ದಾವಣಗೆರೆಯಲ್ಲಿ ಕೊರೊನಾ ಸೊಂಕು ದಿನೆ ದಿನೇ ಹೆಚ್ಚಳ ಕೊವಿಡ್ ಬಗ್ಗೆ ಜಾಗೃತರಾಗಿ ಜಾಗೃತಿ ಮೂಡಿಸಿ ದಾವಣಗೆರೆಯನ್ನ ಉಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಭೀಳಗಿ

ಯುಗಾದಿ ಹಬ್ಬದ ದಿನ 63 ಸೊಂಕಿತರು ಪತ್ತೆ.
ದಾವಣಗೆರೆ ಜಿಲ್ಲೆಯಲ್ಲಿ ಈ ಹಿಂದೆ ಕೇವಲ 10-50 ಜನರಿಗೆ ಕೊವಿಡ್ ಸೊಂಕು ತಗುಲಿತ್ತು, ಆದ್ರೆ 2021 ರ ಏಪ್ರಿಲ್ ತಿಂಗಳ ಯುಗಾದಿ ಹಬ್ಬದ ದಿನದಂದು ದಾವಣಗೆರೆ ಜಿಲ್ಲೆಯಲ್ಲಿ 63 ಕೊವಿಡ್ ಸೊಂಕಿತರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ: ನಾಗರಾಜ್ ತಿಳಿಸಿದ್ದಾರೆ.
ಇಂದು ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮುಸ್ಲಿಂ ಬಾಂಧವರಿಗಾಗಿ ಆಯೋಜಿಸಿದ್ದ ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಕೊವಿಡ್ ಬಗ್ಗೆ ಹಾಗೂ ಕೊರೊನಾ ಲಸಿಕೆ ಬಗ್ಗೆ ಮಾಹಿತಿ ನೀಡಿದ್ರು.ದಾವಣಗೆರೆ ಹಳೆ ಭಾಗದ ಜನರು ಕೊವಿಡ್ ಲಸಿಕೆ ಹಾಕಿಸಿಕೊಳ್ಳಲು ಹೆಚ್ಚಾಗಿ ಬರುತ್ತಿಲ್ಲ, ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ, ದೈರ್ಯವಾಗಿ ಎಲ್ಲರೂ ಆಸ್ಪತ್ರೆಗೆ ಬಂದು ಲಸಿಕೆ ಹಾಕಿಸಿ ಕೊಳ್ಳ ಲು ಮನವಿ ಮಾಡಿದ್ರು.

ಸಭೆಗೆ ದಾವಣಗೆರೆಯ ವಿವಿಧ ಮಸೀದಿಯ ದರ್ಮಗುರುಗಳು, ದಾವಣಗೆರೆಯ ಹಳೇ ಭಾಗದ ಪಾಲಿಕೆ ಸದಸ್ಯರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಡಾ: ಮೀನಾಕ್ಷಿ ಮಾತನಾಡಿ ಲಸಿಕೆ ಬಗ್ಗೆ ಕೆಲವರು ಅಡ್ಡಪರಿಣಾಮ ಇದೆ ಎಂದು ಭಾವಿಸಿದ್ದಾರೆ, ಆದ್ರೆ ಯಾರೂ ಭಯ ಪಡುವ ಅಗತ್ಯವಿಲ್ಲ. ದಾವಣಗೆರೆಯ ನಗರ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಳ್ಳಿ. ನಿಮ್ಮ ಏರಿಯಾದಲ್ಲಿ 45 ವರ್ಷದ ಮೇಲ್ಪಟ್ಟವರು ದೈರ್ಯವಾಗಿ ಲಸಿಕೆ ಹಾಕಿಸಿಕೊಳ್ಳಿ ಎಂದರು.ಈ ಲಸಿಕೆ 10 ರಲ್ಲಿ ಒಂದು ಹೇಗೆ ಬೇರೆ ಬೇರೆ ಕಾಯಿಲೆಗಳಿಗೆ ಲಸಿಕೆ ಹಾಕಿಸಿಕೊಳ್ಳುತ್ತಿರೋ ಅದೇ ರೀತಿ ಕೊವಿಡ್ ಲಸಿಕೆ ಹಾಕಿಸಕೊಳ್ಳಿ ಎಂದರು.
ದಾವಣಗೆರೆ ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ:
ಸಭೆಯನ್ನ ಉದ್ದೇಶಿಸಿ ಮಾತನಾಡುವ ಮುನ್ನ ಯುಗಾದಿ ಹಬ್ಬ ಹಾಗೂ ರಂಜಾನ್ ಹಬ್ಬದ ಶುಭಾಶಯಗಳು ತಿಳಿಸಿದ್ರು, ಧರ್ಮಗುರುಗಳು ತಮ್ಮ ಮಸೀದಿಗಳಲ್ಲೊ ಬರುವ ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು, ಈ ಲಸಿಕೆಯಿಂದ ಕೊವಿಡ್ ನಿಂದ ಗುಣಮುಖವಾಗಬಹುದು. ಎಲ್ಲರೂ ಲಸಿಕೆಯನ್ನ ಹಾಕಿಸಿಕೊಳ್ಳಬೇಕು ಎಂದು ಮನವಿ ಮಡಿದರು. ಕೆಲ ಜನರಿಗೆ ಲಸಿಕೆಯಿಂದ ತೊಂದರೆ ಆಗಿರಬಹುದು ಆದ್ರೆ ಅದು ಕೆಲವರ ಇಚ್ಚಾ ಶಕ್ತಿಯಿಂದ ತೊಂದರೆಯಾಗಿದೆ. ದಾವಣಗೆರೆಯ ಆಜಾದ್ ನಗರದಲ್ಲಿ ಜನರಿಗೆ ಕೊವಿಡ್ ಭಯವಿಲ್ಲದಂತಾಗಿದೆ ಯಾಕೆ ಎಂದು ಗೊತ್ತಿಲ್ಲ, ಕಳೆದ ಭಾರಿ ದಾವಣಗೆರೆಯಲ್ಲಿ 264 ಜನ ಪ್ರಾಣತೆತ್ತಿದ್ದಾರೆ. ನಿಮ್ಮ ಕೆಲ ಏರಿಯಾದಲ್ಲಿ ಜನರು ಮಾಸ್ಕ್ ಧರಿಸದೆ ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ ಅವರಿಗೆಲ್ಲಾ ಬುದ್ದಿ ಮಾತು ಹೇಳಿ ಎಂದುಮನವಿ ಮಾಡಿದ್ರು.ದಾವಣಗೆರೆಯಲ್ಲಿ ಮಾರ್ಷಲ್ ಗಳನ್ನು ತಯಾರು ಮಾಡಲಾಗುತ್ತಿದೆ, ಯಾರೂ ಕೊವಿಡ್ ನೀತಿಯನ್ನ ಉಲ್ಲಂಘಿಸುತ್ತಾರೆ ಅವರಿಗೆ ದಂಡವನ್ನ ವಸೂಲಿ ಮಾಡಲಾಗುತ್ತೆ, ಮಹಾರಾಷ್ಟ್ರದ ರೀತಿ ಇಲ್ಲೂ ಕೂಡ ಕೊವಿಡ್ ಬರುತ್ತಿದೆ ಜನರು ಆದಷ್ಟು ಹೊರಗಡೆ ಸಂಚಾರವನ್ನ ನಿಷೇಧ ಮಾಡಿ ಎಂದು ದಾವಣಗೆರೆ ಎಸ್ ಪಿ ಮನವಿ ಮಾಡಿದ್ರು.

ಮುಸ್ಲಿಂ ಬಾಂಧವರಿಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಯುಗಾದಿ ಹಬ್ಬದ ಶುಭಾಶಯಗಳನ್ನ ತಿಳಿಸಿ ಮಾತನಾಡಿ. ನಮಗೆ ಕಳೇದ ಮಾರ್ಚ್ ನಿಂದ ಇಲ್ಲಿಯವರೆಗೆ ರಜೆಯನ್ನ ಪಡೆಯದೇ ನಾವು ಕೆಲಸ ಮಾಡುತ್ತಿದ್ದೆವೆ, ಕಳೆದ ವರ್ಷ ನಿಮ್ಮ ಏರಿಯಾ ಓರ್ವ ಮಹಿಳೆ ನಮ್ಮನ್ನ ಮನೆಗೆ ಕರೆದು ಆಶೀರ್ವಾದ ಮಾಡಿದ್ದರಿಂದ ನನಗೆ ಇದುವರೆಗೂ ಕೊವಿಡ್ ಪಾಸಿಟಿವ್ ಬಂದಿಲ್ಲ, ನಮ್ಮ ಪಿಎ ಮರುಳಸಿದ್ದಪ್ಪ ಪ್ರತಿನಿತ್ಯ ಕಾರನ್ನು ತೊಳೆದು ತುಂಬಾ ಜಾಗರೂಕತೆಯಿಂದ ಇರ್ತಾ ಇದ್ದರು ಎಂದು ಕಳೇದ ವರ್ಷದ ಕೊವಿಡ್ ಬಗ್ಗೆ ಮೆಲುಕು ಹಾಕಿದರು.ನಾವು ದೇವರ ದಯೆ ಯಿಂದ ಎಲ್ಲರೂ ಆರೋಗ್ಯವಾಗಿದ್ದೆವೆ. ನಾವೂ ನಿಮ್ಮಲ್ಲಿ ಕೇಳುವುದ ಇಷ್ಟೇ ಹಳೇ ದಾವಣಗೆರೆಯಲ್ಲಿ ಕೊವಿಡ್ ಸೊಂಕಿನ ಬಗ್ಗೆ ಯಾರೂ ಜಾಗರೂಕತೆಯಿಂದ ವರ್ತಿಸುತ್ತಿಲ್ಲ. ನಮಗೆ ತುಂಬಾ ಆಶ್ಚರ್ಯಕರವಾಗಿದೆ ಅಲ್ಲಿ ಯಾಕೆ ಈ ರೀತಿ ಇದ್ದಾರೆ ಎಂದು. ಕಳೆದ ವರ್ಷ ಕೊವಿಡ್ ನಿಂದ ಸೊಂಕಿತರಾದವರು ತುಂಬಾ ಕಷ್ಟಗಳನ್ನು ಅನುಭವಿಸಿದ್ದಾರೆ, ಅದ್ದರಿಂದ ಧರ್ಮಗುರುಗಳು ನಿಮ್ಮ
ಮಸೀದಿಯಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸುವ ಭಾಂಧವರಿಗೆ ಹೇಳಿ ಯಾವುದೇ ರಿತಿಯ ಹೆದರಿಕೆ ಇಲ್ಕದೆ ಕೊವಿಡ್ ಲಸಿಕೆಯನ್ಬ ಹಾಕಿಸಿ ಕೊಳ್ಳಿ ಎಂದು ಮನವಿ ಮಾಡುವಂತೆ ವಿನಂತಿಸಿದ್ರು.
ನಾವು ಮನಸ್ಸು ಮಾಡಿ ಪ್ರತಿಯೊಬ್ಬರನ್ನ ತಪಾಸಣೆ ಮಾಡಿದರೆ 1000 ಜನ ಸೊಂಕಿತರು ಪತ್ತೆಯಾಗುತ್ತಾರೆ, ನಮಗೆ ಇರುವ ಅಧಿಕಾರ ಬಳಸಬಹುದು, ಆದ್ರೆ ನಾವು ಪ್ರೀತಿಯಿಂದ ವಿಶ್ವಾಸದಿಂದ ನಿಮ್ಮಲ್ಲಿ ಮನವಿ ಮಾಡುತ್ತೆವೆ ಕೊವಿಡ್ ಬಗ್ಗೆ ಜಾಗೃತಿ ಯಿಂದ ನಡೆದುಕೊಳ್ಳಿ,
ನಾಳೆಯಿಂದ ರಂಜಾನ ಪ್ರಾರಂಭವಾಗುತ್ತಿದೆ, ರೋಜಾ ಮುಗಿದ ನಂತರ ತುಂಬಾ ಜನರು ಸೇರಿಕೊಳ್ಳುತ್ತಾರೆ, ಯಾರಾದರೂ ಒಬ್ಬರು ಆದರಲ್ಲಿ ಇದ್ದರೆ ಯೋಚನೆ ಮಾಡಿ, ಇದೆ ರೀತಿ ಮುಂದುವರೆದರೆ ನಾವೂ ಕೂಡ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕಾಗುತ್ತೆ ಎಂದರು,
ಇದೇ ಸಂದರ್ಬದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಯಾರಿಗೆಲ್ಲಾ ಕೊವಿಡ್ ಲಸಿಕೆಯನ್ನ ಹಾಕಿಧದೆವೆ ಎಂದು ಮಾಹಿತಿ ನೀಡಿದರು, ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರಿಗೆ ಇದೇ ವೇಳೆ ನಿವುಗಳು ನಿಮ್ಮ ಏರಿಯಾದ ಜನರಿಗೆ ಮನವರಿಕೆ ಮಾಡಿಕೊಟ್ಟು ಲಸಿಕೆ ಅಭಿಯಾನದಲ್ಲಿ ಭಾಗಿಯಾಗಿ, ನೀವು ಎಲ್ಲಿ ಹೇಳುತ್ತಿರಾ ಅಲ್ಲಿ ನಾವುಗಳು ಬಂಧು ಲಸಿಕೆಯನ್ನ ಹಾಕುತ್ತೆವೆ.
ಕೊವಿಡ್ ಬಗ್ಗೆ ಜಾಗೃತರಾಗಿ ಜಾಗೃತಿ ಮೂಡಿಸಿ ದಾವಣಗೆರೆಯನ್ನ ಉಳಿಸಿ
ಮಹಾಂತೇಶ್ ಭೀಳಗಿ
ದಾವಣಗೆರೆ ಜಿಲ್ಲಾಧಿಕಾರಿ.
ನಾನು ಕೊವಿಡ್ ಲಸಿಕೆ ಹಾಕಿಸಿಕೊಂಡೆ, ಎರಡು ದಿನ ನೋವಿತ್ತು ಗುಳಿಗೆ ತೆಗೆದುಕೊಂಡಿದ್ದೆನೆ ಆರೋಗ್ಯವಾಗಿದ್ದೆನೆ ಯಾವುದೇ ಭಯವಿಲ್ಲ ನಮ್ಮ ಮಸೀದಿಯಲ್ಲಿ ನಾನು ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದ್ದೆನೆ ಎಂದು ಹಿರಿಯರಾದಂತಹ ಖಾಸಿಂಸಾಬ್ ತಮ್ಮ ಅಭಿಪ್ರಾಯ ತಿಳಿಸಿದ್ರು.
ಸಭೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಎಸ್ ಟಿ ವಿರೇಶ್, ಪಾಲಿಕೆ ಸದಸ್ಯರುಗಳು, ಜಿಲ್ಲಾಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳು ನಗರದಹಿರಿಯ ಮೌಲಾನಾಗಳು ಧರ್ಮಗುರುಗಳು ಭಾಗವಹಿಸಿದ್ದರು.
ಕಳೆದ ಭಾರಿ ಕೊವಿಡ್ ನಿಂದ ಸ್ಮಶಾನದಲ್ಲಿ ಸತ್ತ ಹೇಣಗಳು ಎಷ್ಟು ಹೋಗುತ್ತೆ ಎಂಬುದನ್ನ ನಿಂತು ಎಣಿಸಿದ್ದೆವೆ, ಕೊವಿಡ್ ನಿಂದ ಸತ್ತವರ ಬಗ್ಗೆ ಹೇಗೆ ಪ್ರಾಣತೆತ್ತರು ಎಂದು ಕಂಡಿದ್ದೆವೆ, ಎಂದು ಜಿಲ್ಲಾಧಿಕಾರಿ ತಮ್ಮ ಅನುಭವ ಹಂಚಿಕೊಂಡು, ನಮಗೆ ಇರುವ ಕಾನೂನಿನಡಿಯಲ್ಲಿ ಹೇಗೆ ಬೇಕಾದರೂ ಮಾಡಬಹುದು ಆದರೆ ನಾವೂ ಪ್ರತೀ ವಿಶ್ವಾಸದಿಂದ ಎಲ್ಲರಲ್ಲೂ ಮನವರಿಕೆ ಮಾಡುತ್ತೆವೆ ಕೊರೊನಾ ಬಗ್ಗೆ ತುಂಬಾ ಜಾಗರೂಕತೆಯಿಂದ ಇರಲೇಬೇಕು ಎಂದರು.