ಕಾಂಗ್ರೆಸ್‌ನವರಿಗೆ ಮಸೀದಿ ಕಟ್ಟುವ ಆಸಕ್ತಿಯಿದೆ.!ಅವರಿಗೆ ಮಂದಿರ ಕಟ್ಟಲು ವಿರೋಧವಿದೆ – ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್
ದಾವಣಗೆರೆ: ಕಾಂಗ್ರೆಸ್‌ನವರು ಮಸೀದಿ ಕಟ್ಟುವ ಆಸಕ್ತಿಯಿರುವವರು. ಅವರಿಗೆ ಮಂದಿರ ಕಟ್ಟುವ ಕುರಿತು ವಿರೋಧವಿದೆ. ಆದರೆ, ಈಗ ಇದ್ದಕ್ಕಿದ್ದಂತೆ ದೇವಸ್ಥಾನಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಕುಟುಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ದೇವಸ್ಥಾನ ಕೆಡವಿರುವ ಪ್ರಶ್ನೆಗೆ ಉತ್ತರಿಸಿದ ಅರುಣ್‌ಸಿಂಗ್, ಬಿಜೆಪಿಗರ ಮನಸ್ಸಿನಲ್ಲಿ ದೇವತೆಗಳು ಸದಾ ನೆಲೆಸಿರುತ್ತಾರೆ. ನಾವು ಯಾವಾಗಲೂ ಮಂದಿರ ಉಳಿಸುವ ಹಾಗೂ ಕಟ್ಟುವ ಕೆಲಸ ಮಾಡುತ್ತೇವೆ. ತೆರವುಗೊಳಿಸಿದ ಮಂದಿರದ ಜಾಗದಲ್ಲಿ ಭವ್ಯ ಮಂದಿರ ನಿರ್ಮಿಸುತ್ತೇವೆ ಎಂದರು.
ರಾಮಮಂದಿರ ನಿರ್ಮಾಣ ಆಗಬೇಕೆಂಬ ಕನಸು ಪ್ರತಿ ಭಾರತೀಯರದ್ದು. ಆದರೆ, ಕಾಂಗ್ರೆಸ್‌ನವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಬಂದ ತರುವಾಯ ರಾಮಮಂದಿರದ ಕನಸುಕಂಡಿದ್ದ ದೇಶದ ಜನರ ಆಶಯ ನನಸಾಗಿದೆ ಎಂದು ಹೇಳಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ರಾಜ್ಯ ಪ್ರವಾಸ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಡಿಯೂಪ್ಪ ಅವರು ಹಿರಿಯ ನಾಯಕರು. ಪ್ರಬುದ್ಧರು. ಅವರಿಗೆ ಪ್ರವಾಸ ಕುರಿತಂತೆ ಯಾವುದೇ ಗ್ರೀನ್ ಸಿಗ್ನಲ್ ನೀಡುವ ಅಗತ್ಯವಿಲ್ಲ ಎಂದರು.
ರಾಜ್ಯದಲ್ಲಿ ಸಿಎಂ ಬೊಮ್ಮಯಿ ನೇತೃತ್ವದಲ್ಲಿ ಉತ್ತಮ ಆಡಳಿತವಿದೆ. ಎಲ್ಲ ವರ್ಗಗಳ ಅಭಿವೃದ್ದಿಗಾಗಿ ವಿವಿಧ ಯೋಜನೆ ಸಮರ್ಪಕವಾಗಿ ಜಾರಿಯಾಗಿದ್ದು, ಬೊಮ್ಮಾಯಿ ಅವರು ಶ್ರೀಸಾಮಾನ್ಯರ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ದಾವಣಗೆರೆಯಲ್ಲಿ ನಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿಯಲ್ಲಿ ಪ್ರತಿ ಗ್ರಾಮದ ಮನೆಮನೆಗೂ ಪ್ರಧಾನಿಯವರ ಜನಪರ ಕಾರ್ಯಗಳನ್ನು ಮುಟ್ಟಿಸಬೇಕು ಎಂಬುದನ್ನು ಚರ್ಚಿಸಲಾಗುವುದು ಎಂದರು.