ಮೋದಿ ಕ್ರೀಡಾಂಗಣ ಸ್ವಚ್ಛ ಮಾಡಿದ ಬಿಎಸ್ ಜಗದೀಶ್

ದಾವಣಗೆರೆ : ಸಾಮಾನ್ಯವಾಗಿ ದೊಡ್ಡ ಸಭೆ, ಸಮಾರಂಭ ಮುಗಿದ ಮೇಲೆ ಇಡೀ ವಾತಾವರಣ ಕಲುಶಿತಗೊಂಡಿರುತ್ತದೆ.
ಅದನ್ನು ಸ್ವಚ್ಛ ಮಾಡಲು ಸಾಕಷ್ಟು ಪೌರ ಕಾರ್ಮಿಕರು ಬೇಕು..ಅದರಲ್ಲೂ ಎಂಜಲು ತಟ್ಟೆಘಿ, ಲೋಟ ಹೀಗೆ ಎಲ್ಲವನ್ನೂ ತೆಗೆಯಲು ಯಾರಿಗಾದರೂ ಒಂಚೂರು ಹಿಂಜರಿಕೆಯಾಗುತ್ತದೆ…ಆದರೆ ಇಲ್ಲೊಬ್ರು ಎಲೆಮರೆಕಾಯಿಯಂತೆ ಕೆಲಸ ಮಾಡುತ್ತಿದ್ದುಘಿ, ಮೋದಿ ಮಹಾಸಂಗಮ ಯಾತ್ರೆಯಲ್ಲಿ ಜನರು ಊಟ ಮಾಡಿ ಬಿಸಾಡಿದ್ದ ತಟ್ಟೆಗಳನ್ನು ಸ್ವಚ್ಛ ಮಾಡುವ ಮೂಲಕ ಮೋದಿ ಹೇಳಿದ ಮಾತುಗಳನ್ನು ಚಾಚು ತಪ್ಪದೇ ಕೆಲಸ ಮಾಡುತ್ತಿದ್ದಾರೆ..
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಹಾಗೂ ಅವರ ತಂಡ ಮಹಾಯಾತ್ರೆಗೆ ಬಂದಿದ್ದ ಜನರು ಬಿಸಾಡಿದ್ದ ಎಂಜಲು ತಟ್ಟೆಯನ್ನು ತಾವೇ ಸ್ವತಃ ಸ್ವಚ್ಛಗೊಳಿಸಿದರು. ಅಲ್ಲದೇ ಅವುಗಳು ಪರಿಸರಕ್ಕೆ ಧಕ್ಕೆಯಾಗಬಾರದೆಂದು ನಾಶಪಡಿಸಿದರು. ಎಲೆ ಮರೆ ಕಾಯಿಯಂತೆ ಕೆಲಸ ಮಾಡುತ್ತಿರುವ ಬಿ.ಎಸ್.ಜಗದೀಶ್ ಪ್ರಚಾರಕ್ಕಾಗಿ ಕೆಲಸ ಮಾಡೋರಲ್ಲಘಿ..ಆದರೆ ಮೋದಿ ವಾಕ್ಯವನ್ನು ಕ್ರಿಯೆ ಮೂಲಕ ಮಾಡಿ ತೋರಿಸುವರು.
ಸಾಮಾನ್ಯವಾಗಿ ಮನೆಯಲ್ಲಿ ಊಟ ಮಾಡಿದ ಎಂಜಲು ತಟ್ಟೆಯನ್ನು ತೆಗೆಯೋದು ಕಷ್ಟಘಿ, ಅಂತಹದ್ದರಲ್ಲಿ ಲಕ್ಷಾಂತರ ಜನರು ಬಿಸಾಡಿದ ತಟ್ಟೆ, ಲೋಟವನ್ನು ತೆಗೆದು ಜನ ಮಾಸದಲ್ಲಿ ಬಿಜೆಪಿ ಮುಖಂಡ ಜಗದೀಶ್ ಹಾಗೂ ಅವರ ತಂಡ ಮಾಡಿದೆ.ಈ ಮೂಲಕ ಪರಿಸರ ಕಾಳಜಿ ಜತೆ ಜನರ ಆರೋಗ್ಯ ಕಾಪಾಡುವಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿದೆ.