ಕೊರೊನಾ ನಿರ್ಮೂಲನೆಗೆ ಹೊಮ ಹವನ ನೇರವೇರಿಸಿದ ಭಕ್ತರು

ದಾವಣಗೆರೆ: ಹಳೇ ಕುಂದವಾಡ ಗ್ರಾಮದಲ್ಲಿನ ಶ್ರೀ ಸದ್ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕೊರೊನಾ ಮಹಾಮಾರಿ ಬಹುಬೇಗ ನಿರ್ಮೂಲನೆ ಆಗಲೆಂದು ಹಾಗೂ ಮನುಕುಲ ಮತ್ತು ಸಕಲ ಜೀವರಾಶಿಗಳಿಗೂ ಲೇಸುಂಟಾಗಲೆಂದು ಪ್ರಾರ್ಥಿಸಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಹೋಮ, ಪೂಜಾ ಕೈಂಕರ್ಯಗಳು ಇಂದು ಶನಿವಾರ ನೆರವೇರಿದವು.
ಇಂದು ಮುಂಜಾನೆಯಿಂದಲ್ಲೇ ಗುರುವಿಗೆ ವಿಶೇಷ ಪೂಜೆ, ಹೂವಿನ ಅಲಂಕಾರಗೊಳಿಸಲಾಗಿತ್ತು. ಪ್ರತ್ಯಂಗಿರ ಹೋಮ, ನವಗ್ರಹ ಸಹಿತ ಗಣ ಹೋಮ ಸೇರಿದಂತೆ ವಿಶೇಷ ಹೋಮ ನೆರವೇರಿತು.
ಶೃಂಗೇರಿಯ ವೇದಬ್ರಹ್ಮ ಶ್ರೀ ರವೀಂದ್ರ ಭಟ್ ಅವರ ನೇತೃತ್ವದಲ್ಲಿ ಹಾಗೂ ಹಳೇ ಕುಂದವಾಡ ಶ್ರೀಕ್ಷೇತ್ರದ ಧರ್ಮಾಧಿಕಾರಿ ಪೂಜ್ಯ ಶ್ರೀ ರಾಜಣ್ಣ ಅವರ ಸಾನಿಧ್ಯದಲ್ಲಿ ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯಗಳು ನೆರವೇರಿದವು.
ಈ ಪೂಜಾ ಕೈಂಕರ್ಯಗಳಲ್ಲಿ ದೇವಸ್ಥಾನದ ಪುರೋಹಿತ ವರ್ಗದವರು ಮಾತ್ರ ಭಾಗವಹಿಸಿದ್ದರು.