Congress CM: ನಾವು ಯಾರಾದ್ರು ಮಾತನಾಡಿದ್ರೆ ನೋಟೀಸ್ ಕೊಡುತ್ತಾರೆ,  ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕೂಡ ಕ್ರಮಕ್ಕೆ ಆಗ್ರಹಿಸಿದ ಶಿವಗಂಗಾ ಬಸವರಾಜ್

20251023_224216

ದಾವಣಗೆರೆ:(Congress CM)  ಉತ್ತರಾಧಿಕಾರಿ ನೇಮಕ ಮಾಡಲು ಇದು ಮೈಸೂರು ರಾಜ ಮನೆತನ ಅಲ್ಲ, ರಾಜ್ಯದ ಮುಂದಿನ ಉತ್ತರಾಧಿಕಾರಿ ಯಾರು ಎನ್ನುವುದನ್ನು ಜನರು ತೀರ್ಮಾನ ಮಾಡುತ್ತಾರೆ ಎನ್ನುವ ಮೂಲಕ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಬೆಂಗಲಿಗ ಶಾಸಕ ಶಿವಗಂಗಾ ಬಸವರಾಜ್ ತಿರುಗೇಟು ನೀಡಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಲಿಷ್ಟ ಹೈಕಮಾಂಡ್ ಹೊಂದಿರುವ ಪಕ್ಷ. ಹಾಗಾಗಿ ಉತ್ತರಾಧಿಕಾರಿ ನೇಮಕ ಮಾಡಲು ಇದು ಮೈಸೂರು ರಾಜರ ಮನೆತನ ಅಲ್ಲ. ರಾಜರ ವಂಶದಲ್ಲಿ ಉತ್ತರಾಧಿಕಾರದ ಪದ್ಧತಿ ಇರುತ್ತೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಯಾವಾಗಲು ಬದ್ಧರಾಗಿರಬೇಕು ಎಂದು ಹೇಳಿದರು.

ಮುಂದಿನ ಉತ್ತರಾಧಿಕಾರಿ ಸಿಎಂ ಯಾರು ಎನ್ನುವುದು ಅವರು ತೀರ್ಮಾನ ಮಾಡ್ತಾರೆ. ಈಗ ಸುಖಾಸುಮ್ಮನೆ ಏನೇನೋ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಬಾರದು. ಯಂತೀದ್ರ ಅವರು ಸೀನಿಯರ್ ಲೀಡರ್ ಇಂತಹ ಬಾಲಿಶಾ ಹೇಳಿಕೆ ನೀಡಬಾರದು. ಅವರು ಇಂದು ಹೇಳಿಕೆ ಕೊಟ್ಟಿದ್ದಾರೆ. ನಾಳೆ ನಾವು ಕೊಡ್ತಿವಿ, ಬೇರೆಯವರು ಇನ್ನೊಂದು ಹೇಳಿಕೆ ಕೊಡ್ತಾರೆ. ಈ ರೀತಿ ಹೇಳಿಕೆಗಳು ಪಕ್ಷಕ್ಕೆ ಡ್ಯಾಮೇಜ್ ಆಗುತ್ತವೆ ಎಂದರು.

2028 ಕ್ಕೂ ಕೂಡ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಡಿಕೆಶಿಯವರು ಹೇಳಿದ್ದಾರೆ. ಆ ನಿಟ್ಟಿನ ಕಡೆ ನಾವು ಗಮನ ನೀಡಬೇಕಿದೆ. ಮುಖ್ಯಮಂತ್ರಿ ಮಗ ಹೇಳಿಕೆ ನೀಡಿದ್ದಾರೆ ಎಂದು ಸುಮ್ಮನೆ ಇರಬೇಕಾ? ಎಂದು ಪ್ರಶ್ನಿಸಿದ ಶಿವಗಂಗಾ ನಾವು ಯಾರಾದ್ರು ಮಾತನಾಡಿದ್ರೆ ನೋಟೀಸ್ ಕೊಡುತ್ತಾರೆ. ಇದು ಸರಿಯಲ್ಲ. ಹಾಗಾಗಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ರೀತಿ ಅವರು ತುಂಬಾ ಸಾರಿ ಈ ರೀತಿ ಹೇಳಿಕೆ ನೀಡಿದ್ದಾರೆ. ಪಕ್ಷ ಇದ್ದರೆ ಮಾತ್ರ ನಾವು ಉಳಿದವರು, ಪಕ್ಷ ಇಲ್ಲ ಎಂದರೆ ಯಾವ ಉತ್ತರಾಧಿಕಾರಿ ಇರೋದಿಲ್ಲ. ಇವರೆಲ್ಲ ನವೆಂಬರ್ ಕ್ರಾಂತಿ ಅಂತರೇ ನಾನು ಡಿಸೆಂಬರ್ ಅಂತ ಹೇಳ್ತಿನಿ. ಡಿಸೆಂಬರ್ ಕ್ರಾಂತಿ ಹಾಗೇ ಆಗುತ್ತದೆ. ಹಾಗಾಗಿ ಡಿಸೆಂಬರ್ ನಂತರ ಮಾತನಾಡುತ್ತೇನೆ, ಈಗಾಗಲೇ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಡಿಸೆಂಬರ್‌ಗೆ ಡಿಕೆಶಿ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದರು.

ಇತ್ತೀಚಿನ ಸುದ್ದಿಗಳು

error: Content is protected !!