ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆಗೆ ಸಹಕಾರಿ ಚದುರಂಗ : ದಿನೇಶ್ ಕೆ ಶೆಟ್ಟಿ

ದಾವಣಗೆರೆ : ದಾವಣಗೆರೆ ನಗರದ ಗುರುಭವನದಲ್ಲಿ ದಾವಣಗೆರೆ ಚೆಸ್ ಕ್ಲಬ್ ಹಾಗೂ ಸರ್ಕಲ್ ಚೆಸ್ ಅವರ ಸಹಯೋಗದೊಂದಿಗೆ ಓಪನ್ ರಾಪಿಡ್ ಚೆಸ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು ಈ ಪಂದ್ಯಾವಳಿ ಉದ್ಘಾಟನೆಯನ್ನು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರು ಹಾಗೂ ದಾವಣಗೆರೆ ಚೆಸ್ ಕ್ಲಬ್ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿಯವರು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ನೆನಪಿನ ಶಕ್ತಿ ಬೆಳವಣಿಗೆಗೆ ಚದುರಂಗವು ಉತ್ತಮ ರೀತಿಯಲ್ಲಿ ಸಹಕಾರಿಯಾಗುತ್ತದೆ ಜೀವನದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲು ತಾಳ್ಮೆ ಅವಶ್ಯಕತೆ ವಾಗಿರುತ್ತದೆ ಇಂತಹ ಆಟದಿಂದ ತಾಳ್ಮೆ ವೃದ್ಧಿಯಾಗಿ ಮಕ್ಕಳ ಉತ್ತಮ ಪ್ರಜೆಗಳಾಗುತ್ತಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಮಹಾನಗರ ಪಾಲಿಕೆ ಸದಸ್ಯರಾದ ಏ ನಾಗರಾಜ್ ಅವರು ಮಾತನಾಡಿ ಚದುರಂಗವು ಎಲ್ಲಾ ಕ್ರೀಡೆಗಳಿಗಿಂತ ಭಿನ್ನವಾಗಿದೆ ಇದರಲ್ಲಿ ತಾಳ್ಮೆ ಇದ್ದವರು ಉತ್ತಮ ಪ್ರದರ್ಶನ ನೀಡಿ ಜಯಶಾಲಿಯಾಗುತ್ತಾರೆ ಸಣ್ಣ ಮಕ್ಕಳಿಂದ ಈ ಆಟವು ರೂಡಿಸಿಕೊಂಡರೆ ಅವರ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈ ಸ್ಪರ್ಧೆಯಲ್ಲಿ 145ಕ್ಕೂ ಹೆಚ್ಚು ಸ್ಪರ್ದಾಳುಗಳು ಭಾಗವಹಿಸಿದ್ದು ಕರ್ನಾಟಕದ ಜಿಲ್ಲೆಗಳಾದ ಬೆಂಗಳೂರು ಚಿಕ್ಕಮಂಗಳೂರು ಹಾವೇರಿ ಶಿವಮೊಗ್ಗ ಬೆಳಗಾಂ ದಾವಣಗೆರೆ ಚಿತ್ರದುರ್ಗ ತುಮಕೂರ್ ಎಲ್ಲಾ ಜಿಲ್ಲೆಗಳಿಂದ ಸ್ಪರ್ದಾಳುಗಳು ಭಾಗವಹಿಸಿದ್ದಾರೆ ಎಂದು ಸಂಘದ ಕಾರ್ಯದರ್ಶಿಗಳಾದ ಯುವರಾಜ್ ತಿಳಿಸಿದರು.
ಈ ಸಮಾರಂಭದಲ್ಲಿ ಮಂಜುಳಾ ಯುವರಾಜ್ ಸುರೇಶ್ ತೀರ್ಪುಗಾರರಾದ ಆದಿತ್ಯ ಕೃಷ್ಣಮೂರ್ತಿ ಇನ್ಮುಂದಾದವರಿದ್ದರು

Leave a Reply

Your email address will not be published. Required fields are marked *

error: Content is protected !!