ಮಕ್ಕಳ ದಿನಾಚರಣೆ ಹಾಗೂ ಕೊಂಡಜ್ಜಿ ಬಸಪ್ಪ ಸ್ಮರಣೆ ಹಿನ್ನೆಲೆ: ಯುವ ಕಾಂಗ್ರೆಸ್ ವತಿಯಿಂದ ಶಾಲೆಗೆ ಸುಣ್ಣ ಬಣ್ಣ

ದಾವಣಗೆರೆ: ಮಾಜಿ ಮಂತ್ರಿಗಳಾದ ದಿವಂಗತ ಶ್ರೀ ಕೊಂಡಜ್ಜಿ ಬಸಪ್ಪನವರ ಪುಣ್ಯ ಸ್ಮರಣೆ ಹಾಗು ಮಕ್ಕಳ ದಿನಾಚರಣೆಯ ಅಂಗವಾಗಿ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಅಧ್ಯಕ್ಷರಾದ ನಿಖಿಲ್ ಕೊಂಡಜ್ಜಿ ಅವರ ನೇತೃತ್ವದಲ್ಲಿ ಹರಿಹರ ತಾಲೂಕಿನ ಹೊಳೆಸಿರಿಗೆರೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಣ್ಣ ಬಳೆದು ಸ್ವಚ್ಛತೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಬೆಣ್ಣೆಹಳ್ಳಿ ಹಾಲೇಶಪ್ಪ, ಜಿಗಲಿ ಆನಂದಪ್ಪ, ಕೋಮಾರನಹಳ್ಳಿ ಮಂಜುನಾಥ್ ಪಾಟೀಲ್, ಆರಿಫ್ ಅಲಿ, ವಾಸುದೇವ್ ಮೂರ್ತಿ, ಭೋವಿ ಕುಮಾರ್, ಪಿ ಎಸ್ ಕುಮಾರ್, ಜಿಗಲಿ ಪ್ರಕಾಶ್, ಪರಶುರಾಮ್, ಶಿವಕುಮಾರ್, ವಿನಾಯಕ್, ಫಾಲಾಕ್ಷಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜಿತ್, ನವೀನ, ಮೆಹಬೂಬ್ ಭಾಷಾ, ಮಲ್ಲಿಕ್, ಅವಿನಾಶ್, ಪವನ್, ತಿಪ್ಪೇಶ್ ಇನ್ನಿತರರು ಉಪಸ್ಥಿತರಿದ್ದರು.
