ಕೃಷಿ ಮಾರುಕಟ್ಟೆ ಸಮಯವನ್ನ ಮದ್ಯಾಹ್ನ 3 ಗಂಟೆಯವರೆಗೆ ವಿಸ್ತರಿಸುವಂತೆ ಡಿಸಿ ಗೆ ರೈತರ ಪರ ಮನವಿ – ಲೋಕಿಕೆರೆ ನಾಗರಾಜ್

ದಾವಣಗೆರೆ: ಲಾಕ್ ಡೌನ್ ನಿಯಮದ ಪ್ರಕಾರ ರೈತ ಬಾಂಧವರಿಗೆ ಬೆಳಿಗ್ಗೆ 6:00 ರಿಂದ 10:00 ಗಂಟೆರವರೆಗೆ ಸಮಯ ನಿಗದಿ ಮಾಡಿರುವುದುದರಿಂದ ಶೇಂಗಾ, ಮೆಕ್ಕೆಜೋಳ, ತರಕಾರಿಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದ ನಂತರ ಟೆಂಡರ್ ಪ್ರಕ್ರಿಯೆಗೆ ಸಮಯವಕಾಶ ಕಡಿಮೆಯಾಗುತ್ತಿದೆ ಮತ್ತು ರೈತರು ಕೃಷಿ ಪರಿಕರಗಳನ್ನು ಖರೀದಿಸಲು ಸಹ ಬಹಳಷ್ಟು ತೊಂದರೆ ಆಗುತ್ತಿರುವುದುದನ್ನು ಮನಗಂಡು ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಮಾನ್ಯ ಶ್ರೀ ಮಹಾಂತೇಶ್ ಬೀಳಗಿ ರವರಿಗೆ ಬೆಳಿಗ್ಗೆ 6:00 ರಿಂದ ಮಧ್ಯಾಹ್ನ 3:00 ಗಂಟೆ ವರೆಗೂ ಸಮಯವಕಾಶ ನೀಡಲು ಮನವಿಯನ್ನು ದಾವಣಗೆರೆ ಜಿಲ್ಲಾ ಭಾಜಪ ರೈತ ಮೋರ್ಚಾ ಅಧ್ಯಕ್ಷರಾದ ನಾಗರಾಜ್ ಲೋಕಿಕೆರೆ  ನೀಡಿದರು.

Leave a Reply

Your email address will not be published. Required fields are marked *

error: Content is protected !!