20ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ಘಟಕವನ್ನ ಪುನರ್ ರಚಿಸಿದ ಮುಖಂಡರು

ದಾವಣಗೆರೆ: ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ದಕ್ಷಿಣ ವಲಯ ಕಾಂಗ್ರೆಸ್ ವರಿಷ್ಠರ ಸೂಚನೆಯಂತೆ 20ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ಘಟಕವನ್ನು ಪುನ್ರರಚಿಸಲಾಗಿದೆ.
ಗೌರವಾಧ್ಯಕ್ಷರಾಗಿ ಅಲೆಕ್ಸಾಂಡರ್ (ಜಾನ್,) ಅಧ್ಯಕ್ಷರಾಗಿ ರಾಘವೇಂದ್ರ.ಡಿ, ಉಪಾಧ್ಯಕ್ಷರುಗಳಾಗಿ ಕೃಷ್ಣಪ್ಪ.ವಿ, ರಾಜು.ಕೆ., ಜಗನ್.ಎನ್.,ಮಾರುತಿ ಅವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಖಜಾಂಜಿಯಾಗಿ ಅನಿಶ್ ಬಾಷ್, ಕಾರ್ಯದರ್ಶಿಯಾಗಿ ಸಂತೋಷ ಎನ್. ನಾಯ್ಕ, ಸಹ ಕಾರ್ಯದರ್ಶಿಯಾಗಿ ಸತ್ಯರಾಜ್.ಪಿ, ಸಂಘಟನ ಕಾರ್ಯದರ್ಶಿಯಾಗಿ ಕೃಷ್ಣ(ಸೋಮ್ಲಿ) ಅವರನ್ನು ನೇಮಿಸಲಾಗಿದೆ.
ಸದಸ್ಯರುಗಳಾಗಿ ಶಿವಶಂಕರ.ಎಲ್, ಧರ್ಮ ಎಂ, ವೆಂಕಟೇಶ್ ನಾಯ್ಕ.ಅರ್, ಲಿಂಗರಾಜು ನಾಯ್ಕ, ವಿಕ್ರಮ್.ವಿ. ಹಾಗೂ ಮಹಾನಗರಪಾಲಿಕೆ ಸದಸ್ಯರಾದ ಮೀನಾಕ್ಷಿ ಜಗದೀಶ ಅವರು ಆಯ್ಕೆಯಾಗಿದ್ದಾರೆ.