Brutal: ಮಹಿಳೆಗೆ ಅಮಾನುಷವಾಗಿ ಥಳಿಸಿ ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿತರ ಬಂಧನ

brutally beaten women public near Channagiri Davanagere

ದಾವಣಗೆರೆ: (Brutal) ದಿನಾಂಕ: 11-04-2025 ರಂದು ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರಿಗೆ ಗುಂಪುಗೂಡಿ ಹಲ್ಲೆ ಮಾಡುತ್ತಿರುವ ವೀಡಿಯೋ ಕಂಡು ಬಂದಿದ್ದು, ಸದರಿ ವಿಡಿಯೋ ಬಗ್ಗೆ ಪರಿಶೀಲಿಸಲಾಗಿದ್ದು, ವಿಡಿಯೋದಲ್ಲಿ ಹಲ್ಲೆಗೊಳಗಾದ ಸಂತ್ರಸ್ತೆಯನ್ನು ಹಾಗೂ ಘಟನಾ ಸ್ಥಳವನ್ನು ಪತ್ತೆ ಹಚ್ಚಲಾಗಿರುತ್ತದೆ.

ಸದರಿ ವಿಡಿಯೋ ಹಿನ್ನೆಲೆ:
ಚನ್ನಗಿರಿ ತಾಲ್ಲೂಕು ತಾವರಕೆರೆ ಗ್ರಾಮದ ವಾಸಿಯಾದ ಶ್ರೀಮತಿ ಶಭಿನಾಭಾನು ಕೋಂ ಜಮೀಲ್ ಅಹಮ್ಮದ್ @ ಶಮೀರ್ 38 ವರ್ಷ ಮನೆ ಕೆಲಸ ಇವರ ಸಂಬಂಧಿಯಾದ ನಸ್ರೀನ್ ಕೋಂ ರಪೀಕ್ 32 ವರ್ಷ ಇವರು ದಿನಾಂಕ:07.04.2025 ರಂದು ಮಧ್ಯಾಹ್ನ 01.00 ಗಂಟೆ ಸಮಯದಲ್ಲಿ ಶಬೀನಾಬಾನು ಇವರ ಮನೆಗೆ ಬಂದಿದ್ದು ಇವರೊಂದಿಗೆ ಶಭೀನಾಬಾನು ಇವರು ನನ್ನ ಮಕ್ಕಳು ಹಾಗೂ ಅವರ ಸ್ನೇಹಿತೆಯಾದ ನಸ್ರೀನ್ ಕೋಂ ರಫೀಕ್ ಇವರೊಂದಿಗೆ ಬುಕ್ಕಂಬುದಿಯ ಗಿರಿ (ಸಣ್ಣಬೆಟ್ಟ) ನೊಡಿಕೊಂಡು ಬರಲು ಹೋಗಿದ್ದು ವಾಪಸ್ಸು ಸುಮಾರು 03.00 ಗಂಟೆಗೆ ಮನೆಗೆ ಬಂದ ನಂತರ ಪಿರ್ಯಾದಿ ಶಭಿನಾಬಾನು ಇವರಿಗೆ ವೈಧ್ಯರ ಸಲಹೆಯಂತೆ ಆರೋಗ್ಯದ ದೃಷ್ಠಿಯಿಂದ ಮಾತ್ರೆಗಳನ್ನು ನುಂಗಿ ಮಲಗಿದ್ದು ನಂತರ ನಸ್ರೀನ್ ಇವಳು ಊರಿಗೆ ಹೋಗುತ್ತೇನೆ ಎಂದು ಹೇಳಿದ್ದವಳು ಹೋಗದೇ ಶಬೀನಾ ಬಾನು ಇವರ ಮನೆಯಲ್ಲಿ ಉಳಿದುಕೊಂಡಿದ್ದು ಆ ಸಮಯದಲ್ಲಿ ಫಯಾಜ್ ಎಂಬುವವನು ಶಭೀನಾ ಬಾನು ಇವರ ಮನೆಗೆ ಬಂದಿದ್ದು, ಮನೆಯಲ್ಲಿದ್ದ ಸಮಯದಲ್ಲಿ ಶಭೀನಾಬಾನು ಇವಳ ಗಂಡನಾದ ಜಮೀಲ್ ಅಹಮದ್ ಮನೆಗೆ ಬಂದಿದ್ದ ಆ ಸಮಯದಲ್ಲಿ ಫಯಾಜ್ ಮತ್ತು ನಸ್ರೀನ್ ಇವರು ತನ್ನ ಮನೆಯಲ್ಲಿ ಇದ್ದಿದ್ದನ್ನು ನೋಡಿದ ಜಮೀಲ್ ಅಹಮ್ಮದ್ @ ಶಮೀರ್ ಈತನು ನಸ್ರೀನ್ ಮತ್ತು ಫಯಾಜ್ ಇವರ ಮೇಲೆ ಕೋಪಗೊಂಡು ತಾವರೆಕೆರೆಯ ಜಾಮೀಯ ಮಸೀದಿಗೆ ಹೋಗಿ ಅರ್ಜಿಯನ್ನು ಕೊಟ್ಟು ಬಂದಿರುತ್ತಾರೆ.

ನಂತರ ದಿನಾಂಕ:09.04.205 ರಂದು 02.30 ಪಿ,ಎಂ ಗಂಟೆ ಸಮಯದಲ್ಲಿ ತಾವರೆಕೆರೆ ಗ್ರಾಮದ ಜಾಮೀಯ ಮಸೀದಿಯ ಮುಂಬಾಗದ ಶಭೀನಾ ಬಾನು ಮತ್ತು ಅವರ ಸಂಬಂಧಿಯಾದ ನಸ್ರೀನ್ ಹಾಗೂ ಫಯಜ್ ಇವರನ್ನು ಮಸೀದಿಗೆ ಕರೆಸಿಕೊಂಡು ಮಸೀದಿಯ ಮುಂಭಾಗದಲ್ಲಿ 1. ಮೊಹಮದ್ ನಯಾಜ್,, 2. ಮೊಹಮದ್ ಗೌಸ್‌ಪೀರ್, 3. ಚಾಂದ್‌ಭಾಷಾ, 4. ಇನಾಯತ್ ಉಲ್ಲಾ, , 5. ದಸ್ತಗಿರ್, 6. ರಸೂಲ್ ಟಿಆರ್ ಹಾಗೂ ಇತರರು ಸೇರಿಕೊಂಡು ಶಭಿನಾ ಬಾನು ಇವರಿಗೆ ಅಮಾನುಶವಾಗಿ ಹಲ್ಲೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಕಣಗೆ, ಪೈಪು, ಕೊಲುಗಳಿಂದ ಮಹಿಳೆಗೆ ಹೊಡೆದು ಕಲ್ಲು ಎತ್ತಿಹಾಕಲು ಹೋಗಿ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುತ್ತದೆ.

ಸದರಿ ವಿಡಿಯೋ ಸಂಬಂಧವಾಗಿ ಪಿರ್ಯಾದಿ ಸಂತ್ರಸ್ಥೆ ಶಭೀನಾ ಬಾನು ದಿನಾಂಕ:-11.04.2025 ರಂದು ನೀಡಿದ ದೂರಿನ ಮೇರೆಗೆ *ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆ ನಂ-202/2025 ಕಲಂ- 109(1), 189(2), 190(2), 191(3), 115(2), 118(1), 76, 352, 351(2) ಜೊತೆ 190 ಬಿಎನ್‌ಎಸ್ ರೀತ್ಯ* ಪ್ರಕರಣವು ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.

ಈ ಪ್ರಕರಣದ ಆರೋಪಿತರ ಪತ್ತೆ ಕಾರ್ಯಕ್ಕೆ ದಾವಣಗೆರೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ರವರ ಹಾಗೂ ಹೆಚ್ಚುವರಿ ಅಧೀಕ್ಷಕರಾದ ಶ್ರೀ ಸಂತೋಷ್ ವಿಜಯ್ ಕುಮಾರ್ ಹಾಗೂ ಶ್ರೀ ಮಂಜುನಾಥ ರವರ ಮತ್ತು ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀ ಸ್ಯಾಮ್ ವರ್ಗೀಸ್ ರವರ ಮಾರ್ಗದರ್ಶನಲ್ಲಿ ಚನ್ನಗಿರಿ ಪೊಲೀಸ್ ನಿರೀಕ್ಷಕರಾದ ಶ್ರೀ ರವೀಶ್ ಇವರ ನೇತೃತ್ವದಲ್ಲಿ ಚನ್ನಗಿರಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವನ್ನು ರಚನೆ ಮಾಡಲಾಗಿತ್ತು.

ಚನ್ನಗಿರಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಪ್ರಕರಣದ *ಆರೋಪಿತರುಗಳಾದ 1. ಮೊಹಮದ್ ನಯಾಜ್, 32 ವರ್ಷ* , ಚಾಲಕ ವೃತ್ತಿ, ವಾಸ: ತಾವರೆಕೆರೆ ಗ್ರಾಮ, *2. ಮೊಹಮದ್ ಗೌಸ್‌ಪೀರ್, 45 ವರ್ಷ* , ಗುಜರಿ ಅಂಗಡಿ ವ್ಯಾಪಾರಿ, ವಾಸ: ತಾವರೆಕೆರೆ ಗ್ರಾಮ, *3. ಚಾಂದ್‌ಭಾಷಾ, 35 ವರ್ಷ* , ಕಬ್ಬಿನ ಜ್ಯೂಸ್ ಅಂಗಡಿ ವ್ಯಾಪಾರ ವಾಸ: ತಾವರೆಕೆರೆ ಗ್ರಾಮ *4. ಇನಾಯತ್ ಉಲ್ಲಾ, 51 ವರ್ಷ* , ತಾವರೆಕೆರೆ ಗ್ರಾಮ, *5. ದಸ್ತಗಿರ್, 24 ವರ್ಷ,* ಬೈಕ್ ಮೆಕ್ಯಾನಿಕ್ ಕೆಲಸ, ವಾಸ: ತಾವರೆಕೆರೆ *6. ರಸೂಲ್ ಟಿಆರ್, 42 ವರ್ಷ,* ಬುಕ್ಕಾಂಬೂದಿ ಕೆರೆಯಲ್ಲಿ ಮೀನುಗಾರಿಕೆ ಕೆಲಸ, ವಾಸ: ತಾವರೆಕೆರೆ ಗ್ರಾಮ ಇವರುಗಳನ್ನು ಪ್ರಕರಣ ದಾಖಲಾಗಿ ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿ ದಸ್ತಗಿರಿ ಕ್ರಮ ಜರುಗಿಸಿರುತ್ತದೆ. ಈ ವರೆಗಿನ ತನಿಖೆಯಿಂದ ಆರೋಪಿತರು ಮೇಲ್ಕಂಡಂತೆ ಅಮಾನವೀಯ ಕೃತ್ಯ ಎಸಗಿರುವುದು ಕಂಡು ಬಂದಿರುತ್ತದೆ. ತನಿಖೆ ಮುಂದುವರಿದಿರುತ್ತದೆ ಎಂದು ದಾವಣಗೆರೆ ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!