ಸಂಡೂರು ತಾಲ್ಲೂಕಿನ ಯರದಮ್ಮನಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಮಕ್ಕಳ ‘ಕಲಿಕಾ ಹಬ್ಬ’

ಬಳ್ಳಾರಿ: (ಸಂಡೂರು) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಡೂರು ಹಾಗೂ ಗೊಲ್ಲಲಿಂಗಮ್ಮನಹಳ್ಳಿ ಕ್ಲಸ್ಟರ್ ವತಿಯಿಂದ “ಕಲಿಕಾ ಹಬ್ಬ” ನಡೆಯಿತು. ಸಂಡೂರು ತಾಲ್ಲೂಕಿನ ಯರದಮ್ಮನಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಕಲಿಕಾ ಹಬ್ಬ ನೆರವೇರಿತು. ಎರಡು ದಿನಗಳ ಕಾಲ ನಡೆಯಲಿರುವ ಕಲಿಕಾ ಹಬ್ಬವನ್ನ ಬಳ್ಳಾರಿ ಡಯಟ್ ಹಿರಿಯ ಉಪನ್ಯಾಸಕರಾದ ಚಂದ್ರಶೇಖರ್ , ಶಿಕ್ಷಣ ಸಂಯೋಜಕರಾದ ಶರಣಬಸಪ್ಪ , ಮಧ್ಯಾಹ್ನ ಉಪಹಾರ ಯೋಜನೆ ಉಪನಿರ್ದೇಶಕರಾದ ಶ್ರೀಧರ ಮೂರ್ತಿ ಉದ್ಘಾಟಿಸಿದರು. ಕಲಿಕಾ ಹಬ್ಬದಲ್ಲಿ ಗೊಲ್ಲಲಿಂಗಮ್ಮನಹಳ್ಳಿ ಕ್ಲಸ್ಟರ್ ನ ಎಲ್ಲ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕು ಮುನ್ನ ಗ್ರಾಮದಲ್ಲಿ ವಿದ್ಯಾರ್ಥಿಗಳು ಪೂರ್ಣಕುಂಭಮೇಳ ದಲ್ಲಿ ಭಾಗವಹಿಸಿದರು. ವಿವಿಧ ಕಲಾತಂಡಗಳು ಕುಂಭಮೇಳದಲ್ಲಿ ಭಾಗವಹಿಸಿದ್ದವು.
ಕರೋನಾದಿಂದ ಉಂಟಾದ ಕಲಿಕಾ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕಲಿಕಾ ಚೇತರಿಕೆ ಕಾರ್ಯಕ್ರಮ ಅಡಿಯಲ್ಲಿ ಕಲಿಕಾ ಹಬ್ಬವನ್ನು ಆಯೋಜಿಸಿದೆ. ಹಬ್ಬದಲ್ಲಿ ಗೊಲ್ಲಲಿಂಗಮ್ಮನಹಳ್ಳಿ ಕ್ಲಸ್ಟರ್ ನ ಮುಖ್ಯಗುರುಗಳು ಹಾಗೂ ಸಿಆರ್ ಪಿ ಓಬಣ್ಣ ಹಾಗೂ ಗ್ರಾಮಸ್ಥರು ಭಾಗವಹಿಸಿದ್ರು.