ಸಿಇಓ ಗಳು ಖಡ್ಡಾಯವಾಗಿ ಗ್ರಾಮಪಂಚಾಯತ್ ಗಳಿಗೆ ಭೇಟಿ ನೀಡಿ,ಜಲಜೀವನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ- ಈಶ್ವರಪ್ಪ
ಸಿಇಓ ಗಳು ಖಡ್ಡಾಯವಾಗಿ ಗ್ರಾಮಪಂಚಾಯತ್ ಗಳಿ
ಬೆಂಗಳೂರು: ಇಂದು ವಿಧಾನಸೌಧದ ಮೂರನೆ ಮಹಡಿಯ 334 ರ ಕೊಠಡಿಯಲ್ಲಿ ನಡೆದ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಸಿಇಓ ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ
ಮಾನ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ
ಶ್ರೀ ಕೆ ಎಸ್ ಈಶ್ವರಪ್ಪ ರವರು
ಮಾತನಾಡಿ
ಖಡ್ಡಾಯವಾಗಿ ಎಲ್ಲ ಸಿಇಓ ಗಳು ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿ
ಜಲಜೀವನ ಯೊಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು
ಆದೇಶಿಸಿದರು.
ಮನೆ ಮನೆಗೆ ಗಂಗೆ. ಎಲ್ಲರ ಮನೆಗಳಿಗೂ ನೀರು ತಲುಪಿಸುವ ಕಾರ್ಯ ಚುರುಕಗೊಳಿಸಬೇಕು.
ಕೇವಲ ಪೇಪರ್ ಲ್ಲಿ ಬೇಡ
ಎಲ್ಲರೂ ಫೀಲ್ಡ್ ಗೆ ಇಳಿದು ಕೆಲಸ ಮಾಡಿ ಎಂದು ಖಡಕ್ಕಾಗಿ ತಿಳಿಸಿದರು.
ನೀರು ಸರಬರಾಜಿಗೆ ಬಳಸುವ ಪೈಪ್ ಗಳ ಬಗ್ಗೆ ಸಾಕಷ್ಟು ಆರೋಪಗಳಿಗೆ ಅದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ನಂತರ ನೀಡುವ ಪೈಪ್ ಅಳತೆ ಬಗ್ಗೆ ಹೀಗೆ ಹಲವಾರು ಲೋಪದೋಷಗಳು ಅದರಲ್ಲಿದ್ದು ಅವುಗಳನ್ನೆಲ್ಲ ವ್ಯವಸ್ಥಿತವಾಗಿ ಪರಿಹರಿಸಿ ಎಲ್ಲರಿಗೂ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ನಂತರ ಮಾತನಾಡಿ ನರೇಗಾ ಯೋಜನೆಯ ಮಟೀರಿಯಲ್ ಬಿಲ್ ಬಗ್ಗೆನೂ ಕೂಡ ಸಾಕಷ್ಟು ಆರೋಪಗಳಿಗೆ ಕೂಡಲೇ ಅವುಗಳ ಬಿಲ್ ಬಗ್ಗೆ ಯೋಜನೆಗೆ ಸಂಬಂಧಿಸಿದಂತೆ ಬಿಲ್ ಬಿಡುಗಡೆಗೊಳಿಸಬೇದು ಅದಕ್ಕೆ ಇರುವ ಅಡೆತಡೆಗಳನ್ನು ಬಗೆಹರಿಸಿಕೊಳ್ಳಬೇಕೆಂದರು.
ಇನ್ನೂ ಮಾನವ ದಿನಗಳ ಬಗ್ಗೆ ಈಗಾಗಲೇ ನಾವು ಕೊಟ್ಟಿರುವ ಗುರಿ ತಲುಪಿ ಎಲ್ಲರಿಗೂ ಕೂಲಿ ಸಿಗುಂತಾಗಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ನಲ್ಲಿ ಜಿಲ್ಲೆ ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಗಳ ಮಟ್ಟದಲ್ಲಿ ಬಾಕಿ ಇರುವ ಕಡತಗಳಿಗೆ ಕೊನೆಗಾನಿಸಬೇಕು. ತಾಲ್ಲೂಕು ಪಂಚಾಯತ್ ಅಧಿಕಾರಿಗಳ ಕಾರ್ಯವೈಖರಿ ಚುರುಕುಗೊಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಶ್ರಿ ಎಲ್ ಕೆ ಅತೀಕ್, ಇಲಾಖೆ ಆಯುಕ್ತರಾದ ಶ್ರೀಮತಿ ಶಿಲ್ಪಾ ನಾಗ್, ಮತ್ತು ಸಚಿವರ ವಿಶೇಷಾಧೀಕಾರಿ ಶ್ರೀ ಜಿ ಜಯರಾಂ, ಸಚಿವರ ಆಪ್ತ ಕಾರ್ಯದರ್ಶಿ ಶ್ರೀ ಸಿ.ಎಮ್.ಮಂಜುನಾಥ್, ಎಲ್ಲ ಜಿಲ್ಲಾ ಪಂಚಾಯತ್ ನ ಸಿಇಓ ಗಳು ಭಾಗವಹಿಸಿದ್ದರು.