ಕೇಂದ್ರ ಬಜೆಟ್: ಸಿಬಿಐಗೆ 946 ಕೋಟಿ ರೂ.

ಕೇಂದ್ರ ಬಜೆಟ್
ದೆಹಲಿ: ಕೇಂದ್ರ ಸರ್ಕಾರ 2023–24ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) 946 ಕೋಟಿ ರೂ. ನೀಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅನುದಾನ ಶೇಕಡ 4.4ರಷ್ಟು ಹೆಚ್ಚಾಗಿದೆ. ದೇಶದ ಅತ್ಯುನ್ನತ ತನಿಖಾ ಸಂಸ್ಥೆ ವಿವಿಧ ರಾಜ್ಯಗಳು, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಿಂದ ಹಸ್ತಾಂತರಿಸಲ್ಪಟ್ಟ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ದೇಶದಲ್ಲಿನ ಬಹುತೇಕ ಅಪರಾಧ ಮತ್ತು ವಂಚನೆ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ತನ್ನ ಮಾನವಸಂಪನ್ಮೂಲವನ್ನು ಸಾಕಷ್ಟು ವಿಸ್ತರಿಸಿಕೊಂಡಿದೆ. 2022–23ರ ಬಜೆಟ್‌ನಲ್ಲಿ ಸಂಸ್ಥೆಗೆ 841.9 ಕೋಟಿ ರೂ. ಲಭಿಸಿತ್ತು
ಹಾಗೆಯೇ 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ 5.94 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ಬಾರಿ ರಕ್ಷಣಾ ವಲಯಕ್ಕೆ 5.25 ಕೋಟಿ ಮೀಸಲಿಡಲಾಗಿತ್ತು.
