ಇಂದಿನಿಂದ ಸಿಬಿಎಸ್‌ಸಿ 10-12ನೇ ತರಗತಿ ಪರೀಕ್ಷೆಗಳು ಆರಂಭ

CBSE Class 10-12 Exams Begin From Today

ಪರೀಕ್ಷೆಗಳು ಆರಂಭ

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 10ನೇ ಮತ್ತು 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಎರಡೂ ತರಗತಿಗಳ ಪರೀಕ್ಷೆಗಳು ಫೆಬ್ರುವರಿ 15ರಂದೇ ಆರಂಭವಾಗಲಿವೆ ಎಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
10ನೇ ತರಗತಿ ಪರೀಕ್ಷೆ ಫೆಬ್ರುವರಿ 15ರಿಂದ ಆರಂಭವಾಗಿ ಮಾರ್ಚ್ 21ಕ್ಕೆ ಮುಕ್ತಾಯವಾಗಲಿವೆ. ಹಾಗೇ 12ನೇ ತರಗತಿ ಪರೀಕ್ಷೆ ಫೆಬ್ರುವರಿ 15ರಂದು ಪ್ರಾರಂಭವಾಗಿ, ಏಪ್ರಿಲ್ 5ಕ್ಕೆ ಮುಕ್ತಾಯವಾಗಲಿದೆ.
10ನೇ ತರಗತಿಯಲ್ಲಿ 21,86,940 ಹಾಗೂ 12ನೇ ತರಗತಿಯಲ್ಲಿ 16,96,770 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!