ಹೆಣ್ಣು ಮಕ್ಕಳ ಗೌರವಕ್ಕೆ ಮನೆಗೊಂದು ಶೌಚಾಲಯ ನಿರ್ಮಿಸಿ – ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ.

filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ದಾವಣಗೆರೆ: ಹೆಣ್ಣು ಮಕ್ಕಳ ಗೌರವ ಕಾಪಾಡುವುದಕ್ಕಾದರೂ ಮನೆಗೊಂದು ಶೌಚಾಲಯ ನಿರ್ಮಿಸಬೇಕು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ. ತಿಳಿಸಿದರು.

ಮಂಗಳವಾರ (19) ರಂದು ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಮ್ಮ ಶೌಚಾಲಯ, ನಮ್ಮ ಗೌರವ ಆಂದೋಲನದ ಘೋಷವಾಕ್ಯದೊಂದಿಗೆ ಆಚರಿಸಿದ ಶೌಚಾಲಯ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ಜಾಗೃತಿ ಮೂಡಿಸಿ ಶೌಚಾಲಯಗಳನ್ನು ನಿರಂತರವಾಗಿ ಬಳಸುವಂತೆ ಪ್ರೇರೇಪಿಸುವ ಉದ್ದೇಶವನ್ನು ಜನರಿಗೆ ಮನವರಿಕೆ ಮಾಡಿಸಿದರು. ಎಲ್ಲಿ ಶುಚಿತ್ವ  ಇರೋತ್ತದೆಯೋ ಅಲ್ಲಿ ಯಾವುದೇ ಜನರಿಗೆ ಖಾಯಿಲೆ ಇರುವುದಿಲ್ಲ. ಯಾರ ಮನೆಯಲ್ಲಿ ಶೌಚಾಲಯವಿಲ್ಲವೋ ಅವರ ಮನೆಯಲ್ಲಿ ಶುಚಿತ್ವ ಇಲ್ಲ. ಭಾರತದಲ್ಲಿ ಆರೋಗ್ಯಕ್ಕಾಗಿ ಖರ್ಚು ಮಾಡಿದ ಹಣವನ್ನು ಬೇರೆ ಯಾವುದಕ್ಕೂ ಕೂಡ ಖರ್ಚು ಮಾಡಿಲ್ಲ ಎಂದರು.


ನಮ್ಮ ದೇಹದಲ್ಲಿ ಶೇ.55 ರಷ್ಟು ಭಾಗ ನೀರು ತುಂಬಿರಬೇಕು. ಇಲ್ಲವಾದರೆ ಮನುಷ್ಯನಿಗೆ ನಿಶಕ್ತಿಯಾಗುತ್ತದೆ. ನಿಧಾನವಾಗಿ ರಕ್ತದೊತ್ತಡದಿಂದ  ನಾಡಿಮಿಡಿತ ಕಡಿಮೆ ಆಗುತ್ತಾ ಬರುತ್ತದೆ. ಇದಕ್ಕೆ ಮೂಲ ಕಾರಣವೇ ಶುಚಿತ್ವ, ಶೌಚಾಲಯಕ್ಕೆ ಹೋದಾಗ ಆ ಸ್ಥಳ ನಿದ್ದೆ ಮಾಡುವಂತಿರಬೇಕು, ಅಷ್ಟು ಶುಚಿಯಾಗಿ ಇಟ್ಟುಕೊಳ್ಳಬೇಕು. ಶೌಚಾಲಯಕ್ಕೆ ಹೋಗಿ ಬಂದ ಮೇಲೆ ಸ್ವಚ್ಚವಾಗಿ ಸಾಬೂನಿಂದ ಕೈ ತೊಳೆಯಬೇಕು. ಶೌಚಾಲಯಗಳಲ್ಲಿ ಸಿಂಧೂ ನಾಗರಿಕತೆಯಿಂದ ಹಿಡಿದು  ಆಧುನಿಕವಾಗಿ ಬಳಸುತ್ತಿರುವ ಶೌಚಾಲಯಗಳವರೆಗೆ ಎಲ್ಲಾ ರೀತಿಯ ಶೌಚಾಲಯಗಳ ಕುರಿತು ಆಮೇರಿಕಾದಲ್ಲಿ ಮ್ಯೂಸಿಯಂ ಇರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಬಳಸದೇ ಇರುವಂತಹ ಶೌಚಾಲಯಗಳನ್ನು ರಿಪೇರಿ ಮಾಡಿಸಿ ಪುನಃ ಅದನ್ನು ಉಪಯೋಗಿಸಬೇಕೆಂದರು.


ಮನೆಗಳಲ್ಲಿ ಶೌಚಾಲಯಗಳಿಲ್ಲದ ಜನರಿಗೆ ಊರ ಹೊರಗಿನ ಪೆÇದೆಗಳೇ ನಿತ್ಯ ಬಳಕೆಯ ಬಯಲು ಶೌಚಾಲಯಗಳು. ಮಲ-ಮೂತ್ರ ವಿಸರ್ಜನೆಗಳಿಗೆ ನೂರಾರು ವರ್ಷಗಳಿಂದ ಬಳಸಿದ ಜಾಗವನ್ನೆ ಬಳಸುತ್ತಿರುವ ಆ ಜನರಿಗೂ ಹಾಗೂ ಮತ್ತೆ ಮತ್ತೆ ಬರುವ ರೋಗಗಳಿಗೂ ಅಂಟಿದ ನಂಟು ಕಡಿಮೆ ಆಗಿಲ್ಲ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್ ಮಾತನಾಡಿ ಶೌಚಾಲಯ ಆರೋಗ್ಯವನ್ನು ನಿಭಾಯಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಮ್ಮ ಶೌಚಾಲಯ ನಮ್ಮ ಗೌರವ ವಿಶೇಷ ಅಭಿಯಾನದ ಅವಧಿಯಲ್ಲಿ ಜಿಲ್ಲೆಯಲ್ಲಿ ನಿರುಪಯುಕ್ತ ಸಮುದಾಯ ಶೌಚಾಲಯಗಳನ್ನು ಗುರುತಿಸಿ, ಅವುಗಳನ್ನು ಯೋಗ್ಯ ರೀತಿಯಲ್ಲಿ ಪರಿವರ್ತಿಸಲಾಗುವುದು.

ಜಿಲ್ಲೆಯಲ್ಲಿ 2,52,000 ನಳ ಸಂಪರ್ಕ ಹೊಂದಿದ್ದು,  ಒಟ್ಟು 2,47,000 ಶೌಚಾಲಯಗಳಿವೆ. ಶೇ.98 ರಷ್ಟು ಪ್ರತಿಶತ ಮನೆಗಳಲ್ಲಿ ಶೌಚಾಲಯಗಳಿವೆ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಕ್ಕೆ ಹೆಚ್ಚು ಒತ್ತು ನೀಡಬೇಕು. ಬಯಲು ಶೌಚಾಲಯ ಮುಕ್ತಾವನ್ನಾಗಿ ಮಾಡೋಣ ಎಂದರು. ಜಿಲ್ಲೆಯಲ್ಲಿ ಅತೀ ಹೆಚ್ಚು ಸ್ವಚ್ಚವಾಗಿರುವ 5 ಶೌಚಾಲಯಗಳನ್ನು ಗುರುತಿಸಿ ಡಿಸೆಂಬರ್ 10 ರ ನಂತರ ಪ್ರಶಸ್ತಿ ನೀಡಲಾಗುವುದು. ಅಂದದ ಶೌಚಾಲಯ ಆನಂದ ಶೌಚಾಲಯವನ್ನಾಗಿ ನಿರ್ಮಿಸೋಣ ಎಂದರು.

ಗ್ರಾಮೀಣ ಮಟ್ಟದಲ್ಲಿ ಸ್ವಚ್ಚತಾಗಾರರನ್ನು, ಸ್ವಸಹಾಯ ಸಂಘದವರನ್ನು ಗುರುತಿಸಿ ಗೌರವಿಸಲಾಗುವುದು. ಗ್ರಾಮೀಣ ಸಮುದಾಯದಲ್ಲಿ ಶೌಚಾಲಯಗಳ ಬಳಕೆಯನ್ನು ಉತ್ತೇಜನ, ವೈಯಕ್ತಿಕ ಗೃಹ ಶೌಚಾಲಯಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತ್ತು. ಸಂಜೀವಿನಿ ಒಕ್ಕೂಟ ಮಹಿಳೆಯರಿಗೆ ಸ್ವಚ್ಚ ಸಂಚಾಲಕರಿಗೆ ಪರವಾನಿಗೆ ನೀಡಲಾಯಿತು.

ಹೆಚ್ಚುವರಿ ಪೊಲಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಯೋಜನಾ ನಿರ್ದೇಶಕರಾದ ರೇಷ್ಮಾ ಕೌಸರ್, ಜಿಲ್ಲಾಧಿಕಾರಿ ಕಚೇರಿಯ ಯೋಜನಾ ನಿರ್ದೇಶಕರಾದ ಮಹಾಂತೇಶ್, ಹಾಗೂ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!