ಬೆಣ್ಣೆ ನಗರಿ ದೋಸೆ ಸವಿದ ವಿದೇಶಿಗರು
ದಾವಣಗೆರೆ: ಉರಿಯುತ್ತಿರುವ ಒಲೆ ಮೇಲಿನ ಹಂಚಿಗೆ ಮೊದಲು ನೀರು ಹಾಕಿ, ಸಾರಿಸಿ ಲೋಟದಿಂದ ಹಿಟ್ಟು ತೆಗೆದು ಹಂಚಿಗೆ ದೋಸೆ ಹಾಕಿದ ಬಳಿಕ, ಒಂಚೂರು ಬೆಣ್ಣೆ ಇಟ್ಟುಘಿ, ಒಗ್ಗರಣೆ ಇಲ್ಲದ ಪಲ್ಯ, ಚಟ್ನಿಯೊಂದಿಗೆ ನಾಲಿಗೆಯಲ್ಲಿ ಚಪ್ಪರಿಸಿದರೆ..ಅದರಂತಹ ಟೇಸ್ ಬೇರೋಂದಿಲ್ಲಘಿ.
ಆಳ್ವಾಸ್ ಮೂಡು ಬಿದ್ರೆಯಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವತಿಯಿಂದ ಮೂಡುಬಿದ್ರೆಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ, ಬೇರೆ ರಾಜ್ಯಗಳಿಂದ ಮತ್ತು ಕೆನಡಾ. ಮಲೇಷಿಯಾ ದೇಶದಿಂದ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ದಾವಣಗೆರೆಯ ಬೆಣ್ಣೆ ದೋಸೆ ರುಚಿ ಸವಿಯಲು ಅವಕಾಶ ಮಾಡಿಕೊಡಲಾಗಿತ್ತು.
ರಾಜ್ಯ ದೇಶದ ಅನೇಕ ಭಾಗಗಳಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪದಾಧಿಕಾರಿಗಳಿಗೆ ದಾವಣಗೆರೆ ಬೆಣ್ಣೆ ದೋಸೆ ಸವಿಸಲು ಸ್ಕೌಟ್ ಅಂಡ್ ಗೈಡ್ ರಾಜ್ಯ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂದ್ಯಾ ಹಾಗೂ ದಾವಣಗೆರೆ ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಜೆ ಚಿಗಟೇರಿ ಅವರ ನೇತೃತ್ವದಲ್ಲಿ ಈ ಸವಿರುಚಿ ಆಯೋಜಿಸಲಾಗಿತ್ತು. ದಾವಣಗೆರೆ ಬೆಣ್ಣೆ ದೋಸೆಯ ವಿಶೇಷತೆಯನ್ನು ಹೊರ ರಾಜ್ಯದ, ಹೊರ ರಾಷ್ಟ್ರದ ಸ್ಕೌಟ್ಸ್ ಅಂಡ್ ಗೈಡ್ಸ್ ನ ವಿದ್ಯಾರ್ಥಿಗಳಿಗೆ ವಿವರಿಸುವುದು ಪ್ರಮುಖ ಉದ್ದೇಶವಾಗಿತ್ತುಘಿ. ಅಲ್ಲದೇ ಬೆಣ್ಣೆ ದೋಸೆ ರುಚಿಯನ್ನು ನೀಡುವ ಸಲುವಾಗಿ ತುಂಬಾ ಆಸಕ್ತಿವಹಿಸಿ ದಾವಣಗೆರೆಯಿಂದ ಬೆಣ್ಣೆ ದೋಸೆ ತಯಾರಿಸುವ ಅಡುಗೆ ಭಟ್ಟರ ತಂಡವನ್ನ ಕರೆದುಕೊಂಡು ಹೋಗಲಾಗಿತ್ತು. ಅಲ್ಲದೆ ದಾವಣಗೆರೆಯಿಂದ ಬೆಣ್ಣೆ, ದೋಸೆ ಹಿಟ್ಟು, ಆಲೂಗಡ್ಡೆ, ತೆಂಗಿನಕಾಯಿ, ಮೆಣಸಿನಕಾಯಿ ಸೇರಿದಂತೆ ದೋಸೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ದಾವಣಗೆರೆ ಯಿಂದಲೇ ಮೂಡಬಿದರಿಗೆ ಕೊಂಡೊಯ್ಯಲಾಗಿತ್ತು.
ಸ್ಥಳದಲ್ಲೇ ರುಚಿ ರುಚಿಯಾದ ಬೆಣ್ಣೆ ದೋಸೆಯನ್ನು ತಯಾರಿಸಿ ನೆರೆದಿದ್ದ ಸ್ಕೌಟ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳಿಗೆ ಸವಿಯಲು ನೀಡಲಾಯಿತು. ಬಿಸಿ ಬಿಸಿ ಬೆಣ್ಣೆ ದೋಸೆಯನ್ನು ತಿಂದ ಮಕ್ಕಳು, ಅತಿಥಿ ಗಣ್ಯರು, ಬೆಣ್ಣೆ ದೋಸೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೊರ ರಾಜ್ಯ, ಹೊರ ರಾಷ್ಟ್ರಗಳಿಗೆ ದಾವಣಗೆರೆ ಬೆಣ್ಣೆದೋಸೆಯ ವಿಶೇಷತೆಯನ್ನು ನೀಡಲು ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಅವಕಾಶ ನಮ್ಮದಾಯಿತು ಎಂದು ಮುರುಘರಾಜೇಂದ್ರ ಜೆ ಚಿಗಟೇರಿ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶ್ರಮಿಸಿದಂತಹ ರಾಜ್ಯ ಸಂಘಟನಾ ಆಯುಕ್ತರಾದ ಮಂಜುಳಾ. ಜಿಲ್ಲಾ ಆಯುಕ್ತ ಷಡಾಕ್ಷರಪ್ಪ. ಜಿಲ್ಲಾ ಸಹಾಯಕ ಆಯುಕ್ತ ಎನ್. ಕೆ. ಕೊಟ್ರೇಶ್, ಡಿ. ಹಾಲಪ್ಪ, ಅಶೋಕ್ ಕುಮಾರ್, ನೂರುಲ್ಲಾ. ಶಂಕರ್ ನಾಯ್ಕ್ , ಶಾರದ, ಕಾರ್ಯದರ್ಶಿ ರತ್ನ, ಸಹ ಕಾರ್ಯದರ್ಶಿ ಸುಖ ವಾಣಿ. ಎಸ್.ಜಿ.ವಿ ಯಾದ ಅಶ್ವಿನಿ. ಸುರೇಶ್ ಚವಾಣ್ ಇನ್ನು ಮುಂತಾದವರು ಉಪಸ್ಥಿತರಿದ್ದರು.