ಎಸ್‌ಯುಸಿಐಸಿ ಪಕ್ಷದಿಂದ ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರಕ್ಕೆ ಚಾಲನೆ

ಎಸ್ಯುಸಿಐಸಿ ಪಕ್ಷದಿಂದ ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರಕ್ಕೆ ಚಾಲನೆ

ದಾವಣಗೆರೆ: ನಗರದ ಹೊಂಡದ ಸರ್ಕಲ್ ನಲ್ಲಿ ಎಸ್‌ಯುಸಿಐ ಕಮ್ಯೂನಿಸ್ಟ್ ಪಕ್ಷದಿಂದ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕಾಮ್ರೇಡ್. ಭಾರತಿ ಕೆ. ರವರ  ಚುನಾವಣಾ ಪ್ರಚಾರಕ್ಕೆ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಕಾ. ಅಪರ್ಣಾ ಬಿ. ಆರ್ ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ,  ಕೆಲವು ದಿನಗಳಿಂದ ಇಡೀ ರಾಜ್ಯ ವ್ಯಾಪಿ ಚುನಾವಣಾ ಕಾವು ಹಬ್ಬಿದೆ. ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಆಂತರಿಕ ಭಂಡಾಯದಿಂದಾಗಿ  ಇವತ್ತಿಗೂ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿಲ್ಲ. ಆ ಪಕ್ಷಗಳ ಒಳಗಡೆನೇ ಟಿಕೆಟ್ ಗಾಗಿ ಕಚ್ಚಾಟಗಳು ಬುಗಿಲೆದ್ದಿವೆ.  ಆದರೆ  ನಮ್ಮ ಪಕ್ಷ ಮಾತ್ರ ಇಡೀ ರಾಜ್ಯ ವ್ಯಾಪಿ ಜೀವನ ಪೂರ್ತಿ ತಮ್ಮ ಬದುಕನ್ನೇ ಹೋರಾಟಕ್ಕೆ ಮುಡುಪಾಗಿಟ್ಟಿರುವ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಲಾಗಿದೆ. ಅದರಲ್ಲಿ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ತಮ್ಮ ವಿದ್ಯಾರ್ಥಿ ಸಂದರ್ಭದಲ್ಲಿ ಹೋರಾಟಕ್ಕೆ ಆಕರ್ಷಿತರಾದ ಕಾ. ಭಾರತಿ ಕೆ. ಯವರನ್ನು ಅಭ್ಯರ್ಥಿಯಾಗಿ ನಿಲ್ಲಿಸಲಾಗಿದೆ ಎಂದರು.

ಈ ಚುನಾವಣೆಯಲ್ಲಿ ನಾಗರಿಕರು  ಎಲ್ಲಾ ಪಕ್ಷದ ಹಿಂದಿನ ಚುನಾವಣೆಯ ಆಶ್ವಸನೆಗಳನ್ನು  ಪ್ರಶ್ನೆ ಮಾಡಬೇಕು. ಏಕೆಂದರೆ ಯಾವ ರಾಜಕಾರಣಿಗಳು ಜನಸಾಮಾನ್ಯರ ದಿನನಿತ್ಯದ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣ, ಆರೋಗ್ಯ ಹಾಗೂ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ನೀತಿಗಳ ವಿರುದ್ದ ಮಾತನಾಡುತ್ತಿಲ್ಲ.  ಎಲ್ಲಾ ಪಕ್ಷಗಳ ಭಾವುಟಗಳು, ಅಭ್ಯರ್ಥಿಗಳು, ಸರ್ಕಾರಗಳು ಬೇರೆ ಬೇರೆ, ಆದರೆ ಅವರ ಆಡಳಿತ ಮಾತ್ರ ಬಂಡವಾಳಶಾಹಿಗಳಾದ ಅಂಬಾನಿ, ಆದಾನಿ ಯಂತವರ ಪರವಾದ ನೀತಿಗಳನ್ನು ತರುವವರೆ.  ಇಂದು ಕರ್ನಾಟಕದ ಲಕ್ಷಾಂತರ ರೈತರು, ಕಾರ್ಮಿಕರು ಶ್ರಮವಹಿಸಿ ಬೆಳೆಸಿದಂತ ಸಾರ್ವಜನಿಕ ಉದ್ದಿಮೆ ಕೆಎಮ್ ಎಫ್ (KMF) ನ  ಪರ್ಯಾಯವಾಗಿ ಅಮುಲ್ ಖಾಸಗೀ ಉದ್ದಿಮೆಗೆ ಹಸ್ತಾಂತರಿಸಲು ಹುನ್ನಾರ ನಡೆಯುತ್ತಿದೆ. ಇಂತಹ ಸಮಯದಲ್ಲಿ ಇಲ್ಲಿನ ರಾಜಕಾರಣಿಗಳು ಸಾರ್ವಜನಿಕ ಉದ್ದಿಮೆಯಾದ ಕೆಎಮ್ ಎಫ್ ನ ಉಳಿವಿಗಾಗಿ ನಿಲ್ಲುತ್ತಾರ ಎಂಬುದು ಪ್ರಶ್ನೆ ಯಾಗಿದೆ.    ಆದ್ದರಿಂದ ನಾಗರೀಕರು ಜನಸಾಮಾನ್ಯರ ದಿನನಿತ್ಯ ಬದುಕಿನ ಜ್ಬಲಂತ ಸಮಸ್ಯೆಗಳನ್ನು ಮನಗಂಡು ಹೋರಾಟ ಬೆಳೆಸುತ್ತಿರುವ ಅಭ್ಯರ್ಥಿ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕಾ. ಭಾರತಿ ಕೆ ಯವರಿಗೆ ಮತ ನೀಡುವುದರ ಮೂಲಕ ಬೆಂಬಲಿಸಬೇಕು ಎಂದು ಹೇಳಿದರು.

ಇನ್ನೋರ್ವ ಭಾಷಣಕಾರರಾಗಿ ರಾಜ್ಯ ಸಮಿತಿಯ ಸೆಕ್ರೇಟರಿಯಟ್ ಸದಸ್ಯರಾದ ಕಾ. ಸುನೀತ್ ಕುಮಾರ್ ರವರು ಮಾತನಾಡುತ್ತಾ.  ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಹಲವಾರು ಪಕ್ಷಗಳು, ನಾಯಕರು, ಸರ್ಕಾರಗಳು ಅಧಿಕಾರವನ್ನು ನಡೆಸಿವೆ. ಆದರೆ ಜನರ ಬದುಕು ಮಾತ್ರ ಬದಲಾವಣೆಯಾಗುತ್ತಿಲ್ಲ. ಏಕೆಂದರೆ ಈ ಬಂಡವಾಳಶಾಹಿ ಪರವಾದ ಸರ್ಕಾರಗಳು ಜನಸಾಮಾನ್ಯರ ಮೇಲೆ ಹೆಚ್ಚು ಹೆಚ್ಚು ತೆರಿಗೆಗಳನ್ನು ವಿಧಿಸುತ್ತಾ, ಬೆಲೆ ಏರಿಕೆಯನ್ನು ಹೆಚ್ಚಿಸುತ್ತಾ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿವೆ. ಅಷ್ಟೇ ಅಲ್ಲ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳಾದ ರೈಲ್ವೆ, ಬಿಎಸ್ ಎನ್ ಎಲ್.  ಕಲ್ಲಿದ್ದಲು, ಪೆಟ್ರೋಲಿಯಂ ಇನ್ನಿತರೆ ಖಾಸಗೀಕರಣದಿಂದ ನಿರುದ್ಯೋಗ ಭೀಕರವಾಗಿ ಬೆಳೆಯುತ್ತಿದೆ. ಒಂದು ಕಡೆ ಜನರಿಗೆ ಆದಾಯವಿಲ್ಲ, ಇನ್ನೊಂದು ಕಡೆ ಬೆಲೆ ಏರಿಕೆಯ ಬಿಸಿಯಿಂದ ಜನರಲ್ಲಿ ಬಡತನ, ಅಪೌಷ್ಟಿಕತೆ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಸರ್ಕಾರದ ನೀತಿಗಳು ಜನಪರವಾಗಿ ಬರಬೇಕಾದರೆ, ಜನ ಹೋರಾಟದ ಅಭ್ಯರ್ಥಿ ಆದ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾದ ಕಾ. ಭಾರತಿ. ಕೆ ಯವರನ್ನು ಗೆಲ್ಲಿಸಬೇಕೆಂದು ಕರೆನೀಡಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಕಾರ್ಯದರ್ಧಿಗಳಾದ ಕಾ. ಮಂಜುನಾಥ್ ಕೈದಾಳೆ ರವರು ಮಾತನಾಡುತ್ತಾ  ನಮ್ಮ ಪಕ್ಷದಲ್ಲಿ ಜನರನ್ನು ಒಲಿಸಿಕೊಳ್ಳಲು ಹಣ,‌ವಸ್ತುಗಳು, ಇಲ್ಲ. ನಮ್ಮ ಪಕ್ಷವು ಸ್ವಾತಂತ್ರ್ಯ ಹೋರಾಟದ ನಾಯಕರಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಅಸ್ಫಾಕುಲ್ಲಾ ಖಾನ್, ಸೂರ್ಯಸೇನ್, ಪ್ರೀತಿಲತಾ ವದೇಧರ್ ಇತ್ಯಾದಿ ಕ್ರಾಂತಿಕಾರಿಗಳ  ವಿಚಾರಗಳನ್ನು ಆದರ್ಶವಾಗಿ ಇಟ್ಟುಕೊಂಡು ಈ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದೇವೆ. ಅವರ ಕನಸು ದೇಶದ ಪ್ರತಿಯೊಬ್ಬ ಪ್ರಜೆಯು ನೆಮ್ಮದಿ ಬದುಕನ್ನು ನಡೆಸಬೇಕು, ಮನುಷ್ಯನಿಂದ ಮನುಷ್ಯನ ಶೋಷಣೆ ನಿಲ್ಲಬೇಕು ಎಂಬುದಾಗಿತ್ತು. ಅದು ಇನ್ನೂ ಈಡೇರಿಲ್ಲ. ಅದಕ್ಕಾಗಿ ನಮ್ಮ ಹೋರಾಟ ಮುಂದುವರೆಸಬೇಕು ಎಂದು ಹೇಳಿದರು.

ಪಕ್ಷದ ಅಭ್ಯರ್ಥಿಯಾಗಿ ಕಾ. ಭಾರತಿ ಯವರು, ನಮ್ಮ ಪಕ್ಷ ಹೋರಾಟದ ಪಕ್ಷ ಈ ಚುನಾವಣೆಯನ್ನು ಸಹ ಹೋರಾಟದ ಭಾಗವಾಗಿ ತೆಗೆದುಕೊಂಡಿದ್ದೇವೆ. ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಭಾಗದಲ್ಲಿ ಜನರಿಗೆ ಸರಿಯಾಗಿ ವಸತಿ ಸೌಲಭ್ಯ, ರಸ್ತೆ, ಒಳ ಚರಂಡಿ, ಸುಸಜ್ಜಿತವಾದ ಶಾಲಾ ಕಾಲೇಜುಗಳಿಗಾಗಿ ನಮ್ಮ ಧ್ವನಿಯನ್ನು ಈ ಹಿಂದೆ ಎತ್ತಿದ್ದೇವೆ. ಮುಂದೆಯೂ ನಮ್ಮ ಹೋರಾಟವನ್ನು ವಿಧಾನ ಸಭಾ ಸದಸದಲ್ಲೂ ಮುಂದುವರೆಸುತ್ತೇವೆ ಎಂಬ ಭರವಸೆಯನ್ನು ನೀಡುತ್ತೇವೆ ಎಂದು ಹೇಳಿದರು.

ಈ ಬಹಿರಂಗ ಸಭೆಯಲ್ಲಿ  ಜಿಲ್ಲಾ ನಾಯಕರಾದ ಮಂಜುನಾಥ್ ಕುಕ್ಕುವಾಡ, ವಸುಧೇಂದ್ರ, ಟಿವಿಎಸ್ ರಾಜು, ಮಧು ತೊಗಲೇರಿ, ತಿಪ್ಪೇಸ್ವಾಮಿ ಅಣಬೇರು, ಪೂಜಾ, ಕಾವ್ಯ, ಪರಶುರಾಮ, ಗುರು, ಪ್ರಕಾಶ್, ಮಮತಾ, ಸರಸ್ವತಿ,‌ಸ್ಮಿತಾ, ನಾಗಜ್ಯೋತಿ ಇನ್ನೂ ಹಲವಾರು ಕಾರ್ಯಕರ್ತರು ಭಾಗವಹಿ


ಸದ್ದರು.

Leave a Reply

Your email address will not be published. Required fields are marked *

error: Content is protected !!