CDS Bipin Rawat No More: ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪತ್ನಿ ಸೇರಿದಂತೆ 13 ಜನರು ವಿಧಿವಶ.! ಟ್ವಿಟರ್ ಮೂಲಕ ಮಾಹಿತಿ ತಿಳಿಸಿದ ಸೇನೆ.!
ಊಟಿ ತಮಿಳುನಾಡು: ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಪತನಗೊಂಡಿದೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ ಹೆಲಿಕಾಪ್ಟರ್ ಅಪಘಾತದಲ್ಲಿ 13 ಜನರು ಮೃತಪಟ್ಟಿರುವುದು ದೃಢಪಟ್ಟಿದೆ.
ತಮಿಳುನಾಡಿನ ಊಟಿ ಬಳಿ ಅಪಘಾತ ಸಂಭವಿಸಿತ್ತು. ಬ್ರಿಗೇಡಿಯರ್ ಜನರಲ್ ಪಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 14 ಸೈನಿಕರು ಕೊಯಮತ್ತೂರಿನಿಂದ ವೆಲ್ಲಿಂಗ್ಟನ್‌ಗೆ IAF Mi = 175V ಸೇನಾ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು.
ಜನರಲ್ ರಾವತ್ ಅವರ ಮೃತಪಟ್ಟಿರುವ ಬಗ್ಗೆ ಸೇನೆ ಮಾಹಿತಿ ನೀಡಿದೆ. ಸೇನಾ ಹೆಲಿಕಾಪ್ಟರ್ ನಲ್ಲಿ ಹದಿನಾಲ್ಕು ಮಂದಿ ಇದ್ದರು.
ರಕ್ಷಿಸಲ್ಪಟ್ಟ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್ ಕಂಟೋನ್ಮೆಂಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂರು ಸೇನೆಗಳ ಮುಖ್ಯಸ್ಥ ಸಿಡಿಎಸ್ ಬಿಪಿನ್ ರಾವತ್ ಹಾಗೂ ಅವರ ಕುಟುಂಬಸ್ಥರ ಸೇನಾ ತುಕಡಿಯ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು.
ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ, ರಕ್ಷಣಾ ಸಹಾಯಕರು, ಭದ್ರತಾ ಕಮಾಂಡೋಗಳು ಮತ್ತು ಐಎಎಫ್ ಪೈಲಟ್ ಅವರು ಮಿ-ಸಿರೀಸ್ ಚಾಪರ್‌ನಲ್ಲಿದ್ದ ಸಂದರ್ಭದಲ್ಲಿ ತಮಿಳುನಾಡಿನ ಕೊಯಮತ್ತೂರು ಮತ್ತು ಸೂಲೂರು ನಡುವೆ ಅಪಘಾತಕ್ಕೀಡಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಜೊತೆಗೆ ರಕ್ಷಣಾ ಸಚಿವರು ಘಟನಾ ಸ್ಥಳಕ್ಕೆ ತೆರಳುತ್ತಿದ್ದು, ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.