ಯಾರಿಗಾದ್ರೂ ಕಷ್ಟ ಇದ್ರೆ ಹೇಳಿ, ಪೆಟ್ರೋಲ್ ಡೀಸೆಲ್ ಹಾಕಿಸ್ತೀನಿ.! ಸಂಸದರ ಹೇಳಿಕೆ ದುರಹಂಕಾರವಾ ಅಥವಾ ಜನಪರ ಕಾಳಜಿನಾ.?
ದಾವಣಗೆರೆ: ಅಧಿಕಾರದಲ್ಲಿ ಇರುವಂತಹ ನಾಯಕರುಗಳಿಗೆ ಜನಸಾಮಾನ್ಯರಗಲಿ, ಮಾಧ್ಯಮದವರಗಲಿ ಪ್ರಶ್ನಿಸುವುದು ಸಾಮಾನ್ಯ ಆದರೆ ನಮ್ಮ ಸಂಸದರು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ನೀಡಿರುವ ಹೇಳಿಕೆ ಜನಪ್ರತಿನಿಧಿಗಳಾಗಿ ಜನರ ಸೇವೆಗಾಗಿ ಇರುವಂತಹ ನಾಯಕರುಗಳಿಗೆ ಭೂಷಣವೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡುತ್ತಿದೆ.
ಜನಸಾಮಾನ್ಯರಿಗೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ತೊಂದರೆಯಾಗಿಲ್ಲ ಮಾಧ್ಯಮದವರು ಮತ್ತು ವಿರೋಧ ಪಕ್ಷದವರು ಸುಮ್ಮನೆ ಬಿಂಬಿಸುತ್ತಿದ್ದಿರಿ ಎಂಬ ನಿಮ್ಮ ಹೇಳಿಕೆ ತೀವ್ರ ಹಾಸ್ಯಾಸ್ಪದವಾಗಿದ್ದು, ಈ ಹೇಳಿಕೆಯಿಂದಲೇ ನೀವು ಜನರ ನಡುವೆ ಇಲ್ಲ ಎಂಬುದು ಅರ್ಥವಾಗುತ್ತಿದೆ.
ಏನೇ ಇರಲಿ ಕಷ್ಟ ಇದ್ದವರಿಗೆ ತಾವೇ ಪೆಟ್ರೋಲ್-ಡೀಸೆಲ್ ಹಾಕಿಸುವ ಭರವಸೆ ನೀಡಿರುವುದು ಸ್ವಾಗತಾರ್ಹ, ದಾವಣಗೆರೆ ಜಿಲ್ಲೆಯಲ್ಲಿರುವ ಎಲ್ಲಾ ಪೆಟ್ರೋಲ್ ಬ್ಯಾಂಕುಗಳ ಮಾಲೀಕರಿಗೆ ಸೂಚನೆ ನೀಡಿ ಕಷ್ಟದಲ್ಲಿರುವವರಿಗೆ ತಮ್ಮ ವತಿಯಿಂದ ಪೆಟ್ರೋಲ್ ಡೀಸೆಲ್ ಹಾಕುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲೆಯ ಜನರ ಪರವಾಗಿ ವಿನಂತಿ.
ಕೆ.ಎಲ್.ಹರೀಶ್ ಬಸಾಪುರ.