Cooperative: ಸಹಕಾರಿ ಕ್ಷೇತ್ರದ ಸಮಸ್ಯೆ ಅರಿಯಲು ರಾಜ್ಯಾದ್ಯಂತ ಕರಾಸೌಸಂಸನಿ ಸಭೆ

IMG-20250722-WA0024

ದಾವಣಗೆರೆ: (Cooperative) ಕರ್ನಾಟಕ ರಾಜ್ಯ ಸೌಹಾರ್ದ  ಸಂಯುಕ್ತ ಸಹಕಾರಿ ನಿಯಮಿತದ ನೇತೃತ್ವದಲ್ಲಿ ರಾಜ್ಯಾದ್ಯಂತ ಸೌಹಾರ್ದ ಕಾಯಿದೆಯ ರಜತ ಮಹೋತ್ಸವದ ಸಂಭ್ರಮ ಮತ್ತು ಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಸಭೆಯಲ್ಲಿ ಸಹಕಾರ ಕ್ಷೇತ್ರದ ಜ್ವಲಂತ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಜತೆ ಸಹಕಾರ ಕ್ಷೇತ್ರ ಅಭಿವೃದ್ದಿಯತ್ತ ಗಮನ ಹರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ.ನಂಜನಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಯುಕ್ತ ಸಹಕಾರಿ ನಿಯಮಿತದ ಸಾಮಾನ್ಯ ಸಭೆ ನಡೆಸುವ ಮೊದಲು ರಾಜಾದ್ಯಂತ ಪ್ರವಾಸ ಕೈಗೊಂಡು ಸಭೆಗಳನ್ನು ನಡೆಸಲಾಗುತ್ತಿದೆ. ಅದರಂತೆ ಜುಲೈ 21ರ ಸೋಮವಾರ ದಾವಣಗೆರೆಯ ಪಿ.ಬಿ.ರಸ್ತೆಯಲ್ಲಿನ ಶ್ರೀಗಂಧ ರೆಸಿಡೆನ್ಸಿಯಲ್ಲಿ ಸಭೆ ನಡೆಸಲಾಗುತ್ತಿದೆ. ಉಳಿದಂತೆ ರಾಜ್ಯ ವಿವಿಧ ಜಿಲ್ಲೆಗಳಲ್ಲೂ ಸಭೆಗಳನ್ನು ನಡೆಸಲಾಗುವುದು ಎಂದರು.

2025ರ ಜನವರಿ 1ಕ್ಕೆ ಸಹಕಾರಿ ಕಾಯಿದೆಯು ಜಾರಿಗೆ ಬಂದು 25 ವರ್ಷಗಳು ಆಗಿವೆ. ಈ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಆಚರಿಸಲಾಗುವುದು. ನಿಯಮಿತವು ಶಾಸನ ಬದ್ದ ಕಾರ್ಯಗಳ ಜತೆ ತರಬೇತಿ, ಶಿಕ್ಷಣ ಹಾಗೂ ಪ್ರಚಾರದ ಚಟುವಟಿಕೆಗಳನ್ನುಇ ನಡೆಸುತ್ತಾ ಬಂದಿದೆ. ಇದರೊಂದಿಗೆ ಸಹಕಾರಿ ನಿಯಮಿತಗಳನ್ನು ಪ್ರಗತಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಸಹಕಾರಿಯ ನಿರ್ದೇಶಕ ಎಂ.ಆರ್.ಪ್ರಭುದೇವ್ ಮಾತನಾಡಿ, ರಾಜ್ಯದಲ್ಲಿ ಸಹಕಾರಿಗಳ ಸಂಖ್ಯೆ 6514 ಇದ್ದು, ಶೇರು ಬಂಡವಾಳ 1,630 ಕೋಟಿ ಆಗಿದೆ. ಠೇವಣಿ 44,793 ಕೋಟಿ ಇದ್ದು, 35,747 ಕೋಟಿ ಸಾಲ ನೀಡಲಾಗಿದೆ. ಕಾಯ್ದಿಟ್ಟ ನಿಧಗೆ 3,992 ಕೋಟಿ ಇರಿಸಲಾಗಿದೆ. 51,064 ಕೋಟಿ ರೂ. ದುಡಿಯುವ ಬಂಡವಾಳವಾಗಿದೆ. ಒಟ್ಟಾರೆ 735 ಕೋಟಿ ರೂ ಲಾಭ ಗಳಿಸಲಾಗಿದೆ. ರಾಜಾದ್ಯಂತ 75ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗದಲ್ಲಿದ್ದಾರೆ. ಇದಲ್ಲದೇ ಸೌಹಾರ್ದ ಸಹಕಾರಿಗಳ ಮೂಲಕ 1710 ಕೇಂದ್ರಗಳಲ್ಲಿ ಇ-ಸ್ಟಾö್ಯಂಪಿAಗ್ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ ಎಂದು ವಿವರಿಸಿದರು.

ಸಹಕಾರಿ ಕ್ಷೇತ್ರ ಬಲಪಡಿಸಬೇಕಾದರೆ ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಗಮನ ಸೆಳೆಯುವ, ಜನಸಾಮಾನ್ಯರಲ್ಲಿ ಸಹಕಾರಿ ಕ್ಷೇತ್ರದ ಬಗ್ಗೆ ಒಲವು ಮೂಡಿಸುವ ಸಕಾರಾತ್ಮಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಒಟ್ಟಾರೆ ದೇಶದ ಸಹಕಾರ ಚಳುವಳಿಯಲ್ಲಿ  ಸೌಹಾರ್ದ ಸಹಕಾರ ಕ್ಷೇತ್ರದ ಸ್ವಾಯುತ್ತತೆ, ಸ್ವಯಂ ಆಡಳಿತ, ಸ್ವಯಂ ನಿಯಂತ್ರಣ ಹೊಸ ಮಾದರಿಗೆ ಕಾರಣ ಆಗಬೇಕೆನ್ನುವುದೇ ಸಂಯುಕ್ತ ಸಹಕಾರಿಯ ಆಶಯ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಟಿ.ವೀರೇಶ್, ಜಿ.ಎಂ.ರುದ್ರೇಗೌಡ, ಟಿ.ಎಂ.ಪಾಲಾಕ್ಷಪ್ಪ, ನಾಗರಾಜ್ ಮೂರ್ತಿ, ಎಸ್.ಶ್ರೀಧರ್, ಎಸ್.ಶಶಿಕುಮಾರ್ ಇತರರು ಇದ್ದರು.

error: Content is protected !!