ಮತದಾನ ಕೇಂದ್ರದ ಸುತ್ತ Breathalyzer tester ಯಂತ್ರ ಅಳವಡಿಸಲು ಚುನಾವಣಾಧಿಕಾರಿಗೆ ಪತ್ರ ಬರೆದ ಚಂದ್ರಶೇಖರ್

chandrashekar

ವಿದ್ಯಾನಾಯ್ಕ್ ಅರೇಹಳ್ಳಿ

ದಾವಣಗೆರೆ: ಭಾರತೀಯ ಚುನಾವಣಾ ಆಯೋಗವೂ ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಮತದಾನ ಕೇಂದ್ರದ ಸುತ್ತ Breathalyzer tester ಯಂತ್ರ ಅಳವಡಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಚಂದ್ರಶೇಖರ್ ಚನ್ನಗಿರಿ ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ ಅವರಿಗೆ ಪತ್ರ ಬರೆದಿದ್ದಾರೆ. ಭಾರತೀಯ ಚುನಾವಣಾ ಆಯೋಗ ದೇಶದಲ್ಲಿ ನಡೆಯುವ ಪ್ರತಿಯೊಂದು ಚುನಾವಣೆಯನ್ನು ಬಹು ಮುನ್ನೆಚ್ಚರಿಕೆಯಿಂದ ನಡೆಸುತ್ತದೆ. ಆದರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಹಣ, ಹೆಂಡದ ಆಮಿಷವೊಡ್ಡಿ ಅಕ್ರಮವಾಗಿ ಮತ ಕಬಳಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕಟ್ಟುನಿಟ್ಟಿನ ಚೌಕಟ್ಟಿನಲ್ಲಿ ನಡೆಯುವ ಚುನಾವಣೆಗಳಲ್ಲೂ ಅಕ್ರಮ ನಡೆಯುವ ಸಾಧ್ಯತೆಯನ್ನು ಕಡಿಮೆಗೊಳಿಸುವಲ್ಲಿ ಚುನಾವಣಾ ಆಯೋಗ ಸೂಕ್ತ ಕ್ರಮಕೈಗೊಳ್ಳಬೇಕಿದೆ ಎಂದು ಕೆಲವು ಸಲಹೆ ಸೂಚನೆ ಮೂಲಕ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಚಂದ್ರಶೇಖರ್ ಚನ್ನಗಿರಿ.

ಚುನಾವಣಾ ಆಯೋಗವು ಮತದಾನ ಮುಕ್ತಾಯದ ಹಿಂದಿನ 48 ಗಂಟೆ ಅವಧಿಯಲಕ್ಲಿ ಎಲ್ಲಾ ತರಹದ ಮಧ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್‌ಗಳಲ್ಲಿ ಮಧ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಸಹ ಅಕ್ರಮವಾಗಿ ಮಧ್ಯ ಶೇಖರಿಸಿ ಕಳ್ಳಸಾಗಾಣೆ ಮೂಲಕ ಮತದಾರರಿಗೆ ಮದ್ಯವನ್ನು ಸರಬರಾಜು ಮಾಡುತ್ತಾರೆ. ಚುನಾವಣೆ ಸಮಯದಲ್ಲಿ ಈ ರೀತಿಯ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಮತದಾನ ಕೇಂದ್ರದ ಪ್ರತಿಬೂತಿನ ಪ್ರವೇಶ ದ್ವಾರದಲ್ಲಿ BAC Breathalyzer tester ಯಂತ್ರವನ್ನು ಅಳವಡಿಸಬೇಕು ಅಷ್ಟೇಅಲ್ಲದೆ ಈ ಯಂತ್ರವು ಕಳೆದ 48 ಗಂಟೆಗಳಲ್ಲಿ ಮದ್ಯ ಸೇವಿಸಿದ ಬಗ್ಗೆ ಧೃಢೀಕರಿಸುವಂತಿರಬೇಕು ಮತ್ತು 48 ಗಂಟೆಗಳ (2 ದಿನ) ಒಳಗೆ ಮದ್ಯ ಸೇವನೆ ಮಾಡಿ ಬಂದವರಿಗೆ ಮತದಾನ ಮಾಡದಂತೆ ಸರ್ಕಾರ ನಿರ್ಬಂಧಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಮತದಾನ ಕೇಂದ್ರದ ಪ್ರತಿ ಬೂತ್‌ನ ಮುಖ್ಯದ್ವಾರದಲ್ಲಿ BAC Breathalyzer tester ಯಂತ್ರವನ್ನು ಅಳವಡಿಸುವುದರಿಂದ ಕುಡಿದು ಗಲಾಟೆ ಮಾಡುವವರ ಸಂಖ್ಯೆ ಕಡಿಮೆಯಾಗಿ ಮತದಾನ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ, ವಿವೇಚನೆಯಿಂದ ಮತ ಚಲಾವಣೆ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ, ಪ್ರತಿ ಕ್ಷೇತ್ರಗಳಲ್ಲಿ ಉತ್ತಮ ವ್ಯಕ್ತಿಗಳು ಆಯ್ಕೆಯಾಗುತ್ತಾರೆ ಅಷ್ಟೇಅಲ್ಲದೆ ಚುನಾವಣೆಗಳು ಭ್ರಷ್ಟಾಚಾರ ರಹಿತವಾಗಿ ನಡೆಯುತ್ತದೆ ಎಂಬ ಸಲಹೆಗಳನ್ನು ಚಂದ್ರಶೇಖರ್ ಪತ್ರದ ಮೂಲಕ ನೀಡಿದ್ದಾರೆ. ಭಾರತ ಚುನಾವಣಾ ಆಯೋಗವು ಬಿಗಿಯಾದ ಕಾನೂನುಗಳನ್ನು ತರುವ ಮೂಲಕ ತುರ್ತಾಗಿ ಕ್ರಮಕೈಗೊಂಡು 30 ದಿನಗಳ ಒಳಗಾಗಿ ಹಿಂಬರಹ ನೀಡುವಂತೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೂ ಆಗಿತ್ತು ಚರ್ಚೆ:


ಸಾಮಾಜಿಕ ಜಾಲತಾಣಗಳಲ್ಲೂ ಸಹ BAC Breathalyzer tester ಯಂತ್ರವನ್ನು ಮತದಾನ ಕೇಂದ್ರದ ಮುಖ್ಯ ದ್ವಾರದಲ್ಲಿ ಅಳವಡಿಸುವ ವಿಚಾರವಾಗಿ ಪೋಸ್ಟ್ ಹರಿಬಿಟ್ಟಿದ್ದು ಚರ್ಚೆ ನಡೆಯುತ್ತಿದೆ. ಫೇಸ್‌ಬುಕ್‌ನಲ್ಲಿ ಈ ಕುರಿತಾದ ಪೋಸ್ಟ್ವೊಂದನ್ನು ವಿಚಾರವಾದಿಗಳು ಹರಿಬಿಟ್ಟಿದ್ದು, “ ಗಾಡಿ/ವಾಹನ ಓಡಿಸೋಕೆ ಡ್ರಿಂಕ್ ಅಂಡ್ ಡ್ರೈವ್ ಬೇಡ! ದೇಶ ಮುನ್ನಡೆಸಲು ಡ್ರಿಂಕ್ ಅಂಡ್ ವೋಟ್ ಬೇಕಾ,? ವೋಟ್ ಮಾಡುವ ಪ್ರತಿ ಬೂತ್‌ನಲ್ಲಿ ಡ್ರಿಂಕ್ಸ್ ಚೆಕ್ ಮಾಡುವ ಮಿಷನ್ ಅಳವಡಿಸಬೇಕು, ಮತದಾನಕ್ಕಿಂತ 48 ಗಂಟೆ (2 ದಿನ) ಒಳಗೆ ಮದ್ಯ ಸೇವಿಸಿ ಬಂದವರಿಗೆ ಮತದಾನ ಮಾಡದಂತೆ ನಿರ್ಬಂಧಿಸಬೇಕು” ಎಂಬ ಕೂಗು ಕೇಳಿ ಬಂದಿದೆ. ಒಟ್ಟಾರೆ ಚಂದ್ರಶೇಖರ್ ಅವರು ಪತ್ರದ ಮೂಲಕ ನೀಡಿರುವ ಈ ಸಲಹೆ ಸೂಚನೆಗಳನ್ನು ಯಾವ ದೃಷ್ಟಿಕೋನದಲ್ಲಿ ಚುನಾವಣಾ ಆಯೋಗ ನೋಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!