CM Medal: ದಾವಣಗೆರೆಯ 8 ಪೋಲೀಸ್ ಅಧಿಕಾರಿಗಳು ಹಾಗೂ 4 ಪೋಲೀಸ್ ಸಿಬ್ಬಂದಿಗಳಿಗೆ ಸಿಎಂ ಪದಕ

ದಾವಣಗೆರೆ: (CM Medal) 2024 ನೇ ಸಾಲಿನ ಮುಖ್ಯಮಂತ್ರಿಯವರ ಪದಕಗಳನ್ನು ರಾಜ್ಯದ 197 ಪೊಲೀಸ್ ಅಧಿಕಾರಿ / ಸಿಬ್ಬಂದಿಗಳಿಗೆ ಮುಖ್ಯಮಂತ್ರಿಯವರ ಪದಕ ಪ್ರಧಾನ ಮಾಡಲು ನಿಯಮಗಳಲ್ಲಿ ನಿಗದಿಪಡಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸಿರುವ ಷರತ್ತಿಗೊಳಪಟ್ಟು ಮುಖ್ಯಮಂತ್ರಿಯವರ ಪದಕಗಳನ್ನು ನೀಡಲು ರಾಜ್ಯ ಸರ್ಕಾರವು ಅನುಮೋದಿಸಿದೆ.
ದಾವಣಗೆರೆ ಜಿಲ್ಲೆಯ 8 ಹಿರಿಯ ಪೋಲಿಸ್ ಅಧಿಕಾರಿಗಳು ಹಾಗೂ 4 ಹಿರಿಯ ಪೊಲೀಸ್ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಲಭಿಸಿದ್ದು ದಾವಣಗೆರೆ ಜಿಲ್ಲೆಯ ಕೀರ್ತಿಗೆ ಭಾಜನರಾಗಿದ್ದಾರೆ. ದಾವಣಗೆರೆ ಪೂರ್ವ ವಲಯ ಐಜಿಪಿ ಹಾಗೂ ಎಸ್ ಪಿ ಎಲ್ಲಾ ಪದಕ ವಿಜೇತರಿಗೆ ಅಭಿನಂದಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಸಿಎಂ ಪದಕ ಪಡೆದವರ ವಿವರ:
ಶ್ರೀ ಸ್ಯಾಮ್ ವರ್ಗೀಸ್, ಐ.ಪಿ.ಎಸ್, ಸಹಾಯಕ ಪೊಲೀಸ್ ಅಧೀಕ್ಷಕರು, ಚನ್ನಗಿರಿ ಉಪ ವಿಭಾಗ, ದಾವಣಗೆರೆ ಜಿಲ್ಲೆ
ಶ್ರೀ ಪ್ರಕಾಶ ಪಿ ಬಿ, ಡಿವೈಎಸ್‌ಪಿ, ಡಿಎಆರ್, ದಾವಣಗೆರೆ ಜಿಲ್ಲೆ
ಶ್ರೀ ಬಿ.ಎಸ್. ಬಸವರಾಜ್, ಪೊಲೀಸ್ ಉಪಾಧೀಕ್ಷಕರು, ದಾವಣಗೆರೆ ಗ್ರಾಮಾಂತರ ಉಪ ವಿಭಾಗ, ದಾವಣಗೆರೆ ಜಿಲ್ಲೆ
ಶ್ರೀ ಕಿರಣ್ ಕುಮಾರ್ ಇ.ವೈ. ಪೊಲೀಸ್ ನಿರೀಕ್ಷಕರು, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ
ಶ್ರೀ ರವಿ ಎನ್.ಎಸ್. ಪೊಲೀಸ್ ನಿರೀಕ್ಷಕರು, ನ್ಯಾಮತಿ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆ
ಶ್ರೀ ಸಾಗರ್ ಅತ್ತರವಾಲ್, ಪಿ.ಎಸ್.ಐ. ಕೆ.ಟಿ.ಜೆ ನಗರ ಪೊಲೀಸ್ ಠಾಣೆ, ದಾವಣಗೆರೆ
ಶ್ರೀ ಮಂಜಪ್ಪ ಕುಪ್ಪೇಲೂರು, ಪಿ.ಎಸ್.ಐ, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆ
ಶ್ರೀ ಸಂಜೀವ್ ಕುಮಾರ್, ಪಿ.ಎಸ್.ಐ, ಹೊನ್ನಾಳಿ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆ
ಶ್ರೀ ರಮೇಶ್ ಎಂ.ಪಿ. ಎ.ಪಿ.ಸಿ. ಪೂರ್ವ ವಲಯ ಕಚೇರಿ, ದಾವಣಗೆರೆ
ಶ್ರೀ ಶಿವರಾಜ್ ಎಸ್. ಸಿ.ಪಿ.ಸಿ 53. ನ್ಯಾಮತಿ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆ
ಶ್ರೀ ರಾಘವೇಂದ್ರ, ಸಿ.ಹೆಚ್.ಸಿ 10. ಡಿ.ಸಿ.ಆರ್.ಬಿ ಘಟಕ, ದಾವಣಗೆರೆ ಜಿಲ್ಲೆ
ಶ್ರೀ ಆಂಜನೇಯ ಕೆ.ಟಿ. ಸಿ.ಹೆಚ್.ಸಿ 274. ಡಿ.ಸಿ.ಆರ್.ಬಿ ಘಟಕ, ದಾವಣಗೆರೆ ಜಿಲ್ಲೆ