ಚನ್ನಗಿರಿ : ಮಕ್ಕಳ ಕಡೆಗೆ ಇರಲಿ ಪೋಷಕರ ಗಮನ

ದಾವಣಗೆರೆ : ಕಾಲೇಜ್ ಗೆ ಹೋಗಿ ಬರುವೆ ಎಂದು ಮನೆಯಿಂದ ಬರುವ ಮಕ್ಕಳು ಕಾಲೇಜಲ್ಲಿ ಕೂತು ಪಾಠ – ಪ್ರವಚನ ಕೇಳದೆ ಬಂಕ್ ಹೊಡೆದು ಮೋಜು – ಮಸ್ತಿಯ ಗುಂಗಲ್ಲಿ ತೇಲಾಡುತ್ತಿರುತ್ತಾರೆ.
ಇದಕ್ಕೆ ಸೂಕ್ತ ಉದಾಹರಣೆ ಸಾಮಾಜಿಕ ಜಾಲತಾಣಗಳಲ್ಲಿ ಚಂದ್ರಶೇಖರ ಅವರು ಹಾಕಿರುವ ಈ ಛಾಯಾಚಿತ್ರಗಳು.
ಚನ್ನಗಿರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿರುವ ಕೆಲವು ಮಕ್ಕಳು ಪ್ರತಿ ದಿನ ಯುನಿಫಾರಂ ಹಾಕಿಕೊಂಡು ಬಂದು ತರಗತಿಗಳಿಗೆ ಹಾಜರಾಗದೇ ಕಾಂಪೌಂಡ್ ಮೇಲೆ, ಸ್ಟೇಡಿಯಂನಲ್ಲಿ, ಹೊರಗಡೆ ಸುತ್ತಾಡಿ ಮನೆ ಸೇರುತ್ತಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಎಷ್ಟೇ ಪ್ರಯತ್ನ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ ಪೋಷಕರು ನಿಮ್ಮ ಮಕ್ಕಳ ಕಡೆ ಹೆಚ್ಚಿನ ಗಮನ ಹರಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.