ಬಾಲ್ಯವಿವಾಹ ತಡೆಗೆ ಗ್ರಾಮಪಂಚಾಯಿತಿಗಳಿಂದ ನಿರಂತರ ಜಾಗೃತಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕು. – ಗಂಗಾಧರ. ಹೆಚ್

IMG-20211116-WA0189

.ಹರಿಹರ : ತಾಲೂಕಿನ ಕೊಂಡಜ್ಜಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚೈಲ್ಡ್ ಲೈನ್ ಸೆ ದೋಸ್ತಿ ಮತ್ತು ಮಕ್ಕಳ ಹಕ್ಕುಗಳ ಸಪ್ತಾಹದ ಅಂಗವಾಗಿ ಬಾಲ್ಯವಿವಾಹ ತಡೆ ಬಗ್ಗೆ ಕೊಡಜ್ಜಿಯಲ್ಲಿ ಗ್ರಾಮ ಪಂಚಾಯತಿ ಮಟ್ಟದ ವಕಾಲತು ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡದ ಸಂಯೋಜಕರಾದ ಕೊಟ್ರೇಶ್ ಟಿ ಎಂ ರವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಬಾಲ್ಯವಿವಾಹದ ಕಾರಣ, ಪರಿಣಾಮ, ಬಾಲ್ಯವಿವಾಹ ನಿಷೇದ ಕಾನೂನು 2016ರ ಬಗ್ಗೆ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿದರು.
ಬಾಲ್ಯವಿವಾಹ ತಡೆಗೆ ಗ್ರಾಮಪಂಚಾಯಿತಿಗಳಿಂದ ನಿರಂತರ ಜಾಗೃತಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕು, ಈ ನಿಟ್ಟಿನಲ್ಲಿ ಗ್ರಾಮಪಂಚಾಯಿತಿಯ ಮುಂದಿನ ಸಭೆಯಲ್ಲಿ ವಿಶೃತವಾಗಿ ಚರ್ಚಿಸಿ ಕಾರ್ಯಯೋಜನೆಯನ್ನು ತಯಾರಿಸಲಾಗುವುದು ಎಂದು ಗ್ರಾಮಪಂಚಾಯಿತಿಯ ಅಧ್ಯಕ್ಷರಾದ ಗಂಗಾಧರ. ಹೆಚ್.ಹೇಳಿದರು.

ಪ್ರತಿಯೊಂದು ಮದುವೆಯನ್ನು ಕಾನೂನು ಬದ್ದವಾಗಿ ನೋಂದಾಯಿಸಿಕೊಳ್ಳಬೇಕೆಂದು ಗ್ರಾಮಲೆಕ್ಕಾಧಿಕಾರಿಗಳಾದ ಲೋಹಿತ್ ಎ. ಎಂ. ಮಾಹಿತಿ ನೀಡಿದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಾಮಚಂದ್ರ, ಗ್ರಾಮ ಪಂಚಾಯಿತಿ ಸದಸ್ಯರಾದ ನರಪ್ಪ. ಹೆಚ್. ಎನ್. ಶಾಂತವ್ವ. ಕೆ. ನಿಂಗಪ್ಪ, ಆಂಜನೇಯ, ರಾಮಚಂದ್ರ ಟಿ ಪಿ. ಕಾರ್ಯದರ್ಶಿ ಗಳಾದ ವೈ. ನಟರಾಜ್, ಪ್ರಚಾರ್ಯರಾದ ಎಸ್. ಕೆಂಚಪ್ಪ, ಶಿಕ್ಷಕರಾದ ಜಿ. ಜಾಕಿರ್ ಹುಸೇನ್, ಪಿ. ಹೆಚ್. ಸಿ. ಓ ಗಳಾದ ಸುನಿತಾ ಎಂ ಕೆ, ಪ್ರತಿಭಾ, ಹಿರಿಯ ಆರೋಗ್ಯ ಸಹಾಯಕರಾದ ತಿಪ್ಪೇಸ್ವಾಮಿ. ಎಂ. ಅಂಗನವಾಡಿ ಮೇಲ್ವಿಚಾರಕರಾದ ಶಾಂತಮ್ಮ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಮಕ್ಕಳಸಹಾಯವಾಣಿ ತಂಡದ ರವಿ ಬಿ. ಮಂಜುನಾಥ್ ಡಿ. ಮಂಜುಳಾ ವಿ
ಸ್ವಾಮಿ ಬಿ. ನಾಗರಾಜ ಟಿ. ಸುನಿತಾ ಜೆ. ಉಪಸ್ಥಿತ ರಿದ್ದರು.
.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!