ಅನುಮತಿ ಪಡೆಯದೇ ಸಿಮೆಂಟ್ ರಸ್ತೆ ಕಟ್ ಪ್ರಕರಣ; ಸ್ಮಾರ್ಟ್ ಸಿಟಿ, ಪಾಲಿಕೆ ಅಧಿಕಾರಿಗಳು, ಜೆಸಿಬಿ ಡ್ರೈವರ್, ಗುತ್ತಿಗೆದಾರನ ವಿರುದ್ದ ಎಫ್ ಐ ಆರ್

ದಾವಣಗೆರೆ: ದಾವಣಗೆರೆ ನಗರದ ಎವಿಕೆ‌ ಕಾಲೇಜು ರಸ್ತೆಯಲ್ಲಿ ಅಕ್ಟೋಬರ್ ಎರಡನೇ ತಾರೀಖು ರಾತ್ರಿ ವೇಳೆಯಲ್ಲಿ ಪೊಲೀಸ್ ಬ್ಯಾರಿಕೇಡ್ ಗಳನ್ನು ರಸ್ತೆಗೆ ಅಡ್ಡಲಾಗಿ ಹಾಕಿ ಸಿಮೆಂಟ್ ರಸ್ತೆ ಕಟ್ ಮಾಡುತ್ತಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ನೀಡಿದ ದೂರಿಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಜೆಸಿಬಿ ಡ್ರೈವರ್, ಬಸ್ ಶೆಲ್ಟರ್ ನಿರ್ಮಾಣಕ್ಕೆ ಸಂಬಂಧಿಸಿದ ಸ್ಮಾರ್ಟ್ ಸಿಟಿಯ ಅಧಿಕಾರಿಗಳು, ವಾರ್ಡ್ ಗೆ ಸಂಬಂಧಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿದಂತೆ ಗುತ್ತಿಗೆದಾರರ ವಿರುದ್ದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ

ಅಕ್ಟೋಬರ್ ಎರಡರ ರಾತ್ರಿ ರಸ್ತೆ ಕಟ್ ಮಾಡುವ ಚಿಚಾರ ನೋಡಿದ ಮಹಾವೀರ ಸಾಮಾಜಿಕ ಕಾರ್ಯಕರ್ತರು ಸ್ಥಳಕ್ಕೆ ಹೋಗಿ ವಿಚಾರ ಮಾಡಲಾಗಿದ್ದು,  ಇದು ಸ್ಮಾರ್ಟ್ ಸಿಟಿ ಬಸ್ ನಿಲ್ದಾಣಕ್ಕೆ ವಿದ್ಯುತ್ ಸಂಪರ್ಕವನ್ನು ನೀಡಲು ಕೇಬಲ್ ಹಾಕುವ ಸಲುವಾಗಿ ರಸ್ತೆ ಕಟ್ ಮಾಡುತ್ತಿದ್ದೇವೆ ಎಂದು ಜೆ ಸಿ ಬಿ ಚಾಲಕ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಾಮಾಜಿಕ ಕಾರ್ಯಕರ್ತ ಎಂ ಜಿ ಶ್ರೀಕಾಂತ್ ಅಲ್ಲೆ ಸಮೀಪದಲ್ಲಿ ಸರ್ವಿಸ್ ಗ್ಯಾಪ್ ಇದ್ದರೂ ಸಹ ಯಾಕೆ ರಸ್ತೆ ಅಗೆತ ಎಂದು ರಸ್ತೆ ಕಟಾವು ಮಾಡಲು ಬಂದವರಿಗೆ ಕೇಳಿದ್ದಾರೆ.ಈ ಬಗ್ಗೆ ಸ್ವಾರ್ಟ ಸಿಟಿ ಎಂ ಡಿ ಅವರಿಗೆ ಕರೆ ಮಾಡಿದಾಗ ಕೆಲಸವನ್ನು ‌ನಿಲ್ಲಿಸಲು ಕಾರ್ಮಿಕರಿಗೆ ಸೂಚಿಸಿದರಂತೆ.

ರಸ್ತೆ ಬಂದ್ ಮಾಡಲು ಪೊಲೀಸ್ ‌ಅನುಮತಿ ಪಡೆಯದೇ ಹಾಗೂ ‌ರಸ್ತೆ ಅಗೆತ ಮಾಡಲು ಪಾಲಿಕೆಯಿಂದ ಅನುಮತಿಯನ್ನು ‌ಪಡೆಯದೇ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕಳೆದ ಎರಡು ವರ್ಷಗಳ ಕಾಲ ಈ ಬಸ್ ನಿಲ್ದಾಣ ಕ್ಕೆ ಲೈಟ್ ಹಾಕದೇ ಬಿಟ್ಟಿದ್ದರು ಈಗ ಎಕಾ ಏಕಿ ವಿದ್ಯುತ್ ಸಂರ್ಪಕ ಅಳವಡಿಸಲು ‌ಬಂದಿದ್ದಾರೆ ಎಂದು 112 ಗೆ ಕರೆ ಮಾಡಿದಾಗ ಬಡಾವಣೆ ಪೊಲೀಸ್ ಠಾಣೆಯ ವಶಕ್ಕೆ ಜೆ ಸಿ ಬಿ ಯನ್ನು ಪಡೆದಿದ್ದಾರೆ.

ನಗರದ ಅನೇಕ ಕಡೆ ಬಸ್ ನಿಲ್ದಾಣ ಗಳ ಬಳಿ ಸ್ವಚ್ಚತೆ ಇಲ್ಲಾ .ಬಸ್ ನಿಲ್ದಾಣದ ಗುತ್ತಿಗೆದಾರ ಯಾರು? ಬಸ್ ನಿಲ್ದಾಣ ಕ್ಕೆ ನೀಡಿರುವ ನಿಯಮಗಳೇನು ಎಂಬುದರ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಉತ್ತರ ನೀಡಬೇಕಿದೆ. ಇಲ್ಲಿಯ ತನಕ ಯಾಕೆ ವಿದ್ಯುತ್ ಸಂಪರ್ಕ  ನೀಡಿಲ್ಲಾ. ವಿದ್ಯುತ್ ‌ಸಂಪರ್ಕ ನೀಡಲು ‌ಬೆಸ್ಕಾಂ‌ನವರು ಅನುಮತಿ ‌ನೀಡಿದರೆ ಸಾಕೆ. ರಸ್ತೆ ಅಗೆಯಲು ‌ರಸ್ತೆ ಬಂದ್ ಮಾಡಲು ಪಾಲಿಕೆ ಪೊಲೀಸ್ ಇಲಾಖೆಯ ಅನುಮತಿ ಬೇಡವೇ ಎಂಬುದು ಸಾಮಾಜಿಕ ಕಾರ್ಯಕರ್ತರ ಪ್ರಶ್ನೆಯಾಗಿದೆ.

ಈ ವಿಚಾರವಾಗಿ ಬಡಾವಣೆ ಪೊಲೀಸ್ ಠಾಣೆಯವರು ಎರಡು ಬಾರಿ ರಸ್ತೆ ಕಟ್ ಮಾಡುವ ವಿಚಾರಕ್ಕೆ ಮಾಹಿತಿಯನ್ನು ಲಿಖಿತವಾಗಿ ಕೇಳಿದರೂ ಯಾವುದೇ ಪ್ರತಿಕ್ರಿಯೆ ನೀಡದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಎಫ್ ಐ ಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!