Caste: ಜಾತಿ ಜನಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ, ರಾಜ್ಯ ಸರ್ಕಾರ ಜನರನ್ನ ದಿಕ್ಕುತಪ್ಪಿಸುತ್ತಿದೆ – ರಂಭಾಪುರಿ ಶ್ರೀ

ದಾವಣಗೆರೆ: (Caste) ಜಾತಿ ಜನಗಣತಿಯನ್ನ ಕೇಂದ್ರ ಸರ್ಕಾರ ಮಾಡುತ್ತಿದೆ ಆದ್ರೆ ಜನರನ್ನ ದಿಕ್ಕು ತಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಜಾತಿ ಜನಗಣತಿ ರಾಜ್ಯ ಸರ್ಕಾರ ಮಾಡುವಂತಿಲ್ಲ ಎಂದು ದಾವಣಗೆರೆಯಲ್ಲಿ ಬಾಳೆಹೊನ್ನೂರಿನ ರಂಬಾಪುರಿ ಪೀಠದ ಶ್ರೀ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿಗಳು ಹೇಳಿಕೆ ನೀಡಿದ್ದಾರೆ.
ದಾವಣಗೆರೆ ನಗರದ ಶ್ರೀ ಶೈಲ ಮಠದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ರನ್ನು ಛಿದ್ರ ಛಿದ್ರ ಮಾಡಿದರೆ ರಾಜಕೀಯವಾಗಿ ಬೆಳೆಯಬಹುದು ಎಂದು ಕೆಲ ರಾಜಕೀಯ ಮುಖಂಡರು ಅಂದುಕೊಂಡಿದ್ದಾರೆ. ಅದು ಎಂದು ಕೂಡ ಸಾಧ್ಯ ವಾಗುವುದಿಲ್ಲ ಈ ವೀರಶೈವ ಲಿಂಗಾಯತ ಶಕ್ತಿ ಏನು ಅನ್ನುವುದು ಎಲ್ಲರಿಗೂ ಗೊತ್ತಿದೆ. ಇಸ್ಲಾಂ ಧರ್ಮದಲ್ಲಿ ಎಷ್ಟು ಒಳ ಒಂಗಡಗಳು ಇದ್ದರೂ ಇಸ್ಲಾಂ ಎಂದು ಸೇರಿಸಿದ್ದಾರೆ. ಅದೇ ರೀತಿ ವೀರೇಶ್ವವ ಲಿಂಗಾಯತ ಒಳಪಂಗಡಗಳು ವೀರಶೈವ ಲಿಂಗಾಯತ ಎಂದು ಬರೆಸಿದರೆ ಎಲ್ಲಾ ಧರ್ಮ ಜಾತಿಗಿಂತ ಮೊದಲ ಸ್ಥಾನದಲ್ಲಿ ಇರುತ್ತೇವೆ ಎಂದರು.
ಕೇಂದ್ರ ಸರ್ಕಾರ ಈಗ ಜನಗಣತಿ ಜೊತೆ ಜಾತಿ ಗಣತಿಯನ್ನು ಮಾಡುತ್ತಿದೆ ಈ ವಿಚಾರವಾಗಿ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ರಾಜ್ಯ ಅಧ್ಯಕ್ಷ ಶಂಕರ್ ಬಿದರಿ ಅವರ ಜೊತೆ ಸಭೆ ನಡೆಸಲಾಗಿದೆ ಇದೇ ತಿಂಗಳ 21 ಮತ್ತು 22 ರಂದು ನಡೆಯುವ ಸಮಾವೇಶದ ಮೂಲಕ ನಮ್ಮ ಸಮಾಜದ ದಿಕ್ಸೂಚಿ ಏನು ಎನ್ನುವುದು ಗೊತ್ತಾಗುತ್ತದೆ.
ಎರಡು ದಿನ ನಡೆಯುವ ಸಮಾವೇಶದಲ್ಲಿ ಧಾರ್ಮಿಕ ಆಂತರಿಕ ಚರ್ಚೆಗಳನ್ನು ಚರ್ಚಿಸಿ ಸಭೆ ನಡೆಸಲಾಗುವುದು ರಂಭಾಪುರಿ ಶ್ರೀ ಹೇಳಿಕೆ ನೀಡಿದ್ದಾರೆ.