ದಾವಣಗೆರೆ ರೌಡಿ ಶೀಟರ್ ಕಣುಮ(ಸಂತೋಷ್) ಬುಚ, ಪರಮಿ ಸೇರಿ 10 ಜನರ ವಿರುದ್ದ ದೂರು ದಾಖಲು
ದಾವಣಗೆರೆ: ನಗರದ ಲೆನಿನ್ ನಗರದಲ್ಲಿರುವ ಮಹಾನಗರ ಪಾಲಿಕೆ 36 ನೇ ವಾರ್ಡ್ ನ ಸದಸ್ಯೆ ನಾಗರತ್ಮಮ್ಮ ಅವರ ಜನಸಂಪರ್ಕ ಕಚೇರಿಯ ಒಳಗಡೆ ನಿಲ್ಲಿಸಿದ್ದ ರೌಡಿಶೀಟರ್‌ಗೆ ಸೇರಿದ ಕಾರು ಹಾಗೂ ಮಾರಕಾಸ್ತ್ರಗಳನ್ನು ಕೆ.ಟಿ.ಜೆ. ನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದ ಆರೋಪದಡಿ ದೂರು ದಾಖಲಿಸಿಕೊಂಡಿರುವ ಕೆಟಿಜೆ ನಗರ ಪೊಲೀಸರು ಜನಸಂಪರ್ಕ ಕಚೇರಿಯ ಒಳಗಡೆ ನಿಲ್ಲಿಸಿದ್ದ ರೌಡಿಶೀಟರ್ ಸಂತೋಷ್‌ಕುಮಾರ್ ಅಲಿಯಾಸ್ ಕಣುಮ ಹಾಗೂ ಆತನ ಸಹಚರರಿಗೆ ಸೇರಿದ ನಂಬರ್ ಪ್ಲೇಟ್ ಇಲ್ಲದ 7.10 ಲಕ್ಷ ಮೌಲ್ಯದ ಎಕ್ಸ್‌ಯುವಿ 500, ಡಬ್ಲ್ಯು10 ಕಾರು, ಕಾರಿನೊಳಗಡೆ ಇದ್ದ 4 ಲಾಂಗ್‌ಗಳು ಹಾಗೂ 50 ಗ್ರಾಂ ಖಾರದಪುಡಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕಣುಮ ಆತನ ಸಹಚರರಾದ ಪರಮೇಶ್ ಅಲಿಯಾಸ್ ಪರಮಿ, ಶಿವಪ್ಪ, ಪರಶುರಾಮ್ ಅಲಿಯಾಸ್ ಪರ್ಶಿ, ದಾದಾಪೀರ್ ಅಲಿಯಾಸ್ ದಾದು, ಮಂಜುನಾಥ ಅಲಿಯಾಸ್ ತಮ್ಮಡು, ಶ್ರೀನಿವಾಸ ಅಲಿಯಾಸ್ ಬೂಚ, ತ್ರಿಲೋಕ್ ಅಲಿಯಾಸ್ ತಿಲಕ್‌ನಾಯ್ಕ, ತ್ರಿಗುಣ ಅಲಿಯಾಸ್ ತ್ರಿಗುಣನಾಯ್ಕ ಹಾಗೂ ದತ್ತು ಅವರ ವಿರುದ್ಧ ಕೆ.ಟಿ.ಜೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ, ಡಿಸಿಆರ್‌ಬಿ ಡಿವೈಎಸ್‌ಪಿ ಬಿ.ಎಸ್. ಬಸವರಾಜ್ ನೇತೃತ್ವದಲ್ಲಿ ಕೆಟಿಜೆ ನಗರ ಠಾಣೆಯ ಪಿಎಸ್‌ಐ ಪ್ರಭು ಎಸ್. ಕೆಳಗಿನಮನಿ, ಮಹಿಳಾ ಪಿಎಸ್‌ಐ ಮಂಜುಳಾ, ಹಾಗೂ ಎ ಎಸ್ ಐ ಈರಣ್ಣ. ಸಿಬ್ಬಂದಿಯವರಾದ ದಾವಣಗೆರೆ ಜಿಲ್ಲಾ ಡಿ.ಸಿ.ಆರ್.ಬಿ, ವಿಭಾಗದ ಮಾರುತಿ, ಆಂಜನೇಯ, ಆಶೋಕ, ಮಲ್ಲಿಕಾರ್ಜುನ, ಬಾಲರಾಜ್, ಮತ್ತು ಕೆಟಿಜೆ ನಗರ ಠಾಣೆಯ ಪ್ರಕಾಶ್, ಮಂಜಪ್ಪ, ಷಣ್ಮುಖ, ಮಂಜನಗೌಡ, ರವಿ ಬಿ.ಆರ್, ಪ್ರಸನ್ನ ರವರನ್ನು ಒಳಗೊಂಡ ತಂಡ ದಾಳಿಯಲ್ಲಿ ಭಾಗವಹಿಸಿದ್ದರು.
ಪೊಲೀಸರ ಈ ದಾಳಿಯನ್ನು ಎಸ್‌ಪಿ ಸಿ.ಬಿ.ರಿಷ್ಯಂತ್ ಹಾಗೂ ಎಎಸ್ಪಿ ಆರ್. ಬಿ. ಬಸರಗಿ ಶ್ಲಾಘಿಸಿದ್ದಾರೆ.