ಸಿಎಂ ಅಂತಾ ಹೇಳಿಕೊಂಡು ಹೋಡಾಡೊಕೆ ನಾನೆನೂ ಸಿದ್ದರಾಮಯ್ಯ ನಾ ಅಥವಾ ಡಿಕೆಶಿ ನಾ.? ಈಶ್ವರಪ್ಪ ಮಾತಿನ ಮರ್ಮವೇನು.?

IMG-20210723-WA0011

 

ದಾವಣಗೆರೆ: ದಲಿತ ಮುಖ್ಯಮಂತ್ರಿ ಘೋಷಿಸಲಿ ಎಂದು ಸವಾಲು ಹಾಕಿರುವ ಕಾಂಗ್ರೆಸ್ ನವರು ರಾಜ್ಯದಲ್ಲಿ ಹೆಚ್ಚು ಕಾಲ‌ ಆಡಳಿತ ನಡೆಸಿದ ತಾವೇ ಯಾಕೆ ದಲಿತರನ್ನು ಸಿಎಂ ಸ್ಥಾನಕ್ಕೆ ಏರಿಸಲಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ದಲಿತ ಮುಖ್ಯಮಂತ್ರಿ ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಆದರೆ, ಪರಮೇಶ್ವರ್ ಅವರನ್ನು ಸೋಲಿಸಿ ಮೂಲೆಗುಂಪು‌ ಮಾಡಿದ್ದು ಇದೇ ಸಿದ್ದರಾಮಯ್ಯ ಎಂದು ಚಾಟಿ ಬೀಸಿದರು.

ಡಿಕೆಶಿ ಹಾಗೂ ಸಿದ್ದರಾಮಯ್ಯ ಈಗಲೂ ಮುಂದಿನ ಸಿಎಂ ನಾನು ಎಂದು ಬಡಿದಾಡುತ್ತಿದ್ದಾರೆ. ಈಗಲಾದರೂ ನಾವು ಅಧಿಕಾರಕ್ಕೆ ಬಂದ್ರೆ ದಲಿತರನ್ನು ಸಿಎಂ ಮಾಡುತ್ತೇವೆ ಅಂತಾ ಹೇಳಲಿ ನೋಡೋಣ. ಈ ಜನ್ಮದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್‌ನವರು ಸಿಎಂ ಆಗಲ್ಲ ಆ ಪ್ರಶ್ನೆ ಬೇರೆ. ಸಮಾಧಾನಕ್ಕಾದರೂ ಈ ಮಾತು ಹೇಳಬಹುದಲ್ಲಾ ಎಂದು ಲೇವಡಿ ಮಾಡಿದರು.

ಸಿಎಂ ಬದಲಾವಣೆ ಕುರಿತು ಮಾತನಾಡಿದ‌ ಅವರು, ಪಕ್ಷ ತಾಯಿ ಇದ್ದಂತೆ, ವರಿಷ್ಠರು ತೀರ್ಮಾನಕ್ಕೆ ಬದ್ಧ ಎಂದು ಸಿಎಂ ಹೇಳಿದ್ದಾರೆ. ಸಿಎಂ ಬದಲಾವಣೆ ಆಗುತ್ತೋ ಬಿಡುತ್ತೋ ಗೊತ್ತಿಲ್ಲ. ಮುಖ್ಯಮಂತ್ರಿಗಳ ಬದಲಾವಣೆ ವರಿಷ್ಠರ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದರು.

ಆರು ತಿಂಗಳಲ್ಲ ಆರು ದಿನದಲ್ಲಿ ಏನಾಗುತ್ತೋ ಗೊತ್ತಿಲ್ಲ. ಸಿಎಂ ರಾಜೀನಾಮೆ ಕೊಟ್ಟರೆ ಕ್ಯಾಬಿನೆಟ್‌ ಡಿಸಾಲ್ವ್‌ ಆಗುತ್ತೆ. ಕಟಿಲ್‌ ಆಡಿಯೋಗೂ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಆರೋಪ ಅಲ್ಲಗಳೆದರು.

ನಳಿನ್‌ಕುಮಾರ್‌ ಆಡಿಯೋ ಹಿನ್ನೆಲೆ ನಿಮ್ಮ ಸ್ಥಾನ ಹೋಗಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೋದ್ರೆ ಹೋಯ್ತು ರಿ, ನಾವೇ ಗೂಟಹೊಡೆದಕೊಡು ಕುಳಿತುಕೊಳ್ಳಬೇಕಾ?ನಾವಲ್ಲ ಅಂದ್ರೆ ಇನ್ನೊಬ್ರು ಬರ್ತಾರೆ ಎಂದರು.

ನಾನೇ ಸಿಎಂ ಎಂದು ಹೇಳಿಕೊಂಡು‌ ತಿರುಗಲಿಕ್ಕೆ ನಾನೇನು ಸಿದ್ದರಾಮಯ್ಯ, ಡಿ.ಕೆ.‌ಶಿವಕುಮಾರ್ ಅಲ್ಲ ಎಂದು ವ್ಯಂಗ್ಯವಾಡಿದ ಸಚಿವರು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬರಿಬ್ಬರು ಕಾರ್ಯಕರ್ತರು, ಅಭಿಮಾನಿಗಳ ಬಳಿ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಟ್ಟು ಘೋಷಣೆ ಹಾಕಿಸಿಕೊಳ್ಳುತ್ತಾರೆ. ಆದರೆ, ನಾನು ಅವರ ಸಾಲಿಗೆ ಸೇರಿದವನಲ್ಲ. ನನ್ನ ಅಭಿಮಾನಿಗಳು ನಾನೆ ಸಿಎಂ ಆಗಲಿ ಎಂದು ಅಪೇಕ್ಷೆ ಪಡಬಹುದು. ಆದರೆ, ಈಗ ಇರುವ ಕೆಲವು ಗೊಂದಲಗಳು‌ ಈಗಷ್ಟೆ ಬಗೆಹರಿಯುತ್ತಿವೆ. ಹಾಗಾಗಿ, ನನ್ನ ಹೆಸರನ್ನು ಸಿಎಂ ಸ್ಥಾನಕ್ಕೆ ಸೂಚಿಸಬೇಡಿ ಎಂದು ಮನವಿ ಮಾಡಿದರು.

ಬಿಜೆಪಿ ಯುವಕರಿಗೆ ಅವಕಾಶ ನೀಡುತ್ತಿದೆ. ಕೇಂದ್ರದ ಹರ್ಷವರ್ಧನ್‌, ರವಿಶಂಕರ್‌ ಪ್ರಸಾದ್‌, ಪ್ರಕಾಶ ಜಾವಡೇಕರ್‌ ಅಂಥ ಸಚಿವರನ್ನೇ ವಯಸ್ಸಾಗಿದೆ ಎಂದು ಕೈ ಬಿಟ್ಟಿದ್ದಾರೆ. ಇದು ಬಿಜೆಪಿಯ ವಿಶೇಷ, ಅದಕ್ಕೆ ಸಂತೋಷ ಪಡುತ್ತೇವೆ ಎಂದು ಸಮರ್ಥಿಸಿಕೊಂಡರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!