ಕರ್ನಾಟಕದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಉಸ್ತುವಾರಿ ಅರುಣ್ ಸಿಂಗ್ ಸ್ವಷ್ಟನೆಗೆ : ಸಿ ಎಂ ವಿರೋಧಿ ಬಣಕ್ಕೆ ಮತ್ತೇ ಕುಟುಕಿದ ಹೊನ್ನಾಳಿ ಹುಲಿ

MP Renukacharya

ದಾವಣಗೆರೆ: ರಾಜ್ಯದಲ್ಲಿ ನಾಯಕತ್ವ ಬದಲಾಗಿ ತಾವು ಮುಖ್ಯಮಂತ್ರಿಯಾಗುತ್ತೇವೆ ಎಂದು ತಿರುಕನ‌ ಕನಸು ಕಂಡವರಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿ ಕನಸು ಕಂಡವರ ಆಸೆಗೆ ತಣ್ಣಿರೆರಚಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.‌ರೇಣುಕಾಚಾರ್ಯ ಪರೋಕ್ಷವಾಗಿ ಚಾಟಿ‌ ಬೀಸಿದ್ದಾರೆ.

ಹೊನ್ನಾಳಿಯಲ್ಲಿ ಗುರುವಾರ ಮಾತನಾಡಿರುವ ಅವರು, ಈ ಹಿಂದೆಯೂ‌ಅವರು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂದಿದ್ದರು. ಈಗಲೂ ಸಹ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲವೆಂದ ಅರುಣ್ ಸಿಂಗ್ ಅವರು ಸ್ಪಷ್ಟನೆ‌ ನೀಡಿದ್ದಾರೆ. ಆ ಮೂಲಕ ಸಿಎಂ ಆಗುತ್ತೇವೆ ಎಂದು ತಿರುಕನ‌ ಕನಸು ಕಂಡಿದ್ದವರಿಗೆ ಪ್ರತ್ಯುತ್ತರ ನೀಡಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಯತ್ನಾಳ್ ಮತ್ತು ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಕುಟುಕಿದರು.

ಕೆಲವರು ಅವರಕ್ಷೇತ್ರದ ಜನರ ಮಧ್ಯೆಯೇ ಇರುವುದಿಲ್ಲ. ಅಂತಹವರು ಸಾವಿರಾರು ಹೋರಾಟ ಮಾಡಿ, ಪಕ್ಷವನ್ನು ಕಟ್ಟಿ ಬೆಳೆಸಿ ಪಕ್ಷ ಅಧಿಕಾರಕ್ಕೆ ತಂದಿರುವ ನಮ್ಮ ನಾಯಕರಾದ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಾರೆ. ಅವರಿಗವರೆ ಸ್ವಯಂ ಘೋಷಿತ ನಾಯಕರೆಂದು ಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಕರೋನಾದ ಸಂದರ್ಭದಲ್ಲಿ ಸಿಎಂಗೆ ಎರಡು ಬಾರಿ ಪಾಸಿಟಿವ್ ಆಗಿದ್ದರೂ ಅದನ್ನು ಲೆಕ್ಕಿಸದೆ ಅವರು ರಾಜ್ಯದ ಜನರ ಆರೋಗ್ಯ ರಕ್ಷಣೆಗೆ ಮುಂದಾದರು. ಜನರ ಸುರಕ್ಷತೆಗೆ ಲಸಿಕೆ ಕೊಡಿಸಲು, ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರ ಧನ ಮತ್ತು ಕರೋನಾ ವಾರಿಯರ್ಸ್ ಗಳಿಗೆ ಗೌರವಧನ ನೀಡಲು ಪ್ಯಾಕೇಜ್ ಘೋಷಿಸಿದರು. ಹೀಗೆ ಸಕ್ರಿಯಾವಾಗಿರುವ ಯಡಿಯೂರಪ್ಪ ಅವರ ಬಗ್ಗೆ ಕೆಲವರು ತಮ್ಮ ಕ್ಷೇತ್ರದ ಜನರ ಮಧ್ಯೆಯೇ ಇದ್ದು ಸೇವೆ ಮಾಡದವರು ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಕರೋನಾದ ಈ ಸಂದರ್ಭದಲ್ಲಿ ರಾಜ್ಯದ ಜನರು ಸೂಕ್ಷ್ಮವಾಗಿ ನಮ್ಮನ್ನು ಗಮನಿಸುತ್ತಿರುತ್ತಾರೆ. ನಾವು ನಮ್ಮ ಕ್ಷೇತ್ರದಲ್ಲಿ ಶಾಸಕರಾಗಿ ಅಲ್ಲ, ಕೇವಲ ಜನ ಸೇವಕರಾಗಿ, ಕಾವಲುಗಾರರಾಗಿ ಜನರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಆದರೆ, ಅದರ ಬದಲಾಗಿ ಕೆಲವರು ದೆಹಲಿಗೆ ಹೋಗಿ ರಾಜ್ಯ ನಾಯಕರನ್ನು ಭೇಟಿ ಮಾಡುತ್ತೇವೆ ಎಂದು ಮಾಧ್ಯಮದವರ ಮುಂದೆ ಹೇಳಿ ಅವರ ಮನೆ ಗೇಟ್ ತಟ್ಟಿ ಹಿಂತಿರುಗಿ, ನಾಯಕತ್ವದಲ್ಲಿ ಬದಲಾವಣೆ ಬಗ್ಗೆ ನಾಯಕರೊಂದಿಗೆ ಚರ್ಚಿಸಿದ್ದೇವೆ ಎಂದು ಸುಳ್ಳು ಸುದ್ದಿ ಹರಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *

error: Content is protected !!