ಚಿತ್ರದುರ್ಗ ಜಿಲ್ಲಾ ಯೋಗ ತರಬೇತಿ ಸಂಸ್ಥೆಯಡಿ ವಿಶ್ವ ಮಧು ಮೇಹ ದಿನ ಮತ್ತು ಅರಿವಿನ ಉಪನ್ಯಾಸ

  1. ಚಿತ್ರದುರ್ಗ: ಯಾವುದೇ ಕಾಯಿಲೆಗೆ ಮದ್ದು ಇದ್ದೇ ಇದೆ.ಆದರೆ ಸದೃಢ ಆರೋಗ್ಯ ನಮ್ಮದಾಗಿಸಿಕೊಳ್ಳುವಲ್ಲಿ ಅದಕ್ಕೆ ತಕ್ಕ ಕೆಲವು ನಿಯಮಗಳನ್ನು ಮುಂಜಾಗ್ರತ ಕ್ರಮಗಳಾಗಿ ಪಾಲಿಸಿದಲ್ಲಿ ನಮ್ಮ ಆರೋಗ್ಯ ನಮ್ಮ ಕೈಲಿ ಎಂಬುದಾಗಿ ಇಂದು ಮುಂಜಾನೆ ಹೊರಗಿನ ಜಿಟಿಜಿಟಿ ಮಳೆಯಲ್ಲಿ ಒಳಗೆ ತಣ್ಣನೆ ವಾತಾವರಣದಲ್ಲಿ  ಸಣ್ಣದಾಗಿ ಚರ್ಚೆಯೊಂದು ನಡೆಯಿತು.

ಚಿತ್ರದುರ್ಗ ಜಿಲ್ಲಾ ಯೋಗ ತರಬೇತಿ ಸಂಸ್ಥೆಯ ವತಿಯಿಂದ ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ

ವಿಶ್ವ ಮಧು ಮೇಹ ದಿನದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ  ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ  ಚಿತ್ರದುರ್ಗ ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರು, ತಜ್ಞ ವೈದ್ಯರೂ ಆದ ಡಾ.ಜಿ ಪ್ರಶಾಂತ್ ಅವರು ಮಾತನಾಡಿ ಮುಂಬರುವ 2025ನೇ ಇಸವಿಯೊಷ್ಟತ್ತಿಗೆ ತಮ್ಮ ದೇಶ ಮಧುಮೇಹಿ ರಾಜಧಾನಿಯಾಗುತ್ತದೆಂದು ಆತಂಕ ವ್ಯಕ್ತಪಡಿಸಿದರು.ಹಿಂದೆ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳ  ಸೇವಿಸಾಲರದ ಅಶಕ್ತತೆಯಿಂದ ಅನೇಕ ರೋಗಗಳು ಬರುತ್ತಿದ್ದವು . ಇಂದು ಇದ್ದರೂ ಅವನ್ನು ಬಳಸದೆ ಜಂಕ್ ಫುಡ್ ಬಳಸುತ್ತಾ ನಲುಗುತ್ತಿದ್ದೇವೆ.ಯಾವುದು ಅತಿಯಾಗಬಾರದು ಎಂದ ಅವರು ಈ ಸಕ್ಕರೆ ಕಾಯಿಲೆ  ನಲವತ್ತು ವರ್ಷದ ಮೇಲ್ಪಟ್ಟವರಿಗೆ ಬಂದವರಿಗೆ ಬಂದರೆ ಹೆದರುವ ಪ್ರಮೇಯ ಇಲ್ಲ. ಅದರೊಳಗೆ ಬರಬಾರದು. ಬಾರದಂತೆ ಸರಿಯಾದ ಕ್ರಮಗಳನ್ನು ಪಾಲಿಸಬೇಕು. ಪ್ರತಿಯೊಬ್ಬರು  ಆರು ಗಂಟೆ ನಿದ್ದೆ, ಸಮತೋಲನ ಆಹಾರ, ನಿಯಮಿತ 45ನಿಮಿಷ ವ್ಯಾಯಾಮ, ತೂಕ ನಿಯಂತ್ರಣ ಮತ್ತು ಒತ್ತಡ ಮುಕ್ತ, ಅಂದರೆ ಈ ಪಂಚ ಸೂತ್ರಗಳನ್ನು ಪಾಲಿಸಿದಲ್ಲಿ ಬರದಂತೆ ಮತ್ತು ಬಂದರೂ ನಿಯಂತ್ರಣದಲ್ಲಿ ಐವತ್ತು ವರ್ಷ ಸಹಜ ಜೀವನ ನಡೆಸಲು ಸಾಧ್ಯವಿದೆ ಎಂದರು. ಶರೀರ ಬಿಎಂಐ ಅಳತೆಗೆ ಸರಿಯಾಗಿ ಮತ್ತು ಹೊಟ್ಟೆಯ ಸುತ್ತಳತೆ ಸಮ ಪ್ರಮಾಣದಲ್ಲಿ ಇರುವಂತೆ ಜಾಗೃತಿ ವಹಿಸಬೇಕು ಎನ್ನುವಂತಹ ಪ್ರಸ್ತುತ ಕಾಡುತ್ತಿರುವ ಈ ಕಾಯಿಲೆಗೆ ತಕ್ಕ ಮಾರ್ಗೋಪಾಯಗಳನ್ನು ಸೂಚಿಸಿದರು.ಸಭಿಕರಿಂದ ಬಂದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡಿ ಆತಂಕ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿ ಆರೋಗ್ಯ ಪೂರ್ಣ ಬದುಕು ಸಾಗಿಸಲು ಅನೇಕ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಎಸ್.ಜೆ.ಎಂ.ದಂತ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯ,ಯೋಗ ತರಬೇತಿ ಶಾಲೆಯ ವಿದ್ಯಾರ್ಥಿಯೂ ಆದ ಡಾ.ಎಂ.ಎ.ರಘುನಾಥ ರೆಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸತ್ಕಾರಕ್ಕೆ ಪ್ರತಿಕ್ರಿಯಿಸಿದ ಅವರು ಪ್ರಶಸ್ತಿ ಪುರಸ್ಕಾರಗಳು ಅಷ್ಟು ಸುಲಭವಾಗಿ ದೊರೆಯುವುದಿಲ್ಲ. ನನಗೂ ಬಂದಾಗ ಕುಹಕದ ಮಾತು ಕೇಳಿ ಬಂದವು. ನಾನು ಸಹ ನಮ್ಮ ಕಾಲೇಜಿನ ಹಾಗೂ  ಅನೇಕ ಸಂಘ ಸಂಸ್ಥೆಗಳ ನೆರವಿನಿಂದ ನನ್ನ ವೃತ್ತಿಗೆ ಸಂಬಂಧಿಸಿದಂತೆ 40-50ಸಾವಿರ ವಿದ್ಯಾರ್ಥಿಗಳಿಗೆ, ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ. 1997ರಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ನಡೆದಿದೆ.ಈ ಕೆಲಸ ಮೆಚ್ಚಿ  1999ರಲ್ಲಿಯೇ ಆಗಿನ ರಾಜ್ಯಪಾಲರಿಂದ ಪ್ರಶಂಸನಾ ಪುರಸ್ಕಾರ ದೊರತಿರುವ ಬಗ್ಗೆ ತಿಳಿಸಿದ ಅವರು ನಮ್ಮ ದಂತ ನಿರ್ವಣೆಯನ್ನ ನಿರ್ಲಕ್ಷ ಮಾಡದೆ ಆರೈಕೆ ಮತ್ತು ಪೋಷಣೆ ಮಾಡಬೇಕೆಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಯೋಗ ತರಬೇತಿ ಸಂಸ್ಥೆಯ ಮುಖ್ಯಸ್ಥರಾದ  ಎಲ್ ಎಸ್  ಚಿನ್ಮಯಾನಂದ  ಅವರು ಮಾತನಾಡಿ ಅನೇಕ ರೋಗಗಳಿಗೆ, ಪ್ರಾಣಾಯಾಮ, ಧ್ಯಾನ, ಯೋಗದ ಆಸನಗಳು ಸಹಕಾರಿ.ಕೋವಿಡ್ ಗೆ ರಾಮ ಬಾಣ ಈ ಯೋಗ. ಕಳೆದ 25ವರ್ಷಗಳಿಂದ ಈ ಸಂಸ್ಥೆ ಯೋಗದ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ನಡೆದಿದೆ.ಯೋಗ  ಇದು ಎಲ್ಲರಿಗೂ ಅವಶ್ಯಕ ಎಂದರು. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.

ಸಮಾರಂಭದ ಆರಂಭಕ್ಕೆ ಯೋಗ ವಿದ್ಯಾರ್ಥಿಎಂ.ಜೆ.ಕೋಕಿಲಾ ಪ್ರಾರ್ಥನೆ ಮಾಡಿದರು. ಮತ್ತೋರ್ವ ವಿದ್ಯಾರ್ಥಿ ಗ್ರಾಮೀಣ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಕಿರಣ್ ಶಂಕರ್ ಸ್ವಾಗತಿಸಿದರು. ಮತ್ತೋರ್ವ ನಿವೃತ್ತ ಅಧಿಕಾರಿ, ರೋಟರಿ ಪದಾಧಿಕಾರಿ ನಾಗರಾಜ್ ಸಂಗಮ್ ಶರಣು ಸಮರ್ಪಣೆ ಮಾಡಿದರು. ಶಿಕ್ಷಕಿ ವಿಮಲಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!