ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಸರ್ವ ಧರ್ಮಿಯರಲ್ಲಿ ಒಂದಾದ ಗಣೇಶ
ದಾವಣಗೆರೆ: ಹಿಂದೂ ಧರ್ಮದ ಪುರಾಣಗಳಲ್ಲಿ 33 ಕೋಟಿ ದೇವಾನುದೇವತೆಗಳಿದ್ದರು ಕೂಡ ಯಾವುದೆ ಕಾರ್ಯಕ್ರಮಗಳಲ್ಲಿ ಗಣನಿಗೆ ಮೊದಲ ಪೂಜೆಯ ಆಧ್ಯತೆ ನೀಡುತ್ತಾರೆ. ಇನ್ನು ನಾಡಿನೆಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ ಜೋರಾಗಿದ್ದು. ಮನೆ ಮನಗಳಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿದೆ, ಆದರೆ ಇಲ್ಲೊಂದು ಗ್ರಾಮದಲ್ಲಿ ಸರ್ವ ಧರ್ಮದ ಸಂಕೆತವಾಗಿ ಹಿಡೀ ಊರಿನ ಜನರು ಸೇರಿ ಗಣಪತಿ ಹಬ್ಬವನ್ನು ಆಚರಿಸುತ್ತಿದ್ದಾರೆ.
ದೇಶದಾದ್ಯಂತ ಗಣೇಶ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ದಾವಣಗೆರೆ ಜಿಲ್ಲೆ ದಾವಣಗೆರೆ ತಾಲ್ಲೂಕಿನ ಕೆ ಕೋಡಿಹಳ್ಳಿ ಗ್ರಾಮದಲ್ಲಿ ಊರಿನ ಎಲ್ಲಾ ಸಮುದಾಯದವರಿಂದ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಲಾಗಿದೆ. ಮುಸ್ಲಿಂ ರ ಝಂಡಾ ಹಾಗೂ ಹಿಂದೂಗಳ ಬಸವಣ್ಣ ದೇವಾಲಯದ ಆವರಣದಲ್ಲಿ ಗಣೇಶನನ್ನು ಕುರಿಸಿರುವುದು ಮತ್ತೊಂದು ವಿಶೇಷವಾಗಿದೆ.
ಇಂದಿನ ದಿನಮಾನದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಗಣೇಶನನ್ನು ಕುರಿಸಿ ಹಬ್ಬ ಆಚರಣೆ ಮಾಡುತ್ತಾರೆ. ಇನ್ನು ಕೆಲವೊಂದು ಊರುಗಳಲ್ಲಿ ಸ್ಪರ್ಧೆ ಯಿಂದ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಾರೆ.ಆದರೆ ಈ ಗ್ರಾಮದಲ್ಲಿ ಸರ್ವ ಧರ್ಮಿಯರು ಹೊಂದಾಗಿ ಗಣೇಶ ಹಬ್ಬದಲ್ಲಿ ಪಾಲಗೊಂಡು ಗಣೇಶ ಚತುರ್ಥಿತಿಯನ್ನು ಆಚರಣೆ ಮಾಡಿದ್ದಾರೆ.
ಅರ್ಪಿತ K. B
ದಾವಣಗೆರೆ