Cm Khadi Dress: ಸಿ ಎಂ ಬೊಮ್ಮಾಯಿ ತಮ್ಮ ಪತ್ನಿಗೆ 16 ಸಾವಿರ ಮೌಲ್ಯದ ಸಿಲ್ಕ್ ಸೀರೆ ತಮಗೆ ಖಾದಿ ಜುಬ್ಬಾ ಖರೀದಿ.!

ಬೆಂಗಳೂರು: ಗಾಂಧಿ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾದಿ ಮಾರಾಟ ಮಳಿಗೆಗೆ ಭೇಟಿ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ. ಸಚಿವ ಎಂ ಟಿ ಬಿ ನಾಗರಾಜ್, ಗೋವಿಂದ ಕಾರಜೋಳ,ಸುನಿಲ್ ಕುಮಾರ್,ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ರಾಘವೇಂದ್ರ, ಇಂದು ಕುಮಾರಕೃಪಾ ರಸ್ತೆಯಲ್ಲಿರುವ ಖಾದಿ ಮಾರಾಟ ಮಳಿಗೆಗೆ ಭೇಟಿ ನೀಡಿ ಖಾದಿ ಹಾಗೂ ಗ್ರಾಮೋದ್ಯಮ ಉತ್ಪನ್ನಗಳನ್ನು ಖರೀದಿಸಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪತ್ನಿಗೆ ಸಿಲ್ಕ್ ಸೀರೆ ಹಾಗೂ ಜುಬ್ಬಾ ಬಟ್ಟೆ ಸೇರಿದಂತೆ 16.031 ರೂ ಮೊತ್ತದ ಉತ್ಪನ್ನ ಖರೀದಿ ಮಾಡಿದರೆ. ಬಿವೈ ರಾಘವೇಂದ್ರ 4.300 ರೂ ಹಾಗೂ ಎಂಟಿವಿ ನಾಗರಾಜ್ 3.000ರೂ ಮೊತ್ತದ ಖಾದಿ ಬಟ್ಟೆ ಖರೀದಿ ಮಾಡಿದರು.