ಎಲ್ ಕೆ ಜಿ ಶಾಲೆಗಳಲ್ಲೇ ಚರಕದ ಪರಿಚಯವಾಗಬೇಕು – ಡಾ ಎಚ್ ಕೆ  ಎಸ್ ಸ್ವಾಮಿ 

IMG_20241121_071711
ಚಿತ್ರದುರ್ಗ :-  ಎಲ್.ಕೆ.ಜಿ. ತರಗತಿಗಳಲ್ಲೇ ಮಕ್ಕಳಿಗೆ “ಚ” ಎಂದರೆ ಚರಕ ಒಂದು ಪಾಠ ಮಾಡುತ್ತಿರುವ ಸಂದರ್ಭದಲ್ಲಿ, ಚರಕ ಇಲ್ಲದಿದ್ದರೆ ಮುಂದೆ ಮಕ್ಕಳಿಗೆ ಚರಕದ ಬಗ್ಗೆ ಅಭಿಮಾನ ವಿಲ್ಲದಂತಾಗಿ, ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಯೋಚಿಸದೆ, ನಗರದ ಜೀವನದ ಶೈಲಿಯನ್ನ ಅಳವಡಿಸಿಕೊಂಡು, ಪರಿಸರ ಮಾಲಿನ್ಯಕ್ಕೆ ಹೆಚ್ಚಿನ ಹೊತ್ತು ದೊರಕುತ್ತದೆ.  ಎಲ್.ಕೆ.ಜಿ. ಯು.ಕೆ. ಜಿ. ಯಲ್ಲಿ ಮಕ್ಕಳಿಗೆ ಆಟ ಸಾಮಾನುಗಳ ಜೊತೆ ಜೊತೆಗೆ, ಚರಕವನ್ನು ಸಹ ಪರಿಚಯಿಸಬೇಕು, ಅದಕ್ಕಾಗಿ ಶಿಕ್ಷಣ ಇಲಾಖೆ ಮತ್ತು ಶಾಲೆಗಳು ಇದರ ಬಗ್ಗೆ ಕಾಳಜಿ ವಹಿಸಿ ಸಣ್ಣದೊಂದು ಚರಕವನ್ನಾದರೂ ಶಾಲೆಗಳಲ್ಲಿ ಇಟ್ಟು, ಮಕ್ಕಳಿಗೆ ಪರಿಚಯಿಸಬೇಕು ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್ ಕೆ ಸ್ವಾಮಿ ವಿನಂತಿಸಿಕೊಂಡಿದ್ದಾರೆ.
ಅವರು ಮದಕರಿಪುರದಲ್ಲಿರುವ ಜಿಂದಾಲ್ ಜೂಬ್ಲಿ ಭಾರತೀಯ ಸರ್ಕಾರಿ ಪ್ರೌಢಶಾಲೆಯ ಪೂರ್ವ ಪ್ರಾರ್ಥಮಿಕ ಶಾಲಾ ಮಕ್ಕಳಿಗೆ ಚರಕವನ್ನು ಪರಿಚಯಿಸುತ್ತಾ ಮಾತನಾಡುತ್ತಿದ್ದರು.
ಶಾಲಾ ಮಕ್ಕಳಿಗೆ ಕಲಿಕಾ ಸಮಯದಲ್ಲಿ ಚರಕವನ್ನು ಪರಿಚಯ ಮಾಡಬೇಕು, ಖಾಸಗಿ ಶಾಲೆಗಳಲ್ಲಂತೂ ಮಕ್ಕಳಿಗೆ ಸಾಕಷ್ಟು ಆಟದ ಸಾಮಾನುಗಳನ್ನು ಒದಗಿಸಿರುತ್ತಾರೆ. ಅದರ ಜೊತೆಜೊತೆಗೆ ಒಂದು ಚರಕವನ್ನು ಸಹ ಪರಿಚಯಿಸಿದರೆ, ಮಕ್ಕಳಿಗೆ ಮುಂದೆ ಚರಕ ಹೇಗೆ ಕೆಲಸ ಮಾಡುತ್ತದೆ ಮತ್ತು ದಾರಾ ಹೇಗೆ ತೆಗೆಯುತ್ತಾರೆ ಎಂಬುದರ ಬಗ್ಗೆ ಅನುಭವ ಉಂಟಾಗುತ್ತದೆ. ಅಂಗನವಾಡಿಯಲ್ಲೇ ಚರಕವನ್ನ ಪರಿಚಯಿಸಿ, ಮಕ್ಕಳಿಗೆ ಗಾಂಧೀಜಿ ವಿಚಾರಗಳನ್ನ ತಿಳಿಸಲು ಅನುಕೂಲಕರವಾಗುವುದು ಎಂದರು.
ಈಗಲೂ ಸಹ ಸಾಕಷ್ಟು ಶಿಕ್ಷಕರು “ಚ” ಎಂದರೆ ಚರಕ ಎಂದು ಬೋಧಿಸುತ್ತಿರುತ್ತಾರೆ. ಆದರೆ ಅವರೇ ಚರಕವನ್ನ ಮುಟ್ಟಿ ನೋಡಿರುವುದಿಲ್ಲ, ಹಾಗಾಗಿ ಶಿಕ್ಷಕರ ಶಿಕ್ಷಣ ತರಬೇತಿ ಇಲಾಖೆಯಲ್ಲಿ, ಚರಕರವನ್ನು  ಪ್ರಶಿಕ್ಷಣಾರ್ಥಿಗಳಿಗೆ   ತೋರಿಸಿ, ಬೋಧಿಸಿ, ಒಳ್ಳೆಯ ಶಿಕ್ಷಕರನ್ನಾಗಿ ತಯಾರು ಮಾಡಿ, ಶಾಲೆಗಳಿಗೆ ಕಳುಹಿಸಬೇಕು. ಚರಕವನ್ನೇ ಜೀವಾಳ ಮಾಡಿಕೊಂಡಂತಹ ಕೆಲವೊಂದು ಗ್ರಾಮಗಳಲ್ಲಿ ಈಗ ಚರಕ ನೋಡಲಾರದಂತಾಗಿದೆ. ಗ್ರಾಮೀಣ ಅಭಿವೃದ್ಧಿಯನ್ನ ನಮಗೆ ಗೊತ್ತಿಲ್ಲದಂತೆ ನಾವು ನಾಶ ಮಾಡಿಕೊಂಡಿದ್ದೇವೆ, ಮತ್ತೊಮ್ಮೆ ನಾವು ಜನರಿಗೆ ಚರಕವನ್ನು ಪರಿಚಯಿಸಿ, ಅದರಿಂದ ದಾರ ತೆಯುವುದನ್ನು ತರಬೇತಿ ನೀಡಿದರೆ, ಗ್ರಾಮೀಣ ಜನರು ತಮ್ಮ ಸ್ವಂತ ಬಟ್ಟೆಗಳನ್ನ ತಾವೇ ಮಾಡಿಕೊಂಡು, ಮುಂದಿನ ಜೀವನವನ್ನು ಸುಖಮಯವಾಗಿ ಮಾಡಿಕೊಳ್ಳುವ ಸಂಭವವಿದೆ. ಇದರ ಬಗ್ಗೆ ಮಹಾತ್ಮ ಗಾಂಧೀಜಿಯವರು ಸಾಕಷ್ಟು ಬರೆದು, ವಿಚಾರಗಳನ್ನ ಹಂಚಿಹೋಗಿದ್ದಾರೆ .ಇದನ್ನ ಈಗ ಅನುಷ್ಠಾನಕ್ಕೆ ತರುವುದೇ ನಮ್ಮ ಜವಾಬ್ದಾರಿಯಾಗಿದೆ ಎಂದರು.
ಈಗಲೂ ಸಹ ಶಾಲೆಗಳಲ್ಲಿ ಮಕ್ಕಳಿಗೆ ಒಂದೆರಡು ನಿಮಿಷ ಬಿಡುವು ಮಾಡಿಕೊಂಡು ಚರಕ ತೋರಿಸುವುದರ ಬಗ್ಗೆ ಕಾರ್ಯಕ್ರಮಗಳನ್ನ ಆಯೋಜನೆ ಮಾಡುವುದರ ಬಗ್ಗೆ ಸಮಯವಿಲ್ಲದಷ್ಟು ಒತ್ತಡ ಉಂಟಾಗಿದೆ, ಎಸ್ ಎಸ್ ಎಲ್ ಸಿ,  ಪಿ .ಯು. ಸಿ. ವಿದ್ಯಾರ್ಥಿಗಳಿಗಂತೂ ಓದಿನಲ್ಲಿ ಹೆಚ್ಚಿನ ಒತ್ತಡ ಹಾಕಿ, ದುಡಿಮೆಯನ್ನು, ಸಂಪಾದನೆಯನ್ನ ಗಳಿಸುವುದು ಹೇಗೆ ಎಂಬುದರ ಬಗ್ಗೆ ಯೋಚಿಸುವಂತಾಗಿದೆ. ಅವರಿಗೂ ಸಹ ಸ್ವಲ್ಪ ಬಿಡುವು ಮಾಡಿಕೊಂಡು ಚರಕವನ್ನು ತೋರಿಸಿ, ಮುಂದೆ ಅವರು ನಿರುದ್ಯೋಗಿಗಳಾದಾಗ ಇದರ ಬಗ್ಗೆ ಕೆಲಸ ಮಾಡುವುದರ ಬಗ್ಗೆ ಅನುಭವವನ್ನು ತಂದುಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದಷ್ಟು ಉತ್ತಮ, ತುರ್ತು ಪರಿಸ್ಥಿತಿಯಲ್ಲಿ, ತುರ್ತು ಸಮಯದಲ್ಲಿ, ಚರಕ ಜನರಿಗೆ ಸಹಕಾರಿಯಾಗುತ್ತದೆ ಎಂದು ವಿನಂತಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ  ಸುಜಾತಾ, ಸವಿತಾ, ಮುಖ್ಯೋಪಾಧ್ಯಾಯರಾದ ಎಮ್ ಎಚ್ ಜಯಪ್ರಕಾಶ್ ಮತ್ತು ಇತರೆ ಸಿಬ್ಬಂದಿ ಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!