Census: ಗಣತಿ ಕಾರ್ಯಕ್ಕೆ ಪಾಲಿಕೆ ಸಿಬ್ಬಂದಿ.! ದಾವಣಗೆರೆ ಮಹಾನಗರ ಪಾಲಿಕೆ ಖಾಲಿ ಖಾಲಿ

ದಾವಣಗೆರೆ: (Census) ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯವನ್ನು ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯವನ್ನು ಸೆ.22 ರಂದಿ ಅ.7 ರವರೆಗೆ ಆಯೋಜಿಸಲಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕಾಗುತ್ತದೆ. ಅದ್ದರಿಂದ ಪಾಲಿಕೆಯ ಕೇಂದ್ರ ಕಛೇರಿ ಸೇರಿದಂತೆ ಮೂರು ವಲಯದಿಂದ ನೂರಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಗಣತಿ ಕಾರ್ಯಕ್ಕೆ ನೇಮಿಸಲಾಗಿದೆ.
ದಿನಾಂಕ 22/09/2025 ರಿಂದ ಮಹಾನಗರ ಪಾಲಿಕೆಯಲ್ಲಿ ಸಿಗುವ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿತ ಗೊಂಡಿದ್ದು, ಸಾರ್ವಜನಿಕರಿಗೆ ಸಿಗಬೇಕಾದ ಇ ಸ್ವತ್ತು, ಖಾತೆ ಬದಲಾವಣೆ, ಕಟ್ಟಡ ಪರವಾನಗಿ, ಕಂದಾಯ ರಶೀದಿ, ಕಾಮಗಾರಿಗಳ ಮೇಲ್ವಿಚಾರಣೆಗಳಂತಹ ಸೇವೆಗಳು ಸಂಪೂರ್ಣವಾಗಿ ನಿಂತುಹೋಗಿದ್ದು ಸಾರ್ವಜನಿಕರು ಪರದಾಡುವಂತೆ ಅಗಿದೆ.
ಪಾಲಿಕೆಯ ಸಿಬ್ಬಂದಿ ಇಲ್ಲದೆ ಕಚೇರಿ ಖಾಲಿ ಖಾಲಿಯಾಗಿ ಗೋಚರಿಸುತ್ತವೆ. ಗಣತಿಗಾಗಿ ತೇರಳಿರುವ ಸಿಬ್ಬಂದಿಯ ಮೊಬೈಲ್ ನಲ್ಲಿ ಆ್ಯಪ್ ಸರಿಯಾಗಿ ಕಾರ್ಯ ನಿರ್ವಹಿಸದೆ ತೊಂದರೆ ಅನಿಭವಿಸುತ್ತಿದ್ದಾರೆ, ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಹಾಗೆ ಮೊಬೈಲ್ ಹಿಡಿದುಕೊಂಡು ಹೋಗುವ ಅಧಿಕಾರಿಗಳ ಕಷ್ಟ ಅಷ್ಟಿಷ್ಟಲ್ಲ ಎನ್ನುತ್ತಿದ್ದಾರೆ. ಕೆಲ ಸಿಬ್ಬಂದಿಗಳ ಮೊಬೈಲ್ ಬಿಸಿಯಾಗುತ್ತಿದೆ, ಚಾರ್ಜಿಂಗ್ ಸಮಸ್ಯೆ, ಕರೆನ್ಸಿ ಸಮಸ್ಯೆ ಹೀಗೆ ಅನೇಕ ತೊಂದರೆ ಅನುಭವಿಸುತ್ತಿರುವುದು ಕಂಡುಬರುತ್ತಿದೆ. ಶಿಕ್ಷಕರಿಗೆ ನೀಡದಂತೆ ಗಣತಿ ಕಾರ್ಯದ ಕಿಟ್ ಕೂಡ ಪಾಲಿಕೆ ಸಿಬ್ಬಂದಿಗಳಿಗೆ ನೀಡಿಲ್ಲವಂತೆ.
ಇನ್ನೂ ಪಾಲಿಕೆಗೆ ಆಗುಮಿಸುವ ಸಾರ್ವಜನಿಕರಿಗೆ ಸಕಾಲದಲ್ಲಿ ಅರ್ಜಿ ಸಲ್ಲಿಸಿದ ನಂತರ ಸೂಕ್ತ ಕಾಲಾವಧಿಯಲ್ಲಿ ಅರ್ಜಿಯನ್ನು ವಿಲೇವಾರಿ ಮಾಡಬೇಕು ಆದರೆ ಗಣತಿ ಕಾರ್ಯದಲ್ಲಿ ಇರುವ ಸಿಬ್ಬಂದಿ ಬಳಿ ಅರ್ಜಿಗಳು ಪೆಂಡಿಂಗ್ ಉಳಿದರೆ ಹಿರಿಯ ಅಧಿಕಾರಿಗಳು ನೋಟೀಸ್ ಪತ್ರಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಒಟ್ಟಾರೆ ಪಾಲಿಕೆಯ ಕಾರ್ಯಗಳು ಸಾರ್ವಜನಿಕರಿಗೆ ಸೂಕ್ತವಾಗಿ ಸಿಗುವಂತೆ ಹಾಗೂ ಗಣತಿ ಕಾರ್ಯಕ್ರಮ ಸುಸೂತ್ರವಾಗಿ ನಡೆಯುವಂತೆ ಹಿರಿಯ ಅಧಿಕಾರಿಗಳು ಗಮನಹರಿಸಲು ಕ್ರಮ ಕೈಗೊಳ್ಳಲು ಸಾರ್ವಜನಿಕರ ಒತ್ತಾಯವಾಗಿದೆ.