ಮೈಸೂರಿನಲ್ಲಿ ರೈಲು ಆಕ್ಸಿಡೆಂಟ್ ಗೆ ಹಳಿ ಮೇಲೆ ಮರದ ದಿಮ್ಮಿ ಇಟ್ಟ ಮೂವರು ಅರೆಸ್ಟ್..!!

conspiracy-for-train-accident-in-mysore
ಯಾರೋ ಕಿಡಿಗೇಡಿಗಳು ರೈಲು ಹಳಿಯ ಮೇಲೆ ಮರದ ದಿಮ್ಮಿ ಮತ್ತು ಕಬ್ಬಿಣದ ರಾಡ್ ಇಟ್ಟು ಅಪಘಾತಕ್ಕೆ ಪ್ರಯತ್ನ ಮಾಡಿದ್ದರು. ಅದೆಷ್ಟು ಹುಚ್ಚು ಅಂದ್ರೆ ಈ ಕೃತ್ಯ ಎಸಗುವ ಮುನ್ನ ಅವರು ವೀಡಿಯೋ ಕೂಡಾ ಮಾಡಿಕೊಂಡಿದ್ದರು. ಬೇರೊಂದು ರೈಲು ಹಳಿ ಮೇಲೆ ಹೋಗುವುದನ್ನು ವೀಡಿಯೋ ಮಾಡಿಕೊಂಡು ನಂತರ ಅಪಘಾತಕ್ಕೆ ಸಂಚು ರೂಪಿಸಿದ್ದರು. ಘಟನೆ ಹಿನ್ನೆಲೆಯಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪಘಾತ ನಡೆಯಲು ಹಳಿ ಮೇಲೆ ಮರದ ದಿಮ್ಮಿ ಮತ್ತು ಕಬ್ಬಿಣದ ರಾಡ್ ಇಟ್ಟು ಪ್ರಯತ್ನಿಸಿದರ ವಿಡಿಯೋ ಕೂಡಾ ಪತ್ತೆಯಾಗಿದೆ.ಆರೋಪಿಗಳು ಯಾವ ರೀತಿ ಅಪಘಾತಕ್ಕೆ ಸಂಚು ರೂಪಿಸಿದ್ದರು : ಆರೋಪಿಗಳೆನ್ನಲಾದ ಸೋಮಯ್ ಮರಾಂಡಿ, ಭಜನ್ ಮುರ್ಮು, ದಸಮತ್ ಮರಾಂಡಿ ರೈಲು ಹಳಿಯ ಮೇಲೆ ಮರದ ದಿಮ್ಮಿ ಮತ್ತು ಕಬ್ಬಿಣದ ರಾಡ್ ಇಟ್ಟು ಅಪಘಾತಕ್ಕೆ ಯತ್ನಿಸಿದ್ದರು. ಬೇರೊಂದು ರೈಲು ಹಳಿ ಮೇಲೆ ಹೋಗುವುದನ್ನು ವೀಡಿಯೋ ಮಾಡಿಕೊಂಡಿದ್ದರು. ವೀಡಿಯೋ ಮಾಡಿ ಸಂಚು ರೂಪಿಸಿದ್ದರು.ಅದೃಷ್ಟವಶಾತ್ ತಪ್ಪಿದ ದುರಂತ: ಚಾಮರಾಜನಗರದಿಂದ ಮೈಸೂರಿಗೆ ಬರುತ್ತಿದ್ದ ಎಕ್ಸ್‌ಪ್ರೆಸ್ ರೈಲು ಗಾಡಿ ಸಂ. 06275ರ ಅಪಘಾತಕ್ಕೆ ಸಂಚು ರೂಪಿಸಲಾಗಿತ್ತು. ಈ ಟ್ರೈನಿನಲ್ಲಿ ಸುಮಾರು 400ಕ್ಕೂ ಹೆಚ್ಚು ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಆದರೆ ಅದೃಷ್ಟವಶಾತ್ ಲೋಕೋಪೈಲೆಟ್ (ಚಾಲಕ) ನ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ.ಈಗ ಸದ್ಯ ಮೂವರು ಆರೋಪಿಗಳನ್ನು ರೈಲ್ವೆ ಸಂರಕ್ಷಣಾ ಪಡೆ ಮತ್ತು ಸರ್ಕಾರಿ ರೈಲ್ವೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

 
                         
                       
                       
                       
                       
                       
                       
                      