Police Leftovers: ಪೊಲೀಸರು ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ.! ಗೃಹ ಸಚಿವ ಅರಗ ಜ್ಞಾನೇಂದ್ರ.! ಪೋಲೀಸ್ ವಲಯದಲ್ಲಿ ಗೃಹ ಸಚಿವರ ವಿರುದ್ದ ತೆರೆಮರೆಯಲ್ಲಿ ಆಕ್ರೋಶ.!

home minister aragha jnanendra

ಬೆಂಗಳೂರು: ಪೊಲೀಸರಿಗೆ ಕೈತುಂಬ ಸಂಬಳ ಕೊಡುತ್ತಿದ್ದೇವೆ. ಯಾವನಿಗೂ ಸಂಬಳದಲ್ಲಿ ಬದುಕಬೇಕೆಂದು ಇಲ್ಲ. ಎಲ್ಲರೂ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ. ಪೊಲೀಸರನ್ನು ನಂಬಿ ಜನರು ಬದುಕುತ್ತಿದ್ದಾರೆ. ಯೋಗ್ಯತೆ ಇಲ್ಲದೇ ಇದ್ರೆ ಯೂನಿಫಾರ್ಮ್ ಬಿಚ್ಚಿಟ್ಟು ಹೋಗಲಿ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತಂತೆ ಗೃಹಸಚಿವರು ಪೊಲೀಸ್ ಅಧಿಕಾರಿಯನ್ನು ತರಾಟೆಗೆತ್ತಿಕೊಂಡಿರುವ ವೀಡಿಯೊ ಇದೀಗ ವೈರಲ್ ಆಗುತ್ತಿದ್ದು, ಅದರಲ್ಲಿ ಇಲಾಖಾ ಕಾರ್ಯವೈಖರಿ ಬಗ್ಗೆ ಗರಂ ಆಗಿದ್ದಾರೆ. ಕೊಟ್ಟಿಗೆಯಿಂದ ತಲವಾರು ತೋರಿಸಿ ದನ ಕೊಂಡು ಹೋಗುತ್ತಿದ್ದಾರೆ. ಕೇಸ್ ಸ್ಟಡಿ ಮಾಡಿ ನನಗೆ ಹೇಳಬೇಕು. ಹೊಸ ಕಾಯ್ದೆ ಬಂದರೂ ಯಾವ ಕಾರಣಕ್ಕೆ ಬಿಡುಗಡೆ ಮಾಡಿದರೂ ಎಂದು ನನಗೆ ಹೇಳಬೇಕು. ಸರ್ಕಲ್ ಇನ್ಸ್‌ಪೆಕ್ಟರ್ ನಿಮಗೆ ಮಿಸ್‌ಗೈಡ್ ಮಾಡಿದ್ದಾರೆ. ರಾಜ್ಯದಾದ್ಯಂತ ಇಲಾಖೆಗೆ ಸ್ಪಷ್ಟ ಮಾಹಿತಿ ನೀಡಿದ್ದು ನಾಳೆಯಿಂದ ಒಂದು ವಾಹನ ಕೂಡಾ ಮೂವ್ ಆಗಬಾರದು ಎಂದು ತಾಕೀತು ಮಾಡಿದ್ದಾರೆ.

ಹೊಸ ಕಾನೂನು ಮಾಡಿ ಸರ್ಕಾರ ನಿಮ್ಮ ಕೈಗೆ ಕೊಟ್ಟಿದೆ. ನೀವು ಕೆಲಸ ಮಾಡಲ್ಲ ಅಂದ್ರೆ ನಾವು ಯಾಕೆ ಕಾನೂನು ತರಬೇಕು? ನಿಮ್ಮ ಪೊಲೀಸರು ಲಂಚ ತಿಂದುಕೊಂಡು ಬಿದ್ದಿದ್ದಾರೆ. ಪೊಲೀಸರಿಗೆ ಆತ್ಮಗೌರವ ಬೇಡ್ವಾ? ಕೆಟ್ಟು ಹಾಳಾಗಿ ಹೋಗಿದ್ದಾರೆ ಪೊಲೀಸರು, ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಫೋನ್‌ನಲ್ಲಿ ಮಾತನಾಡುವ ವೀಡಿಯೋ ವೈರಲ್ ಆಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!