Chalukya: ಹಾದಿಮನಿ ಡಾಕ್ಟರ್ ಕೈ ಗುಣ ಬಾಳ ಚೊಲೋ ಐತ್ರಿ ಅಂತಾರೆ ಜನ: ಅಂತಹ ವೈದ್ಯರ ಸೇವೆಯ ಸುವರ್ಣ ಮಹೋತ್ಸವಕ್ಕೆ ಸಜ್ಜಾದ ಚಾಲುಕ್ಯರ ನಾಡು

ಬಾದಾಮಿ: (Chalukya) ತಮ್ಮ ಇಡೀ ವೈದ್ಯಕೀಯ ಸೇವೆಯನ್ನು ಗ್ರಾಮೀಣದವರ ಸೇವೆಗಾಗಿ ಮುಡಿಪಿಟ್ಟ ವೈದ್ಯ ಡಾ!ಲಿಂಗಪ್ಪ.ಮಾಗುಂಡಪ್ಪ.ಹಾದಿಮನಿ ವೈದ್ಯರಿಗೆ ವೈದ್ಯಕಿಯ ಸೇವೆಯ ಸುವರ್ಣ ಮಹೋತ್ಸವದ ಮೂಲಕ ಅಭಿನಂದನೆ ಸಲ್ಲಿಸಲು ಸಜ್ಜಾಗಿದೆ ಚಾಲುಕ್ಯರ ನಾಡಿನ ಯೋಧರ ಗ್ರಾಮ ಚೊಳಚಗುಡ್ಡ.
ವೈದ್ಯೋ ನಾರಾಯನೋ ಹರಿ ಎಂಬಂತೆ” ಚಾಲುಕ್ಯರ ನಾಡು ಬಾದಾಮಿ ತಾಲ್ಲೂಕಿನ ಯೋಧರ ಗ್ರಾಮ ಎಂದೇ ಹೆಸರುವಾಸಿಯಾದ ಚೊಳಚಗುಡ್ಡ ಗ್ರಾಮದ ಹಾದಿಮನಿ ಡಾಕ್ಟರ್ ಎಂದರೆ ಗ್ರಾಮೀಣ ಭಾಗದ ಜನರ ಆರೋಗ್ಯ ಏರುಪೇರಾದರೆ ಹಾದಿಮನಿ ಡಾಕ್ಟರ್ ಕೈ ಗುಣ ಬಾಳ ಚೊಲೋ ಐತಿ ನನ್ನ ಮೈಯಾಗಿನ ಜಡ್ಡ ಕಡಿಮ್ಯಾಗಿಬಿಡತ್ತ ನೋಡು ಎನ್ನುವುದು ಚೊಳಚಗುಡ್ಡ ಗ್ರಾಮದ ನಿವಾಸಿಗಳು ಮಾತಾಡೋ ಆಡು ಭಾಷೆಯ ಮಾತುಗಳು ಇವು. ಅಷ್ಟರ ಮಟ್ಟಿಗೆ ಡಾ!! ಎಲ್.ಎಂ. ಹಾದಿಮನಿ ವೈದ್ಯರು ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಅನುಭವಿಗಳು ಎನ್ನುವುದು ತಿಳಿದುಬರುತ್ತದೆ..
ಡಾ!! ಲಿಂಗಪ್ಪ.ಮಗುಂಡಪ್ಪ.ಹಾದಿಮನಿ ವೈದ್ಯರು ಚಾಲುಕ್ಯರ ನಾಡು ಬಾದಾಮಿ ತಾಲ್ಲೂಕಿನ ಚೊಳಚಗುಡ್ಡ ಹುಟ್ಟೂರು.ತಮ್ಮ ಶಿಕ್ಷಣ ಪಡೆದ ಸಂದರ್ಭದಲ್ಲಿ ಸಹಾಯ ಮಾಡಿದವರ ಮಹನೀಯರ ಬಗ್ಗೆ ಡಾ!! ಎಲ್.ಎಮ್.ಹಾದಿಮನಿ ವೈದ್ಯರು ತಮ್ಮ ಮನದಾಳದ ನೈಜ ಮಾತುಗಳನ್ನು ಹೇಳಿಕೊಂಡಿರುವುದು ಹೀಗೆ,
ಚಾಲುಕ್ಯರ ನಾಡು ಬಾದಾಮಿಯ ಪಕ್ಕದ ಗ್ರಾಮ ಚೊಳಚಗುಡ್ಡ್ ಗ್ರಾಮ ಭಾರತೀಯ ಸೇನೆಗೆ ಅತಿ ಹೆಚ್ಚು ಸೈನಿಕರನ್ನು ಸೇವೆಗೆ ನೀಡಿರುವ ಹೆಗ್ಗಳಿಕೆಗೂ ಈ ಗ್ರಾಮ ಹೆಸರುವಾಸಿ.. ಸವದತ್ತಿಯ ಶ್ರೀ ವಿ.ಸಿ. ಹಿರೇಮಠ ಅವರಂತಹ ಮಹಾನುಭಾವರು ಬಾದಾಮಿ ಪಿ.ಡಬ್ಲೂ.ಡಿ.ಯಲ್ಲಿ ಕಾರ್ಯನಿರ್ವಸುತ್ತಿರುವಾಗ ಸುದೈವಶಾತ್ ಅವರ ಪರಿಚಯವಾಗಿ ವೈದ್ಯಕಿಯ ಶಿಕ್ಷಣ ಪೂರೈಸಲು ಮಾರ್ಗದರ್ಷನ ಮಾಡಿದರು.
ಅಲ್ಲದೇ ಬೆಳಗಾವಿಯ ಹೋಮಿಯೋಪತಿ ಮೆಡಿಕಲ್ ಕಾಲೇಜಿನಲ್ಲಿ ನನಗೆ ಪ್ರವೇಶ ದೊರಕಿಸಿಕೊಟ್ಟು ಪೂಜ್ಯ ಶ್ರೀ ಡಾ!! ಶಿವಬಸವ ಮಹಾಸ್ವಾಮಿಗಳು ರುದ್ರಾಕ್ಷಿಮಠ ನಾಗನೂರ ಬೆಳಗಾವಿಯ ಉಚಿತ ಪ್ರಸಾದ ನಿಲಯದಲ್ಲಿ ವಸತಿ ಹಾಗೂ ಪ್ರಸಾದದ ವ್ಯವಸ್ಥೆ ಮಾಡಿದ ಅವರ ಈ ಉಪಕಾರವನ್ನು ನನ್ನ ಜೀವನದುದ್ದಕ್ಕೂ ಸ್ಮರಿಸುತ್ತಾ ಅವರಿಗೆ ಅನಂತ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅದೇ ರೀತಿ ತಮ್ಮ ಉಚಿತ ಪ್ರಸಾದ ಹಾಗೂ ವಸತಿ ನಿಲಯದಲ್ಲಿ ನನ್ನ ವ್ಯಾಸಂಗಕ್ಕೆ ಅಪ್ಪಣೆ ನೀಡಿ ಆಶೀರ್ವದಿಸಿದ ಪೂಜ್ಯ ಶ್ರೀ ಡಾ!!ಶಿವಬಸವ ಮಹಾಸ್ವಾಮಿಗಳವರ ಪಾದಾರವಿಂದಗಳಿಗೆ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತೇನೆ.
ವೈದ್ಯಕೀಯ ಶಿಕ್ಷಣ ಸಮಯದಲ್ಲಿ ನನಗೆ ವಿದ್ಯಾಗಿರುಗಳಾದ ಶ್ರೀ ವಿ. ಎಸ್. ಜವಳಿ ಬೆಳಗಾವಿ ಇವರು ನೀಡಿದ ಸಹಾಯ ಸಹಕಾರವನ್ನು ನನ್ನ ಅಂತರಾಳದಲ್ಲಿ ನೆನೆಯುತ್ತಾ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅದೇ ರೀತಿ ಆಪತ್ ಕಾಲದಲ್ಲಿ ಸಂಗೊಳ್ಳಿ ರಾಯಣ್ಣ ಹಾಸ್ಟೆಲಿನಲ್ಲಿ ವಸತಿಯ ವ್ಯವಸ್ಥೆ ಮಾಡಿದ ನನ್ನ ಸಹಪಾಠಿ ಆತ್ಮೀಯ ಮಿತ್ರರಾದ ಶ್ರೀ ಡಾ!! ಬಿ.ಜಿ. ಸಾಂಬ್ರೇಕರ್ ಅವರ ಉಪಕಾರವನ್ನು ಸದಾ ಸ್ಮರಿಸುವೆ.
1976 ರಲ್ಲಿ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿ ಸೇವಾ ವೃತ್ತಿಯನ್ನು ಪ್ರಾರಂಭಿಸುವ ಸಂದರ್ಭದಲ್ಲಿ ನಮ್ಮ ಗ್ರಾಮದ ಗುರು-ಹಿರಿಯರಾದ ಶ್ರೀ ಬಸಪ್ಪನವರು ಗಡ್ಡಿ, ಶರಿ ಮಲ್ಲಪ್ಪನವರು ಪಡಿಯಪ್ಪನವರ, ಶ್ರೀ ಚಂದ್ರಶೇಖರಯ್ಯನವರು ಶಿವಮಠ ಸೇರಿದಂತೆ ಗ್ರಾಮದ ಇನ್ನೂ ಅನೇಕ ಹಿರಿಯರು ಗ್ರಾಮದ ಹಾಗೂ ನೆರೆಯ ಗ್ರಾಮಗಳ ಸರ್ವ ಹಿರಿಯ ಕಿರಿಯರು, ವಿವಿಧ ಸಮಾಜಗಳ ಭಾಂಧವರುನನ್ನ ಮೇಲೆ ವಿಶ್ವಾಸವಿಟ್ಟು ಈ ಸೇವೆಯನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಅವರೆಲ್ಲರಿಗೂ ನಾನು ಚಿರಋಣಿಯಾಗಿ ಅಂತರಾಳದ ನುಡಿಗಳನ್ನು ಸಮರ್ಪಿಸುತ್ತೇನೆ.
ನನ್ನ ಜೀವನದ ಕೊನೆಯ ಕ್ಷಣದವರೆಗೂ ಈ ವೈದ್ಯಕೀಯ ಸೇವೆಯನ್ನು ಮುಂದುವರಿಸುವ ಬಯಕೆ ನನ್ನದಾಗಿದೆ ಎಂದು ಚೊಳಚಗುಡ್ಡ ಗ್ರಾಮದಲ್ಲಿ ಜೀವನಪೂರ್ತಿ ಗ್ರಾಮೀಣ ಭಾಗದಲ್ಲೇ ಸೇವೆ ಸಲ್ಲಿಸಿದ ವೈದ್ಯರಾದ ಡಾ!!ಎಲ್.ಎಂ.ಹಾದಿಮನಿ ಯವರು ತಮ್ಮ ಮನದಾಳದ ಮಾತುಗಳನ್ನು ನಾಳೆ ನಡೆಯುವ ಶ್ರೀ ಮ.ನಿ.ಪ್ರ.ಡಾ!ಅಲ್ಲಮಪ್ರಭು ಮಹಾಸ್ವಾಮಿಗಳು ಶ್ರೀ ರುದ್ರಾಕ್ಷಿಮಠ ನಾಗನೂರ ಪೂಜ್ಯರುಗಳ ಗುರುವಂದನೆ ಹಾಗೂ ಇಡೀ ವೈದ್ಯಕೀಯ ವೃತ್ತಿಯನ್ನು ಗ್ರಾಮೀಣ ಜನರ ಸೇವೆಗಾಗಿ ಸೇವೆ ಸಲ್ಲಿಸಿದ *#ಡಾ! ಲಿಂಗಪ್ಪ.ಮಾಗುಂಡಪ್ಪ. ಹಾದಿಮನಿ ವೈದ್ಯರಿಗೆ ನಾಳೆ ಅಂದರೆ 29/05/2025 ಗುರುವಾರ ವೈದ್ಯಕೀಯ ಸೇವೆಯ ಸುವರ್ಣ ಮಹೋತ್ಸವದ ಅದ್ದೂರಿ ಕಾರ್ಯಕ್ರಮದ ಸಂದರ್ಭದಲ್ಲಿ ತಮ್ಮ ಮನದಾಳದ ಮಾತುಗಳನ್ನು ಈ ರೀತಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇನ್ನು ಈ ಅದ್ದೂರಿ ಕಾರ್ಯಕ್ರಮದ ಜೊತೆಗೆ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣೆ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮದವರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಈ ಮೂಲಕ ತಿಳಿಸಲಾಗಿದೆ.
– ವರದಿ:- ರಾಜೇಶ್. ಎಸ್.ದೇಸಾಯಿ ಬಾಗಲಕೋಟೆ