ಕುಂದುವಾಡ ಕೆರೆ ಬಳಿ ಚಿರತೆ ಹೆಜ್ಜೆ ಗುರುತು.!? ವೈರಲ್ ಆದ ಹೆಜ್ಜೆಯ ಪೋಟೊ ವಿಡಿಯೋ

ದಾವಣಗೆರೆ: ಕುಂದುವಾಡ ಕೆರೆ ಬಳಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿರುವ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದ್ದು ನಗರದ ಜನತೆ ಬೆಚ್ಚಿಬಿದ್ದಿದ್ದಾರೆ.!
ಅತೀ ಹೆಚ್ಚು ಮಂದಿ ಕುಂದುವಾಡ ಕೆರೆಯ ಬಳಿ ವಾಕಿಂಗ್, ಜಾಗಿಂಗ್, ಯೋಗ, ವ್ಯಾಯಾಮ ಮಾಡುವುದಕ್ಕೆಂದು ಹೋಗುತ್ತಾರೆ. ಅದೇ ಜಾಗದ ಹತ್ತಿರವೇ ಚಿರತೆಯ ಕಾಲ್ಗುರುತು ಕಂಡುಬಂದಿದ್ದು ಆತಂಕಕ್ಕೆಡೆ ಮಾಡಿದೆ.
ಕೂಡಲೇ ಸಂಬಂಧಪಟ್ಟವರು ಅಡಗಿರುವ ಚಿರತೆಯನ್ನು ಪತ್ತೆ ಮಾಡಿ ಕಾಡಿಗಟ್ಟುವಂತೆ ನಾಗರೀಕರು ಮನವಿ ಮಾಡಿದ್ದಾರೆ.