Chess: 16 ವರ್ಷದೊಳಗಿನ ಮತ್ತು ಓಪನ್ ರಾಪಿಡ್ ಚೆಸ್ ಪಂದ್ಯಾವಳಿ : ದಿನೇಶ್ ಕೆ ಶೆಟ್ಟಿ

{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"370516887051201","type":"ugc"},{"id":"392996389022201","type":"ugc"}]}}
ದಾವಣಗೆರೆ : (Chess) ಮೇ 18 ಭಾನುವಾರದಂದು ನಗರದ ಗುರುಭವನದಲ್ಲಿ ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ 16 ವರ್ಷದೊಳಗಿನ ಮತ್ತು ಓಪನ್ ರಾಪಿಡ್ ಚೆಸ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅವರು ತಿಳಿಸಿದರು.
ಈ ಪಂದ್ಯಾವಳಿಯ ಉದ್ಘಾಟನೆಯನ್ನು ಭಾನುವಾರ ಬೆಳಗ್ಗೆ 10.00 ಗಂಟೆಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ರವರು ಹಾಗೂ ಮುಖ್ಯ ಅತಿಥಿಗಳಾಗಿ ಎ ನಾಗರಾಜ್ ಗಡಿಗುಡಾಳ್ ಮಂಜುನಾಥ್ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಉಳುವಯ್ಯ ಖ್ಯಾತ ಲೇಖಕರಾದ ಮಲ್ಲಿಕಾರ್ಜುನ್ ಜವಳಿ ಭಾಗವಹಿಸಲಿದ್ದಾರೆ ಎಂದು ಸಂಘದ ಕಾರ್ಯದರ್ಶಿಗಳಾದ ಯುವರಾಜ್ ತಿಳಿಸಿದರು.
ಈ ಪಂದ್ಯಾವಳಿಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಯಿಂದ ಸುಮಾರು 200ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದ್ದು
ಈ ಪಂದ್ಯಾವಳಿಯಲ್ಲಿ 16 ಒಳಗಿನ ಹಾಗೂ ಓಪನ್ ಎರಡು ವಿಭಾಗಗಳಲ್ಲಿ ಆಡಿಸಲಾಗುವುದು 16 ವರ್ಷದ ಒಳಗಿನ ವಿಭಾಗದಲ್ಲಿ ಪ್ರಥಮ ಸ್ಥಾನ 2000 ದ್ವಿತೀಯ ಸ್ಥಾನ 1500 ತೃತೀಯ ಸ್ಥಾನ 1000 ನಾಲ್ಕು ಮತ್ತು ಐದನೇ ಸ್ಥಾನಗಳಿಗೆ ತಲಾ 500 ನಗದು ಬಹುಮಾನ ಹಾಗೂ ಓಪನ್ ಮುಕ್ತ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ 3000 ದ್ವಿತೀಯ ಸ್ಥಾನ 2500 ದ್ವಿತೀಯ ಸ್ಥಾನ 2000 ನಾಲ್ಕನೇ ಸ್ಥಾನ 1500 ಐದನೇ ಸ್ಥಾನ 1000 ಈ ಪಂದ್ಯಾವಳಲ್ಲಿ ಹದಿನಾರು ವರ್ಷದ ಒಳಗಿನ ವಿಭಾಗಗಳಲ್ಲಿ U06- U08- U10 – U12- U14- U16 ಓಪನ್ ಎಲ್ಲಾ ವಿಭಾಗಗಳಲ್ಲಿ ತಲ 10 ಸ್ಥಾನಗಳಿಗೆ ಟ್ರೋಫಿ ನೀಡಲಾಗುವುದು ಹಾಗೂ ಅತಿ ಹಿರಿಯ ಆಟಗಾರ ಮತ್ತು ಅತಿ ಹಿರಿಯ ಮಹಿಳೆ ಆಟಗಾರ್ತಿ, ತಲಾ ಮೂರು ಪ್ರಶಸ್ತಿಯನ್ನು ಹಾಗೂ ನಗದು ಬಹುಮಾನವನ್ನು ನೀಡಲಾಗುವುದು.
ಒಟ್ಟು 85 ಟ್ರೋಫಿ ಹಾಗೂ ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿಯವರು ತಿಳಿಸಿದರು
ಈ ಪಂದ್ಯಾವಳಿಗೆ ಹೆಸರನ್ನು ನೋಂದಾಯಿಸಲು ಕೊನೆಯ ದಿನಾಂಕ 17 ಸಂಜೆ 5.00 ಆಗಿರುತ್ತದೆ ಹೆಸರನ್ನು ನೋಂದಾಯಿಸಲು ಈ ನಂಬರಿಗೆ 9945613469-7259310197- 9945163469 ಸಂಪರ್ಕಿಸಲು ತಿಳಿಸಿದರು