ಹಳೇ ಬಾತಿ ಆಂಜನೇಯ ಸ್ವಾಮಿ ಸನ್ನಿಧಿಗೆ ಸಾರಿಗೆ ಸೌಲಭ್ಯ ಕಲ್ಪಿಸಿದ ಜಿಲ್ಲಾಧಿಕಾರಿ ಗ್ರಾಮಸ್ಥರಿಂದ ಅಭಿನಂದನೆ
ದಾವಣಗೆರೆ: ಹಳೇಬಾತಿ ಗ್ರಾಮಸ್ಥರು ಸುಮಾರು ವರ್ಷಗಳಿಂದ ತಮ್ಮ ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದೆ ಆಟೋ, ಕಾಲ್ನಡಿಗೆ ಮೂಲಕ 3 ಕಿಲೋಮೀಟರ್ ದೂರದ ದೊಡ್ಡಬಾತಿ ಗ್ರಾಮಕ್ಕೆ ಬಂದು ಅಲ್ಲಿಂದ ದಾವಣಗೆರೆಗೆ, ಹರಿಹರಕ್ಕೆ ಹೋಗುವ ಪರಿಸ್ಥಿತಿ ಇತ್ತು.
ತಮ್ಮ ಗ್ರಾಮಕ್ಕೆ ಬಸ್ ಸೌಕರ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ತುಂಬಾ ಸಲ ಮನವಿ ಮಾಡಿದ್ದರೂ ಸಹ ಪ್ರಯೋಜನವಾಗಿರಲಿಲ್ಲ ಹಾಗಾಗಿ ಹಳೇಬಾತಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಬಸ್ ಬರುವ ಆಸೆಯನ್ನೇ ಬಿಟ್ಟಿದ್ದರು.
ಕೊನೆಯ ಪ್ರಯತ್ನವೆಂಬಂತೆ ಈಗಿನ ಜಿಲ್ಲಾಧಿಕಾರಿಗಳಾದ ಶ್ರೀ ಮಹಾಂತೇಶ ಬೀಳಗಿ ಯವರಿಗೆ ಮನವಿ ಮಾಡೋಣವೆಂದು ತೀರ್ಮಾನಿಸಿ ಅವರಿಗೆ ಮನವಿ ಮಾಡಲಾಗಿತ್ತು, ಶ್ರೀ ಮಹಾಂತೇಶ ಬೀಳಗಿ ಅವರು ಗ್ರಾಮಸ್ಥರ ಬೇಡಿಕೆ ತಿಳಿದ ಒಂದೇ ವಾರದಲ್ಲಿ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಿದ್ದು, ಗ್ರಾಮದ ಹಿರಿಯರು, ಯುವಕರು ಹರ್ಷಗೊಂಡಿದ್ದು, ಗ್ರಾಮಸ್ಥರು ತಮ್ಮ ಬಹುದಿನದ ಬೇಡಿಕೆಯನ್ನು, ಒಂದೇ ವಾರದಲ್ಲಿ ಈಡೇರಿಸಿದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾಗಿ ಬಸ್ ವ್ಯವಸ್ಥೆಗೆ ಸಹಕರಿಸಿದ ಕೆಎಸ್ಸಾರ್ಟಿಸಿ ಡಿಸಿ ಸಿದ್ದೇಶ್ವರ ಎನ್ ಹೆಬ್ಬಾಳ ಹಾಗೂ ಸಹಾಯಕ ಸಂಚಾರ ಅಧೀಕ್ಷಕರಾದ ಸಿದ್ದೇಶ್ ಅವರಿಗೆ ಸಹ ಧನ್ಯವಾದಗಳು.
ಕೆ.ಎಲ್.ಹರೀಶ್ ಬಸಾಪುರ.