CEN DYSP: ಬಂಕಾಳಿ ನಾಗಪ್ಪ ದಾವಣಗೆರೆ ಸಿಇಎನ್ ಠಾಣೆಗೆ, ಪದ್ಮಶ್ರೀ ಗುಂಜೀಕರ್ ಲೋಕಾಯುಕ್ತ ಇಲಾಖೆಗೆ ವರ್ಗಾವಣೆ

ದಾವಣಗೆರೆ: (CEN DYSP) ದಾವಣಗೆರೆ ಜಿಲ್ಲೆಯ ಸೈಬರ್, ಎನ್ ಫೋರ್ಸ್ ಮೆಂಟ್, ನಾರ್ಕೋಟಿಕ್ಸ್ (ಸಿಇಎನ್) ಠಾಣೆ ಬಂಕಾಳಿ ನಾಗಪ್ಪ ಡಿ ವೈ ಎಸ್ ಪಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ. ಇವರು ಈ ಹಿಂದೆ ದಾವಣಗೆರೆ ಜಿಲ್ಲೆಯ ಗುಪ್ತಚರ ಇಲಾಖೆಯ ಡಿ ವೈ ಎಸ್ ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸಿಇಎನ್ ಠಾಣೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪದ್ಮಶ್ರೀ ಗುಂಜೀಕರ್ ಅವರನ್ನು ಕರ್ನಾಟಕ ಲೋಕಾಯುಕ್ತ ಕಛೇರಿಗೆ ವರ್ಗಾವಣೆ ಮಾಡಲಾಗಿದೆ. ಪದ್ಮಶ್ರೀ ಅವರು ದಾವಣಗೆರೆಯಲ್ಲಿ ಅತ್ಯುತ್ತಮವಾಗಿ ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದರು. ಪ್ರಮುಖವಾಗಿ ಮಾದಕ ವಸ್ತುಗಳ ಪತ್ತೆ ಕಾರ್ಯ, ಸೈಬರ್ ವಂಚನೆಯ ಪ್ರಕರಣಗಳ ಪತ್ತೆಕಾರ್ಯ ನಿರ್ವಹಣೆ ಮಾಡಿದ್ದರು.