಡೆಯಲಿರುವ ೪೫ನೇ ರಾಷ್ಟ್ರೀಯ ಪಂಜ ಕುಸ್ತಿ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.

ರಾಜ್ಯಮಟ್ಟದ ಸ್ಪರ್ಧೆಯಲ್ಲಿ ೨೫ ಚಿನ್ನದ ಪದಕ, ೧೪ ಬೆಳ್ಳಿ, ೧೧ ಕಂಚಿನ ಪದಕ ಒಟ್ಟು ೫೦ ಪದಕಗಳನ್ನು ಗೆದ್ದಿದ್ದು, ರಾಜ್ಯ ಪ್ರಶಸ್ತಿ (೧), ಕರ್ನಾಟಕ ಯೂತ್, ಸಬ್ ಜೂನಿಯರ್ (೨) ಕರ್ನಾಟಕ ಅರ್ಜುನ ಜೂನಿಯರ್ (೩) ಕರ್ನಾಟಕ ಭೀಮ, ಸೀನಿಯರ್, ಪ್ರಶಸ್ತಿಗಳನ್ನು ಗೆದ್ದು ಸಮಗ್ರ ರಾಜ್ಯ ಮಟ್ಟದ ತಂಡ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ ಸುಮಾರು ೩೯ ಜನ ಬ್ರದರ್ಸ್ ಜಿಮ್ ಕ್ರೀಡಾಪಟುಗಳು ರಾಷ್ಟ್ರೀಯ ಪಂಜ ಕುಸ್ತಿ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.

ವಿಜೇತ ಕ್ರೀಡಾ ಪಟುಗಳಿಗೆ ಬ್ರದರ್ಸ್ ಜಿಮ್ ಸಂಚಾಲಕರಾದ ಅಕ್ರಂಬಾಷ, ಅಂತರ ರಾಷ್ಟ್ರೀಯ ದೇಹದಾರ್ಡ್ಯ ಕ್ರೀಡಾಪಟು ಮಹಮ್ಮದ್ ರಫೀಕ್, ಆರ್. ಸಿ. ಜಾವೀದ್, ಅತಾವುಲ್ಲಾ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!