Bsy Resign:ಕಣ್ಣೀರ ಮೂಲಕ ಸ್ವಪ್ರೇರಣೆಯಿಂದ ರಾಜೀನಾಮೆ ನೀಡಿ, ಮುಜುಗರ ತಪ್ಪಿಸಿಕೊಂಡ ಬಿ ಎಸ್ ವೈ.! ಹೈ ಕಮಾಂಡ್ ನಿಂದ ಜಾಣನಡೆ

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಸಿಎಂ ಪದತ್ಯಾಗ ಮಾಡುವುದಾಗಿ ಘೋಷಿಸಿರುವ ಬೆನ್ನಲ್ಲೇ ಮುಂದಿನ ಸಿಎಂ ಯಾರು ಎಂಬ ಗೊಂದಲ ಶುರುವಾಗಿದ್ದು, ಕಲ್ಪಿಸಲಾಗದ ಹೆಸರೊಂದು ಮುಂಚೂಣಿಗೆ ಬಂದಿದೆ!?
ಇಂದು ಮಧ್ಯಾಹ್ನ ಸಾಧನಾ ಸಮಾವೇಶ ನಂತರದಲ್ಲಿ ನಡೆದ ಘಟನೆಗಳ ನಂತರ ರಾಜ್ಯಪಾಲರ ಬಳಿ ತೆರಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಯಡಿಯೂರಪ್ಪ ಭಾವುಕರಾಗಿದ್ದಾರೆ. ಸ್ವ ಕ್ಷೇತ್ರ ಶಿಕಾರಿಪುರದಲ್ಲಿ ಮೌನ ಪ್ರತಿಭಟನೆ ಕೂಡ ನಡೆದಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡಾ ಯಡಿಯೂರಪ್ಪ ಅವರಿಂದ ರಾಜೀನಾಮೆ ಕೊಡಿಸುವ ಸುದ್ದಿಯನ್ನು ತಳ್ಳಿಹಾಕಿದ್ದರು. ಅಷ್ಟೇ ಅಲ್ಲ ಬಿಎಸ್‌ವೈ ಅವರ ಸಾಧನೆಯನ್ನು ಕೊಂಡಾಡಿದ್ದರು. ಜತೆಗೆ ಹೈಕಮಾಂಡ್ ಅವರಿಗೆ ಮಳೆಯ ಆರ್ಭಟದಿಂದ ಎದುರಾಗಿರುವ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಇನ್ನೆರಡು ವಾರಗಳ ಕಾಲ ಸಿಎಂ ಸ್ಥಾನದಲ್ಲಿಯೇ ಮುಂದುವರೆಯಂತೆ ಸೂಚನೆ ನೀಡಿತ್ತು ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು. ಆದರೆ, ಬಿಎಸ್ ವೈ ಈ ಮಧ್ಯೆಯೂ ಪದತ್ಯಾಗದ ತೀರ್ಮಾನ ಕೈಗೊಂಡು ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿ ಮಾಡಿದ್ದಾರೆ.
ಆದರೆ, ರಾಜಕೀಯ ವಲಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆಯುತ್ತಿದ್ದು, ಸಿಎಂ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಮತ್ತು ಅರವಿಂದ್ ಬೆಲ್ಲದ್ ಹೆಸರು ಇಂದಿನಿಂದ ಮುಂಚೂಣಿಯಲ್ಲಿವೆ ಎನ್ನಲಾಗಿದೆ.
ಈ ಮೊದಲು ಪ್ರಹ್ಲಾದ್ ಜೋಷಿ ಹೆಸರನ್ನು ಸಿಎಂ ಸ್ಥಾನಕ್ಕೆ ಆಯ್ಕೆಮಾಡಲಾಗಿತ್ತು. ಆದರೆ, ಸಧ್ಯ ಲಿಂಗಾಯಿತರೇತರ ಸಿಎಂ ಮಾಡಿದ್ರೆ ಪಕ್ಷಕ್ಕೆ ಮುಜುಗರ ಬರುವ ಸಾಧ್ಯತೆ ಇರುವುದರಿಂದ, ಲಿಂಗಾಯತರ ಪ್ರಾಬಲ್ಯ ಹೆಚ್ಚಿರುವ ರಾಜ್ಯದಲ್ಲಿ ಜೋಷಿಯ ಆಪ್ತವಲಯದಲ್ಲಿ ಗುರುತಿಸಿ ಕೊಂಡಿರುವ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಸ್ಥಾನಕ್ಕೆ ಸೂಚಿಸಲಾಗಿದೆ ಎನ್ನಲಾಗುತ್ತಿದೆ.!
ಈಗಾಗಲೇ ಈ ಹಿಂದೆಯೇ ಜಗದೀಶ್ ಶೆಟ್ಟರ್ ಸಿಎಂ ಸ್ಥಾನ ನಿಭಾಯಿಸಿದ್ದರು. ಅದಕ್ಕಾಗಿ ಮತ್ತೊಂದು ಅವಧಿಯೂ ಅವರನ್ನೇ ಮುಂದುವರೆಸುವ ಲೆಕ್ಕಾಚಾರ ಹೈಕಮಾಂಡ್ ಹಾಕಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಇತ್ತ ಅರವಿಂದ್ ಬೆಲ್ಲದ್ ಹೆಸರನ್ನು ರಾಜ್ಯದ ಜನರು ಅಷ್ಟಾಗಿ ಕೇಳಿರಲೇ ಇಲ್ಲ. ಮಠಾಧೀಶರೆಲ್ಲರೂ ಬೆಲ್ಲದ್ ಹೆಸರನ್ನೇ ಸೂಚಿಸಿ ಬೆಂಬಲಿಸುತ್ತಿದ್ದು, ಜಗದೀಶ್ ಶೆಟ್ಟರ್ ಮತ್ತು ಅರಿವಿಂದ್ ಬೆಲ್ಲದ್ ಈ ಇಬ್ಬರಲ್ಲಿ ಸಿಎಂ ರೇಸ್ ನಲ್ಲಿ ಗೆಲ್ಲುವರಾರು ಎಂಬುದೇ ಸದ್ಯಕ್ಕಿರುವ ಪ್ರಶ್ನೆ.