ಕಾಂಗ್ರೆಸ್ ಅಭಿಮಾನಿಯ ವಿಶೇಷ ಹೇರ್‌ಕಟ್

ದಾವಣಗೆರೆ: ಕಾಂಗ್ರೆಸ್ ಅಭಿಮಾನಿಯೊಬ್ಬ ವಿಶೇಷವಾಗಿ ತಲೆ ಕೂದಲು ಕತ್ತರಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾನೆ.
ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ಬಂದಿದ್ದು, ಸಿದ್ಧರಾಮಯ್ಯ ಇನ್ನೇನು ಮುಖ್ಯಮಂತ್ರಿ ಗಾದಿ ಏರಲಿದ್ದಾರೆ.

ಈ ಸಂದರ್ಭದಲ್ಲಿ ಈ ಅಭಿಮಾನಿ ಸಿದ್ದು, ಕಾಂಗ್ರೆಸ್, ಡಿಕೆಶಿ, ಖರ್ಗೆ ಎಂದು ಕಾಣುವಂತೆ ತನ್ನ ಕೂದಲುಗಳನ್ನು ಕತ್ತರಿಸಿಕೊಂಡು ಗಮನ ಸೆಳೆಯುತ್ತಿದ್ದಾನೆ. ಈತ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾನೆ.

